ಇಡುಕ್ಕಿ:ಇಲ್ಲಿನ ಪೂತಕುಝಿ ನದಿ ದಂಡೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಕೇರಳದ ಇಡುಕ್ಕಿಯ ರಾಜಮಾಲಾದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಅಸುನೀಗಿದವರ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.
ಆಗಸ್ಟ್ 6ರಂದು ಇಡುಕ್ಕಿಯ ರಾಜಮಾಲಾದ ಪೆಟ್ಟಿಮುಡಿಯಲ್ಲಿ ಭೂಕುಸಿತ ಉಂಟಾಗಿತ್ತು. ನಿನ್ನೆಯವರೆಗೂ 62 ಮೃತದೇಹಗಳನ್ನು ಹೊರ ತೆಗೆಯಲಾಗಿತ್ತು. ಘಟನಾ ಸ್ಥಳದಿಂದ 14 ಕಿ.ಮೀ ದೂರದಲ್ಲಿರುವ ಪೂತಕುಝಿಯಲ್ಲಿನ (Poothakuzhi) ನದಿ ದಂಡೆಯ ಬಳಿ ಇಂದು ಗುರುತಿಸಲಾಗದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.