ಕರ್ನಾಟಕ

karnataka

ETV Bharat / bharat

ವಿದೇಶಿ ನೇರ ಬಂಡವಾಳ ಹೂಡಿಕೆ ಅಲ್ಪ ಇಳಿಕೆ, ಕೇಂದ್ರ ಸರ್ಕಾರಕ್ಕೆ ಆರಂಭಿಕ ಸವಾಲು - undefined

ಆರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 2018-19ರಲ್ಲಿ ವಿದೇಶಿ ನೇರ ಬಂಡವಾಳ(ಎಫ್‌ಡಿಐ) ಹೂಡಿಕೆ ಶೇ 1ರಷ್ಟು ಇಳಿಕೆಯಾಗಿದೆ. 2017-18ರಲ್ಲಿ ₹ 3.13 ಲಕ್ಷ ಕೋಟಿ ಎಫ್​ಡಿಐ ಹರಿದು ಬಂದಿತ್ತು. 2018-19ರಲ್ಲಿ ₹ 3.10 ಲಕ್ಷ ಕೋಟಿಯಷ್ಟಿದೆ ಎಂದು ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಮಂಡಳಿ (ಡಿಪಿಐಐಟಿ) ತಿಳಿಸಿದೆ.

ಸಾಂದರ್ಭಿಕ ಚಿತ್ರ

By

Published : May 29, 2019, 9:52 AM IST

ನವದೆಹಲಿ:ಮತ್ತೊಂದು ಅವಧಿಗೆ ಅಧಿಕಾರದ ಗದ್ದುಗೆ ಏರಲು ಅಣಿಯಾಗಿರುವ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಎರಡನೇ ಇನ್ನಿಂಗ್ಸ್‌ ಶುರು ಮಾಡುವ ಮೊದಲೇ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್​ಡಿಐ) ಇಳಿಕೆ ಆಗಿರುವ ಬಗ್ಗೆ ವರದಿಯಾಗಿದೆ.

ಆರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 2018-19ರಲ್ಲಿ ಎಫ್​ಡಿಐ ಶೇ 1ರಷ್ಟು ಇಳಿಕೆಯಾಗಿದೆ. 2017-18ರಲ್ಲಿ ₹ 3.13 ಲಕ್ಷ ಕೋಟಿ ಎಫ್​ಡಿಐ ಹರಿದು ಬಂದಿತ್ತು. 2018-19ರಲ್ಲಿ ₹ 3.10 ಲಕ್ಷ ಕೋಟಿಯಷ್ಟಿದೆ ಎಂದು ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಮಂಡಳಿ (ಡಿಪಿಐಐಟಿ) ತಿಳಿಸಿದೆ.

ಯುಪಿಎ ಆಡಳಿತದ ಅವಧಿಯ 2012-13ರಲ್ಲಿ ಎಫ್​ಡಿಐ ಒಳಹರಿವು ಶೇ 36ರಷ್ಟು ಕಡಿಮೆಯಾಗಿ ₹ 1.56 ಲಕ್ಷ ಕೋಟಿಗಳಿಗೆ ತಲುಪಿತ್ತು. ಇದಾದ ನಂತರ ಒಳ ಹರಿವು ಏರುಗತಿಯಲ್ಲಿ ಸಾಗಿ 2017-18ರಲ್ಲಿ ಗರಿಷ್ಠ ಮಟ್ಟ ತಲುಪಿತ್ತು.

ಕಂಪ್ಯೂಟರ್​ ಸಾಫ್ಟ್​ವೇರ್​ & ಹಾರ್ಡ್​ವೇರ್, ಸೇವೆಗಳು, ಟ್ರೇಡಿಂಗ್​ ಹಾಗೂ ವಾಹನ ಉದ್ಯಮ ವಲಯಗಳಲ್ಲಿ ಹೂಡಿಕೆ ಹೆಚ್ಚಾಗಿದೆ. ಅತಿಹೆಚ್ಚು ಔಷಧಿ (ಶೇ 74ರಷ್ಟು), ಟೆಲಿಕಾಂ (ಶೇ 56ರಷ್ಟು), ನಿರ್ಮಾಣ ಹಾಗೂ ವಿದ್ಯುತ್ ವಲಯಗಳಲ್ಲಿ ಕ್ಷೀಣಿಸಿದೆ.

ಭಾರತದ ಆರ್ಥಿಕತೆ ಎರಡಂಕಿ ಬೆಳವಣಿಗೆ ತಲುಪಬೇಕಾದರೆ ಕೇಂದ್ರ ಸರ್ಕಾರ ಎಫ್​ಡಿಐ ಆಕರ್ಷಣೆಗೆ ಮುಂದಾಗಬೇಕು. ಮೂಲ ಸೌಕರ್ಯ ವಲಯದ ಅಭಿವೃದ್ಧಿಗೆ ಎಫ್​ಡಿಐ ಒಳಹರಿವಿನಲ್ಲಿ ಹೆಚ್ಚಳ ಅತ್ಯಗತ್ಯವಾಗಿದೆ. ಎಫ್​ಡಿಐ ಕಡಿಮೆಯಾದರೆ ದೇಶದ ಅಂತಾರಾಷ್ಟ್ರೀಯ ಪಾವತಿ ಮೇಲೆ ಪರಿಣಾಮ ಬೀರಲಿದೆ. ಜೊತೆಗೆ ರೂಪಾಯಿ ಮೌಲ್ಯ ಏರುಪೇರಿಗೂ ಕಾರಣವಾಗಲಿದೆ.

For All Latest Updates

TAGGED:

ABOUT THE AUTHOR

...view details