ಸನಾ (ಯೆಮನ್):ಮಾರಿಬ್‌ನ ಮಿಲಿಟರಿ ಕ್ಯಾಂಪ್ನ ಮಸೀದಿ ಮೇಲೆ ಹುತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಸುಮಾರು 80 ಯೋಧರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಕ್ಷಿಪಣಿ ದಾಳಿ: ಯೆಮನ್ನ 80 ಯೋಧರ ಸಾವು - President Abd Rabbuh Mansur Hadi
ಮಾರಿಬ್‌ನ ಮಿಲಿಟರಿ ಕ್ಯಾಂಪ್ನ ಮಸೀದಿ ಮೇಲೆ ಹುತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಸುಮಾರು 80 ಯೋಧರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ
ಈ ದಾಳಿಯಲ್ಲಿ ಹಲವು ಸೈನಿಕರು ಗಾಯಗೊಂಡಿದ್ದಾರೆ. ಇನ್ನು ಈ ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಆದರೆ ಯೆಮನ್ ಅಧ್ಯಕ್ಷ ಅಬ್ಬೆದ್ರಾಬ್ಬೊ ಮನ್ಸೂರ್ ಹಾಡಿ, ಇದು ಹೇಡಿತನ ಮತ್ತು ಭಯೋತ್ಪಾದಕ ದಾಳಿ ಎಂದಿದ್ದಾರೆ.
ಯೆಮನ್ ರಾಜಧಾನಿ ಸನಾದ ಪೂರ್ವ ಭಾಗದಲ್ಲಿ ಸುಮಾರು 170 ಕಿ.ಮೀ. ದೂರದಲ್ಲಿನ ಮಾರಿಬ್‌ನ ಮಿಲಿಟರಿ ಕ್ಯಾಂಪ್ನ ಮಸೀದಿ ಮೇಲೆ ಹುತಿಗಳು ದಾಳಿ ನಡೆಸಿದ್ದಾರೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.