ಕರ್ನಾಟಕ

karnataka

ETV Bharat / bharat

ವಾಹನ ಸವಾರರಿಗೆ ಗುಡ್​ ನ್ಯೂಸ್​: ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಇಳಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಹಾಗೂ ಅಮೆರಿಕ - ಇರಾನ್​ ನಡುವಣ ಬಿಕ್ಕಟ್ಟು ತಾತ್ಕಾಲಿಕ ಶಮನ ಆಗಿರುವ ಹಿನ್ನೆಲೆಯಲ್ಲಿ ಸತತವಾಗಿ ಏರಿಕೆಯತ್ತ ಮುಖ ಮಾಡಿದ್ದ ಪೆಟ್ರೋಲ್​ ಡೀಸೆಲ್​ ದರದಲ್ಲಿ ಇಳಿಕೆ ಆಗುತ್ತಿದೆ.

By

Published : Jan 17, 2020, 10:24 AM IST

decrease-petrol-price
ವಾಹನ ಸವಾರರಿಗೆ ಗುಡ್​ ನ್ಯೂಸ್​: ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಇಳಿಕೆ....

ನವದೆಹಲಿ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಹಾಗೂ ಅಮೆರಿಕ - ಇರಾನ್​ ನಡುವಣ ಬಿಕ್ಕಟ್ಟು ತಾತ್ಕಾಲಿಕ ಶಮನ ಆಗಿರುವ ಹಿನ್ನೆಲೆಯಲ್ಲಿ ಸತತವಾಗಿ ಏರಿಕೆಯತ್ತ ಮುಖ ಮಾಡಿದ್ದ ಪೆಟ್ರೋಲ್​ ಡೀಸೆಲ್​ ದರದಲ್ಲಿ ಇಳಿಕೆ ಆಗುತ್ತಿದೆ.

ಜನವರಿ 12 ರಿಂದ ಸತತವಾಗಿ ಸರಾಸರಿ 10 ಪೈಸೆಯಷ್ಟು ಕಳೆದು ಐದು ದಿನಗಳಿಂದ ಇಳಿಕೆ ಆಗಿದೆ. ಇದು ವಾಹನ ಸವಾರರನ್ನು ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ. ಬೆಂಗಳೂರಿನಲ್ಲಿ ಪೆಟ್ರೋಲ್​ ದರ 10 ಪೈಸೆ ಇಳಿಕೆ ಆಗುವುದರೊಂದಿಗೆ 77.93 ರೂ.ಗೆ ನಿಗದಿಯಾಗಿದೆ. ನಿನ್ನೆ ಲೀಟರ್​ ಪೆಟ್ರೋಲ್​ಗೆ 40 ಪೈಸೆ ಇಳಿಕೆ ಆಗಿತ್ತು.

80 ರೂ, ಆಸುಪಾಸಿಗೆ ಬಂದಿದ್ದ ಪೆಟ್ರೋಲ್​ ​ ಬೆಲೆ ಮತ್ತೆ 78 ರೂ ಗಿಂತ ಕೆಳಗಿಳಿದಿದೆ. ಇನ್ನು ಡೀಸೆಲ್​ ದರ ಲೀಟರ್​​ 72 ರ ಆಸುಪಾಸು ಇದ್ದದ್ದು, ಇಂದು 71.06 ರೂ. ಇಳಿಕೆ ಕಂಡಿದೆ.

ABOUT THE AUTHOR

...view details