ಕರ್ನಾಟಕ

karnataka

ETV Bharat / bharat

ಒಂದೇ ಕೋಣೆಯಲ್ಲಿ ತಾಯಿ, ಇಬ್ಬರು ಮಕ್ಕಳು ಸಾವು : ಕಾರಣ ನಿಗೂಢ - ಬಿಹಾರ್​ ಲೇಟೆಸ್ಟ್​ ಕ್ರೈಂ ಸುದ್ದಿ

ಸೋಮವಾರ ಬೆಳಗ್ಗೆ ಸ್ಥಳೀಯರು ಮನೆಯೊಳಗೆ ತಾಯಿ ಮತ್ತು ಮಕ್ಕಳ ಮೃತದೇಹ ಕಂಡು ದಿಗ್ಭ್ರಮೆಗೊಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ..

Dead body of woman and two children recovered from home
ತಾಯಿ, ಇಬ್ಬರು ಮಕ್ಕಳು ಸಾವು

By

Published : Nov 30, 2020, 12:50 PM IST

ನವಾದ(ಬಿಹಾರ) : ಜಿಲ್ಲೆಯ ರಾಜೌಲಿಯ ಪ್ರಾಂಚಕ್ ಗ್ರಾಮದ ವಿನೋಬಾನಗರ ಪ್ರದೇಶದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ತಾಯಿ, ಇಬ್ಬರು ಮಕ್ಕಳು ಸಾವು

ಲಾಚೋದೇವಿ ಎಂಬ ಮಹಿಳೆ ಮತ್ತು ಆಕೆಯ ಇಬ್ಬರು ಗಂಡು ಮಕ್ಕಳ ಶವ ಒಂದೇ ಕೋಣೆಯಲ್ಲಿ ಪತ್ತೆಯಾಗಿದೆ. ಮೂಲಗಳ ಪ್ರಕಾರ, ಸೋಮವಾರ ಬೆಳಗ್ಗೆ ಸ್ಥಳೀಯರು ಮನೆಯೊಳಗೆ ತಾಯಿ ಮತ್ತು ಮಕ್ಕಳ ಮೃತದೇಹ ಕಂಡು ದಿಗ್ಭ್ರಮೆಗೊಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕಾಮಿಸಿದ ಪೊಲೀಸರು ಶವಗಳನ್ನು ಮನೆಯೊಳಗಿಂದ ಹೊರ ತೆಗೆದಿದ್ದಾರೆ. ಆದರೆ, ಮೃತರ ಕೋಣೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗದ ಕಾರಣ ಸಾವಿನ ಕಾರಣ ನಿಗೂಢವಾಗಿದೆ.

ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಿಲ್ಲದ ಕಾರಣ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲು ಸ್ಥಳಕ್ಕೆ ಶ್ವಾನ ದಳ ಕರೆಸಿದ್ದಾರೆ.

ABOUT THE AUTHOR

...view details