ಕರ್ನಾಟಕ

karnataka

ETV Bharat / bharat

ರಿಪಬ್ಲಿಕನ್ ಪಕ್ಷದ ನಾಮ ನಿರ್ದೇಶನ ಸ್ವೀಕರಿಸಿದ ಟ್ರಂಪ್​​ - Donald Trump

ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ನಾಮ ನಿರ್ದೇಶನ ಆಹ್ವಾನವನ್ನು ಸ್ವೀಕರಿಸುವ ಮೂಲಕ, ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷ ಗಾದಿ ಮೇಲೆ ಕೂರಲು ಟ್ರಂಪ್ ಸಿದ್ಧತೆ ನಡೆಸಿದ್ದಾರೆ.

ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

By

Published : Aug 29, 2020, 12:08 AM IST

ನವದೆಹಲಿ:ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶಕ್ಕೆ ತೆರೆ ಬೀಳುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಅವರು ಆಡಳಿತ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಮರು ನಾಮನಿರ್ದೇಶನವನ್ನು ಇಂದು ಅಧಿಕೃತವಾಗಿ ಸ್ವೀಕರಿಸಿದ್ದಾರೆ.

ಈ ಮೂಲಕ ಟ್ರಂಪ್​ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷ ಪಟ್ಟಕ್ಕೆ ಏರಲು ಮತ್ತೆ ಸಿದ್ಧತೆ ನಡೆಸಿದ್ದಾರೆ. ಇವಾಂಕಾ ಟ್ರಂಪ್ ತಮ್ಮ ತಂದೆಯನ್ನು ಶ್ವೇತಭವನದ ಲಾನ್ಸ್‌ನಲ್ಲಿ ಪರಿಚಯಿಸಿದರು. ಈ ವೇಳೆ ಭಾಷಣ ಮಾಡಿದ ಇವಾಂಕಾ, ನನ್ನ ತಂದೆ ರಾಜಕೀಯವಾಗಿ ತಪ್ಪು ಮಾಡಿರಬಹುದು. ಆದರೆ ಅವರು ಅಮೆರಿಕವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತಾರೆ. ಅವರು ಜನರ ಅಧ್ಯಕ್ಷ ಎಂದು ಕೊಂಡಾಡಿದರು.

ರಿಪಬ್ಲಿಕನ್ ಪಕ್ಷದ ನಾಮ ನಿರ್ದೇಶನ ಸ್ವೀಕರಿಸಿದ ಟ್ರಂಪ್​​

ಬಳಿಕ ಮಾತನಾಡಿದ ಟ್ರಂಪ್, ತಮ್ಮ ಭಾಷಣದುದ್ದಕ್ಕೂ ಎದುರಾಳಿ ಜೋ ಬಿಡೆನ್ ಮತ್ತು 47 ವರ್ಷಗಳ ಹಿಂದಿನ ಶಾಸಕಾಂಗ ನೀತಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದರು. ಅವರು ತಮ್ಮ ಭಾಷಣದಲ್ಲಿ ಡೆಮೋಕ್ರಾಟ್​​ಗಳನ್ನು ‘ಅಲ್ಟ್ರಾ ರ‍್ಯಾಡಿಕಲ್​​ ಲೆಫ್ಟ್​​’ ಎಂದು ಟೀಕಿಸಿದರು. “ಇದು ನಮ್ಮ ದೇಶದ ಇತಿಹಾಸದಲ್ಲಿ ಪ್ರಮುಖ ಚುನಾವಣೆಯಾಗಿದೆ. ಈ ಮೊದಲು ಯಾವುದೇ ಸಮಯದಲ್ಲಿ ಮತದಾರರು ಎರಡು ಪಕ್ಷಗಳು, ಎರಡು ದೃಷ್ಟಿಕೋನಗಳು, ಎರಡು ತತ್ತ್ವಚಿಂತನೆಗಳು ಅಥವಾ ಎರಡು ಕಾರ್ಯಸೂಚಿಗಳ ನಡುವೆ ಸ್ಪಷ್ಟವಾದ ಆಯ್ಕೆಯನ್ನು ಎದುರಿಸಲಿಲ್ಲ. ಈ ಚುನಾವಣೆಯಲ್ಲಿ ನಾವು ಅಮೆರಿಕನ್ ಕನಸನ್ನು ಉಳಿಸುತ್ತೇವೆಯೇ ಅಥವಾ ನಾಶಮಾಡಲು ಸಮಾಜವಾದಿ ಕಾರ್ಯಸೂಚಿಯನ್ನು ಅನುಮತಿಸುತ್ತೇವೆಯೇ ಎಂದು ನಿರ್ಧರಿಸುತ್ತದೆ”ಎಂದು ಟ್ರಂಪ್ ಹೇಳಿದರು.

ABOUT THE AUTHOR

...view details