ನಾಸಿಕ್:ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಈಗಾಗಲೇ 25 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಘಟನೆ ವಿವರ...
ನಾಸಿಕ್ನ ಡಿಯೋಲ್ ನಗರದಲ್ಲಿ ಮಾಲೆಗಾಂವ್ನಿಂದ ಕಾಲ್ವಾನ್ಗೆ ತೆರಳುತ್ತಿದ್ದ ಬಸ್ನ ಟೈಯರ್ ಬ್ಲಾಸ್ಟ್ ಆಗಿದ್ದು, ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಆಟೋಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ರಸ್ತೆ ಪಕ್ಕದಲ್ಲಿರುವ ಬಾವಿಗೆ ಎರಡೂ ವಾಹನಗಳು ಬಿದ್ದಿವೆ.
ಭರದಿಂದ ಸಾಗಿದ ಕಾರ್ಯಾಚರಣೆ...
ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಬಾವಿಯಲ್ಲಿ ಸಿಲುಕಿದವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ಮತ್ತು ಬಸ್ನ್ನು ಕ್ರೇನ್ ಸಹಾಯದಿಂದ ಹೊರತೆಗೆಯಲಾಗಿದೆ. ಪಂಪ್ಸೆಟ್ ಸಹಾಯದಿಂದ ಬಾವಿಯಲ್ಲಿ ನೀರು ಹೊರ ತೆಗೆದು ಮತ್ಯಾರಾದ್ರೂ ಸಿಲುಕಿದ್ದಾರಾ ಎಂಬುದನ್ನು ಪರೀಕ್ಷಿಸಲಾಗುತ್ತಿದೆ.
25ಕ್ಕೇರಿದ ಸಾವಿನ ಸಂಖ್ಯೆ...
ಈ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 25 ಜನ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.