ದಿಸ್ಪುರ್(ಅಸ್ಸಾಂ):ಮದರಸಾ, ಹೈ ಮದರಸಾ ಹಾಗೂ ಸಂಸ್ಕೃತ ಟೋಲ್ ಶಿಕ್ಷಣ ರದ್ದುಗೊಳಿಸಲು ಅಸ್ಸಾಂ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಅಸ್ಸಾಂ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ಅಸ್ಸಾಂನಲ್ಲಿ ಮದರಸಾ, ಹೈ ಮದರಸಾ, ಸಂಸ್ಕೃತ ಟೋಲ್ ಶಿಕ್ಷಣ ರದ್ದು! ಮುಂದಿನ ನಿರ್ಧಾರವೇನು? - assam Education Minister Himanta Biswa Sarma
ಶಿಕ್ಷಣದ ಹೆಸರಿನಲ್ಲಿ ನಡೆಯುವ ಧಾರ್ಮಿಕ ಆಚರಣೆಯನ್ನು ನಿಲ್ಲಿಸಲು, ಅಸ್ಸಾಂನ ಮದರಸಾ, ಹೈ ಮದರಸಾ ಮತ್ತು ಸಂಸ್ಕೃತ ಟೋಲ್ಅನ್ನು ರಾಜ್ಯ ಶಿಕ್ಷಣ ವ್ಯವಸ್ಥೆಯಿಂದ ರದ್ದುಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈ ಸಂಸ್ಥೆಗಳನ್ನು ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಪ್ರೌಢ ಶಾಲೆ ಮತ್ತು ಹೈಯರ್ ಸೆಕೆಂಡರಿ ಶಾಲೆಯಾಗಿ ಪರಿವರ್ತಿಸಲಾಗುವುದು ಎಂಬ ನಿರ್ಣಯಕ್ಕೆ ಬರಲಾಗಿದೆ.

ಅಸ್ಸಾಂನ ಮದರಸಾ, ಹೈ ಮದರಸಾ ಮತ್ತು ಸಂಸ್ಕೃತ ಟೋಲ್ ಅನ್ನು ರಾಜ್ಯ ಶಿಕ್ಷಣ ವ್ಯವಸ್ಥೆಯಿಂದ ರದ್ದುಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಈ ವಿಚಾರವನ್ನು ಸಂಪುಟ ಸಭೆಯ ನಂತರ ಅಸ್ಸಾಂ ಶಿಕ್ಷಣ ಇಲಾಖೆ ತಿಳಿಸಿದೆ.
ಮುಂದಿನ ನಾಲ್ಕು ಅಥವಾ ಐದು ತಿಂಗಳಲ್ಲಿ ರಾಜ್ಯವು ನಡೆಸುತ್ತಿರುವ ಮದರಸಾ, ಹೈ ಮದರಸಾ ಮತ್ತು ಸಂಸ್ಕೃತ ಟೋಲ್ಅನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಶಿಕ್ಷಣದ ಹೆಸರಿನಲ್ಲಿ ನಡೆಯುವ ಧಾರ್ಮಿಕ ಆಚರಣೆಯನ್ನು ನಿಲ್ಲಿಸಲು, ರಾಜ್ಯ ಶಿಕ್ಷಣ ಇಲಾಖೆ ದಿಟ್ಟ ಹೆಜ್ಜೆ ಇಡುತ್ತಿದೆ. ಈ ಸಂಸ್ಥೆಗಳನ್ನು ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಪ್ರೌಢ ಶಾಲೆ ಮತ್ತು ಹೈಯರ್ ಸೆಕೆಂಡರಿ ಶಾಲೆಯಾಗಿ ಪರಿವರ್ತಿಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ.