ಕರ್ನಾಟಕ

karnataka

ETV Bharat / bharat

'ಮಹಾ' ರಾಜಕಾರಣ: ಸುಪ್ರೀಂನಿಂದ ಇಂದು ನಿರ್ಧಾರ ಪ್ರಕಟ - ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ಸುಪ್ರೀಂ ತೀರ್ಪು

ವಾದ - ಪ್ರತಿವಾದಗಳನ್ನು ಆಲಿಸಿದ ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಸಿಎಂ ದೇವೇಂದ್ರ ಫಡ್ನವೀಸ್​, ಡಿಸಿಎಂ ಅಜಿತ್​ ಪವಾರ್​ಗೆ ನೋಟಿಸ್​​ ಜಾರಿಗೊಳಿಸಿತ್ತು.

ಮಹಾರಾಷ್ಟ್ರ ರಾಜ್ಯರಾಜಕಾರಣ

By

Published : Nov 25, 2019, 7:28 AM IST

ನವದೆಹಲಿ: ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್​, ಅಜಿತ್​ ಪವಾರ್​ ಡಿಸಿಎಂ ಸ್ಥಾನವನ್ನು ಅಜಿತ್ ಪವಾರ್ ವಹಿಸಿಕೊಂಡಿದ್ದರು. ಈ ಬೆಳವಣಿಗೆಯನ್ನು ಆಕ್ಷೇಪಿಸಿ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್ ಸುಪ್ರೀಂ ಮೆಟ್ಟಿಲೇರಿದ್ದವು. ಭಾನುವಾರ ವಾದ - ಪ್ರತಿವಾದ ನಡೆದಿದ್ದು, ಅರ್ಜಿಯ ತೀರ್ಪನ್ನು ಸುಪ್ರೀಂಕೋರ್ಟ್​ ಇಂದು ಪ್ರಕಟಿಸಲಿದೆ.

ವಾದ- ಪ್ರತಿವಾದಗಳನ್ನು ಆಲಿಸಿದ ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಸಿಎಂ ದೇವೇಂದ್ರ ಫಡ್ನವೀಸ್​, ಡಿಸಿಎಂ ಅಜಿತ್​ ಪವಾರ್​ಗೆ ನೋಟಿಸ್​​ ಜಾರಿಗೊಳಿಸಿತ್ತು. ಸದ್ಯಕ್ಕೆ ಬಹುಮತ ಸಾಬೀತು ಅಗತ್ಯವಿಲ್ಲ ಎಂದಿದ್ದ ಕೋರ್ಟ್​ ವಿಚಾರಣೆಯನ್ನು ಇಂದಿಗೆ ಮುಂದೂಡಿಕೆ ಮಾಡಿತ್ತು.

ನಿನ್ನೆಯ ವಿಚಾರಣೆಯಲ್ಲಿ ಏನೇನಾಯ್ತು...?

ಇದು ಪ್ರಜಾಪ್ರಭುತ್ವದ ಕಗ್ಗೊಲೆ:

ವಾದ ಮಂಡಿಸಿದ ಎನ್​ಸಿಪಿ-ಕಾಂಗ್ರೆಸ್​ ಪರ ವಕೀಲ ಅಭಿಷೇಕ್​ ಮನು ಸಿಂಘ್ವಿ, ಕೇವಲ 42 - 43 ಸೀಟುಗಳನ್ನು ಗೆದ್ದ ಎನ್​ಸಿಪಿಯ ಅಜಿತ್​ ಪವಾರ್​ ಉಪಮುಖ್ಯಮಂತ್ರಿಯಾಗಲು ಹೇಗೆ ಸಾಧ್ಯ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಾದಿಸಿದರು.

ಶುಕ್ರವಾರ ಅಜಿತ್​ ಪವಾರ್​ ಶಾಸಕಾಂಗ ಪಕ್ಷದ ನಾಯಕನಲ್ಲ ಎಂದು ಎನ್​ಸಿಪಿ ನಿರ್ಧರಿಸಿದೆ. ಅವರು ಅವರದ್ದೇ ಪಕ್ಷದ ಬೆಂಬಲವಿಲ್ಲದೇ ಡಿಸಿಎಂ ಆಗಿ ಮುಂದುವರಿಯಲು ಹೇಗೆ ಸಾಧ್ಯ? ಹೀಗಾಗಿ ಸುಪ್ರೀಂಕೋರ್ಟ್​ 24 ಗಂಟೆಯೊಳಗೆ ಬಹುಮತ ಸಾಬೀತಿಗೆ ಆದೇಶಿಸಬೇಕು. 1998ರಲ್ಲಿ ಉತ್ತರಪ್ರದೇಶ ಹಾಗೂ ಕಳೆದ ವರ್ಷ ಕರ್ನಾಟಕದಲ್ಲಿ 24 ಗಂಟೆಯೊಳಗೆ ಬಹುಮತ ಸಾಬೀತಿಗೆ ಆದೇಶಿಸಿದಂತೆ ಘನ ನ್ಯಾಯಾಲಯ ಆದೇಶಿಸಬೇಕೆಂದು ಕೋರಿದರು.

ಮೂರೂ ಪಕ್ಷಗಳಿಗೆ ಇಲ್ಲಿ ಯಾವುದೇ ಮೂಲಭೂತ ಹಕ್ಕು ಇಲ್ಲ:

ಪ್ರತಿವಾದ ಮಂಡಿಸಿದ ಬಿಜೆಪಿ ಪರ ವಕೀಲ ಮುಕುಲ್​ ರೋಹ್ಟಗಿ, ನ್ಯಾಯಾಂಗ ಹಸ್ತಕ್ಷೇಪಕ್ಕೂ ಮುಕ್ತವಾಗಿರದ ಕೆಲವು ವಿಷಯಗಳು ರಾಷ್ಟ್ರಪತಿಗಳ ಬಳಿ ಇರುತ್ತದೆ. ಅದನ್ನು ಸಾರ್ವಜನಿಕರಿಗೆ ಮುಕ್ತವಾಗಿಡಲು ಆಗುವುದಿಲ್ಲ.

ಬಹುಮತ ಸಾಬೀತಿಗೆ ನ್ಯಾಯಾಲಯ ಆದೇಶ ಹೊರಡಿಸುವ ಅನಿವಾರ್ಯತೆ ಇಲ್ಲ. ರಾಜ್ಯಪಾಲರ ನಿರ್ಧಾರವೇನು ಕಾನೂನು ಬಾಹಿರವಾಗಿಲ್ಲ. ಬಹುಮತ ಸಾಬೀತಿಗೆ ದಿನಾಂಕವನ್ನು ಕೋರ್ಟ್​ ಇಂದೇ ಆದೇಶಿಸಬಾರದು. ಈ ಮೂರೂ ಪಕ್ಷಗಳಿಗೆ ಇಲ್ಲಿ ಯಾವುದೇ ಮೂಲಭೂತ ಹಕ್ಕು ಇಲ್ಲ ಎಂದು ವಾದಿಸಿದರು.

ABOUT THE AUTHOR

...view details