ಚಂಡೀಗಢ (ಪಂಜಾಬ್):ಕಳ್ಳಭಟ್ಟಿ ಸೇವನೆ ಮಾಡಿ ಸಾವನ್ನಪ್ಪಿದವರ ಸಂಖ್ಯೆ ಇದೀಗ 86ಕ್ಕೆ ಏರಿಕೆಯಾಗಿದ್ದು, ಮೃತರ ಕುಟುಂಬಕ್ಕೆ ಅಲ್ಲಿನ ಸರ್ಕಾರ ತಲಾ 2 ಲಕ್ಷ ರೂ ಘೋಷಣೆ ಮಾಡಿದೆ.
ಪಂಜಾಬ್ ಕಳ್ಳಭಟ್ಟಿ ದುರಂತ: ಸಾವಿನ ಸಂಖ್ಯೆ 86ಕ್ಕೇರಿಕೆ, 7 ಅಬಕಾರಿ, 6 ಪೊಲೀಸರ ಅಮಾನತು
ಪಂಜಾಬ್ನ ವಿವಿಧ ಪ್ರದೇಶಗಳಲ್ಲಿ ಕಳ್ಳಭಟ್ಟಿ ಸೇವನೆ ಮಾಡಿ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ.
ಪ್ರಕರಣದ ಸಮಗ್ರ ತನಿಖೆಗೆ ಈಗಾಗಲೇ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಆದೇಶ ನೀಡಿದ್ದು, ಮೂರು ನಗರಗಳಾದ ಅಮೃತಸರ್, ಗುರುದಾಸ್ಪುರ್ ಹಾಗೂ ಠರನ್‌ನಲ್ಲಿ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಇದರ ಜತೆಗೆ 25 ಜನರನ್ನು ಬಂಧಿಸಲಾಗಿದ್ದು, 750 ಲೀಟರ್ ಕಳ್ಳಭಟ್ಟಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಅಬಕಾರಿ ಅಧಿಕಾರಿಗಳು, ಇಬ್ಬರು ಡಿಎಸ್ಪಿ ಸೇರಿ ಆರು ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕಳ್ಳಭಟ್ಟಿ ಸೇವನೆ ಮಾಡಿ ಅಮೃತಸರದಲ್ಲಿ 12 ಮಂದಿ ಗುರುದಾಸ್ಪುರ್ದಲ್ಲಿ 11 ಮಂದಿ ಸೇರಿ ಇಲ್ಲಿಯವರೆಗೆ 86 ಜನರು ಬಲಿಯಾಗಿದ್ದಾರೆ.