ಕರ್ನಾಟಕ

karnataka

ETV Bharat / bharat

ಮೃತಪಟ್ಟಿದ್ದಾನೆಂದು ತಿಳಿದ ವ್ಯಕ್ತಿ ಮರಣೋತ್ತರ ಪರೀಕ್ಷೆ ವೇಳೆ ಜೀವಂತ: ಆದರೆ..., - ಮೃತಪಟ್ಟಿದ್ದಾನೆಂದು ತಿಳಿದ ವ್ಯಕ್ತಿಗೆ ಜೀವ

ವಿದ್ಯುತ್ ತಂತಿ ತಗುಲಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ ವೈದ್ಯರು ಮರಣೋತ್ತರ ಪರೀಕ್ಷೆ ವೇಳೆ ಬದುಕಿದ್ದಾನೆ ಎಂದು ತಿಳಿಸಿದ್ರು. ಆದ್ರೆ ಮತ್ತೆ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿರುವ ವಿಚಿತ್ರ ಘಟನೆ ರಾಂಚಿಯಲ್ಲಿ ಬೆಳಕಿಗೆ ಬಂದಿದೆ.

Dead man comes alive
ಮೃತಪಟ್ಟಿದ್ದಾನೆಂದು ತಿಳಿದ ವ್ಯಕ್ತಿ ಮರಣೋತ್ತರ ಪರೀಕ್ಷೆ ವೇಳೆ ಬದುಕಿದ

By

Published : May 28, 2020, 1:15 PM IST

ರಾಂಚಿ(ಜಾರ್ಖಂಡ್​): ಚಾನ್ಹೋ ಬ್ಲಾಕ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಸಾವನ್ನಪ್ಪಿರುವ ವ್ಯಕ್ತಿಯ ಮರಣೋತ್ತರ ಪರೀಕ್ಷೆಗೆ ಸಿದ್ಧತೆಗಳು ನಡೆಯುತ್ತಿರುವಾಗ ಇನ್ನೂ ಉಸಿರಾಡುತ್ತಿದ್ದಾನೆ ಎಂದು ಹೇಳಿದ್ದಾರೆ.

ಮೃತನ ಸಂಬಂಧಿಕರು ತಕ್ಷಣವೇ ಅಲ್ಲಿನ ಅಧಿಕಾರಿಗಳಿಗೆ ಮಾಹಿತಿ ನೀಡಿ ಆರೋಗ್ಯ ಕೇಂದ್ರದ ತುರ್ತು ವಿಭಾಗಕ್ಕೆ ಕರೆದೊಯ್ಯಲು ಕೇಳಿಕೊಂಡರು. ಅಲ್ಲಿಗೆ ತಲುಪುತ್ತಿದ್ದಂತೆ ಮತ್ತೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಮೃತ ವ್ಯಕ್ತಿ ಖಾರ್ತಾ ಗ್ರಾಮದ ನಿವಾಸಿಯಾಗಿದ್ದು, ಹಳ್ಳಿಯಲ್ಲಿ ಟೆಂಟ್ ಕಳಚುತ್ತಿರುವಾಗ ಹೈವೋಲ್ಟೇಜ್ ವಿದ್ಯತ್ ತಂತಿ ತಗುಲಿ ಗಂಭೀರವಾಗಿದ್ದನು. ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದರು.

ಮೊದಲೇ ಸರಿಯಾಗಿ ಪರೀಕ್ಷಿಸಿದ್ದರೆ ಆತನನ್ನು ಬದುಕಿಸಬಹುದಿತ್ತು ಎಂದು ಸಬಂಧಿಕರು ಹೇಳಿದ್ದಾರೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ವಿರುದ್ಧ ತನಿಖೆ ನಡೆಯುತ್ತಿದೆ.

ABOUT THE AUTHOR

...view details