ಕರ್ನಾಟಕ

karnataka

ETV Bharat / bharat

ಡಿಡಿಸಿ ಚುನಾವಣೆ: ಜಮ್ಮುವಿನಲ್ಲಿ ಬೆಳಗ್ಗೆ 11ರವರೆಗೆ ಶೇ 22ರಷ್ಟು ಮತದಾನ

ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆ ಹಿನ್ನೆಲೆ ಮತದಾರರು ತಮ್ಮ ಮತ ಚಲಾಯಿಸಲು ಮತಗಟ್ಟೆಗಳಿಗೆ ಆಗಮಿಸುತ್ತಿದ್ದು, ಬೆಳಗ್ಗೆ 11ರವರೆಗೆ ಒಟ್ಟು ಶೇ 22ಕ್ಕಿಂತ ಹೆಚ್ಚು ಮತದಾನ ಆಗಿದೆ.

DDC elections underway in jammu-kashmir
ಡಿಡಿಸಿ ಚುನಾವಣೆ: ಜಮ್ಮುವಿನಲ್ಲಿ ಬೆಳಿಗ್ಗೆ 11ರವರೆಗೆ ಶೇ 29.17 ರಷ್ಟು ಮತದಾನ

By

Published : Nov 28, 2020, 12:23 PM IST

Updated : Nov 28, 2020, 12:50 PM IST

ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯ (ಡಿಸಿಸಿ) ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದು, ಜಮ್ಮುವಿನಲ್ಲಿ ಬೆಳಗ್ಗೆ 11ರವರೆಗೆ ಶೇ 22 ಕ್ಕಿಂತ ಹೆಚ್ಚಿನ ಪ್ರಮಾಣದ ಮತದಾನ ಆಗಿದೆ.

ಡಿಡಿಸಿ ಚುನಾವಣೆ

ಮುಂಜಾನೆ 7ಕ್ಕೆ ಪ್ರಾರಂಭವಾದ ಮತದಾನ ಮಧ್ಯಾಹ್ನ 2 ಗಂಟೆಗೆ ಮುಕ್ತಾಯಗೊಳ್ಳಲಿದೆ. ಮತದಾರರು ತಮ್ಮ ಮತ ಚಲಾಯಿಸಲು ಮತಗಟ್ಟೆಗಳಿಗೆ ಆಗಮಿಸುತ್ತಿದ್ದು, ಬೆಳಗ್ಗೆ 11ರವರೆಗೆ ಒಟ್ಟು ಶೇ 22 ರಷ್ಟು ಮತದಾನ ಆಗಿದೆ.

ಮತದಾರರಿಗೆ ಯಾವುದೇ ತೊಂದರೆ ಆಗದಂತೆ, ಕೋವಿಡ್​ ನಿಯಮಗಳೊಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನು ಓದಿ:ಜಮ್ಮು - ಕಾಶ್ಮೀರ: ಡಿಡಿಸಿ ಚುನಾವಣೆಯ ಮೊದಲ ಹಂತದ ಮತದಾನ ಆರಂಭ

ಇನ್ನೂ ಅಖ್ನೂರ್‌ನಲ್ಲಿ ಬೆಳಗ್ಗೆ 11 ರವರೆಗೆ ಶೇ 33.4 ರಷ್ಟು, ಮೈರಾ ಮಾಂಡ್ರೈನ್‌ನಲ್ಲಿ 24.08 ರಷ್ಟು, ರಾಂಬನ್‌ನಲ್ಲಿ ಶೇ 36.62, ದೋಡಾದಲ್ಲಿ ಶೇ 24.6 ರಷ್ಟು ವೋಟಿಂಗ್​ ಆಗಿದೆ.

ಬೆಳಿಗ್ಗೆ 7 ರಿಂದ ಜನರು ಮತ ಚಲಾಯಿಸಲು ಬರುತ್ತಿದ್ದಾರೆ. ನಾವು ಉತ್ಸಾಹದಿಂದ ಕೂಡಿದ ಮತದಾರರ ಭಾಗವಹಿಸುವಿಕೆಯನ್ನು ನೋಡುತ್ತಿದ್ದೇವೆಂದು ದೋಡಾ ಜಿಲ್ಲಾ ಅಭಿವೃದ್ಧಿ ಆಯುಕ್ತರು ತಿಳಿಸಿದ್ದಾರೆ.

Last Updated : Nov 28, 2020, 12:50 PM IST

ABOUT THE AUTHOR

...view details