ಕೂಂಟಿ(ಜಾರ್ಖಂಡ್):ಅರ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಮೂವರು ಯುವಕರ ಶವ ಪೋಲ್ಕಾ ಅರಣ್ಯ ಪ್ರದೇಶದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಂದೇ ಗುಂಡಿಯಲ್ಲಿ ಮೂರು ಶವಗಳು.. ತಲೆಗಳೇ ಗಾಯಬ್!! - ತಲೆಯಿಲ್ಲದ ಮೂರು ಮೃತದೇಹ ಪತ್ತೆ
ನಾಪತ್ತೆಯಾಗಿದ್ದ ಮೂವರು ಯುವಕರು ಇದೀಗ ಶವವಾಗಿ ಪತ್ತೆಯಾಗಿದ್ದು, ಶವಗಳ ತಲೆಗಳು ಮಾಯವಾಗಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ಈ ಕುರಿತು ತೀವ್ರ ತನಿಖೆ ಮುಂದುವರೆಸಿದ್ದಾರೆ.
ಅ.14 ರಂದು ಕಾಣೆಯಾದ ಮೂವರು ಯುವಕರನ್ನು ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಪೋಲ್ಕಾ ಅರಣ್ಯ ಪ್ರದೇಶದಲ್ಲಿ ತಲೆ ಕಾಣೆಯಾದ ಮೂರು ಮೃತ ದೇಹಗಳನ್ನು ಒಂದೇ ಗುಂಡಿ ತೋಡಿ ಹೂಳಲಾಗಿತ್ತು. ಅಲ್ಲದೇ ಅದೇ ಪ್ರದೇಶದಲ್ಲಿ ಛಿದ್ರ ಛಿದ್ರಗೊಂಡ ಇನ್ನೊಂದು ಮೃತ ದೇಹವೂ ಪತ್ತೆಯಾಗಿತ್ತು. ಈ ರೀತಿಯಲ್ಲಿ ಆ ಪ್ರದೇಶದಲ್ಲಿ ಹಲವು ಬಾರಿ ಹೆಣಗಳು ಪತ್ತೆಯಾಗಿತ್ತು. ಇದರಿಂದಾಗಿ ಈ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.
ಇನ್ನು ಪತ್ತೆಯಾದ ಮೃತದೇಹಗಳನ್ನು ಕಾಣೆಯಾದ ಮಹೇಂದ್ರ ಹೋರೊ, ದುರ್ಗಾ ಮುಂಡಾ ಮತ್ತು ಮುಂಡುಕಾ ಮುಂಡಾ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ 6ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.