ಕರ್ನಾಟಕ

karnataka

ಕೋವಿಡ್-19 ವ್ಯಾಕ್ಸಿನ್ ಉಮಿಫೆನೊವಿರ್ ಹೈಡ್ರೋಕ್ಲೋರೈಡ್‌ ಉಪಯೋಗ ಕೇಳಿದ ಡಿಸಿಜಿಐ

By

Published : Oct 1, 2020, 9:31 PM IST

ಜನರಲ್ ಆಫ್ ಮೆಡಿಕಲ್ ವೈರಾಲಜಿ ಸಂಗ್ರಹಿಸಿದ ಅಧ್ಯಯನಗಳು, ಪ್ರಯೋಗಾಲಯ ಖಚಿತಪಡಿಸಿದ ಡಿಸಿಜಿಐನಲ್ಲಿ 14ನೇ ದಿನದಂದು ಉಮಿಫೆನೊವಿರ್ ಸುರಕ್ಷಿತ ಮತ್ತು ಹೆಚ್ಚಿನ ನೆಗೆಟಿವ್ ಪಿಸಿಆರ್‌ನೊಂದಿಗೆ ಸಂಬಂಧಿಸಿದೆ ಎಂದು ಕಂಡು ಹಿಡಿದಿದೆ. ಆದರೂ ರೋಗಿಯನ್ನು ಸುಧಾರಿಸಲು ಉಮಿಫೆನೋವಿರ್ ಬಳಕೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ. ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ ಎಂದು ಹೇಳಿದೆ.

dcgi-asks-for-more-inputs-on-umifenovir-hydrochloride-as-covid-19-vaccine
ಕೋವಿಡ್-19 ವ್ಯಾಕ್ಸಿನ್ ಉಮಿಫೆನೊವಿರ್ ಹೈಡ್ರೋಕ್ಲೋರೈಡ್‌ ಉಪಯೋಗ ಕೇಳಿದ ಡಿಸಿಜಿಐ

ನವದೆಹಲಿ:ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಉಮಿಫೆನೊವಿರ್ ಹೈಡ್ರೋಕ್ಲೋರೈಡ್ ಕ್ಯಾಪ್ಸುಲ್ ಬಗ್ಗೆ ಸೂಕ್ತವಾದ ಪ್ರೋಟೋಕಾಲ್ ಒದಗಿಸುವಂತೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಫಾರ್ಮಾ ಕಂಪನಿಗೆ ತಿಳಿಸಿದೆ.

ಕೋವಿಡ್-19 ಗಾಗಿ ಉಮಿಫೆನೊವಿರ್ ಎಚ್‌ಸಿಐ ಅನುಮೋದನೆಗಾಗಿ ಮ್ಯಾಕ್ಲಿಯೋಡ್ಸ್ ಪ್ರತಿನಿಧಿಗಳು ಅರ್ಜಿ ಸಲ್ಲಿಸಿದ್ದಾರೆ. ಸೋಂಕಿನೊಂದಿಗೆ ಆಸ್ಪತ್ರೆಗೆ ದಾಖಲಾದ ವಿಷಯಗಳಲ್ಲಿ ಫೆವಿಪಿರವಿರ್ ವಿರುದ್ಧ ಸ್ಟ್ಯಾಂಡರ್ಡ್ ಸಪೋರ್ಟಿವ್ ಕೇರ್ ಜೊತೆಗೆ ಉಮಿಫೆನೊವಿರ್ ಮತ್ತು ಫವಿಪಿರಾವೀರ್ ಕ್ಲಿನಿಕಲ್ ಪ್ರಯೋಗಕ್ಕಾಗಿ ಸಂಸ್ಥೆಯು ತಮ್ಮ ಪ್ರಸ್ತಾಪವನ್ನು ಮಂಡಿಸಿತು.

ಜನರಲ್ ಆಫ್ ಮೆಡಿಕಲ್ ವೈರಾಲಜಿ ಸಂಗ್ರಹಿಸಿದ ಅಧ್ಯಯನಗಳು, ಪ್ರಯೋಗಾಲಯ ಖಚಿತಪಡಿಸಿದ ಡಿಸಿಜಿಐನಲ್ಲಿ 14ನೇ ದಿನದಂದು ಉಮಿಫೆನೊವಿರ್ ಸುರಕ್ಷಿತ ಮತ್ತು ಹೆಚ್ಚಿನ ನೆಗೆಟಿವ್ ಪಿಸಿಆರ್‌ನೊಂದಿಗೆ ಸಂಬಂಧಿಸಿದೆ ಎಂದು ಕಂಡು ಹಿಡಿದಿದೆ. ಆದರೂ ರೋಗಿಯನ್ನು ಸುಧಾರಿಸಲು ಉಮಿಫೆನೋವಿರ್ ಬಳಕೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ. ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ ಎಂದು ಹೇಳಿದೆ. ಇದರ ನಡುವೆ ಕಳೆದ 24 ಗಂಟೆಗಳಲ್ಲಿ ಒಟ್ಟು 85,376 ಸೋಂಕಿತರು ಬಿಡುಗಡೆಯಾಗಿದ್ದು, ಭಾರತದ ಒಟ್ಟು ಚೇತರಿಕೆ ಸಂಖ್ಯೆಯಲ್ಲಿ 5,273,201ಕ್ಕೆ ಏರಿಕೆಯಾಗಿ ಶೇ 83.53 ರಷ್ಟು ತಲುಪಿದೆ.

ಕಳೆದ 24 ಗಂಟೆಗಳಲ್ಲಿ 1181 ಜನ ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 97,678 ಕ್ಕೆ ಏರಿದೆ. ಭಾರತದಲ್ಲಿ ಪ್ರಸ್ತುತ ದೇಶಾದ್ಯಂತ 9,407,05 ಸಕ್ರಿಯ ಪ್ರಕರಣಗಳಿವೆ. ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಬಗ್ಗೆ ಆರೋಗ್ಯ ಸಚಿವಾಲಯದ ಪ್ರಮುಖ ಕಾಳಜಿ ವಹಿಸಿದೆ. ಕಳೆದ 24 ಗಂಟೆಗಳಲ್ಲಿ ಕೇರಳ ರಾಜ್ಯದಲ್ಲಿ 5271 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 67,140 ತಲುಪಿದೆ.

ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕೇರಳ ಆರೋಗ್ಯ ಇಲಾಖೆಯೊಂದಿಗೆ ಗುರುವಾರ ಮಾತುಕತೆ ನಡೆಸಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಆರೋಗ್ಯ ಸಚಿವಾಲಯದ ಪ್ರತಿನಿಧಿಗಳು ಕೇರಳ ಆಡಳಿತಕ್ಕೆ ಕೆಲವು ಕ್ರಮಗಳನ್ನು ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details