ಶ್ರೀನಗರ:ಕಾಶ್ಮೀರದಾದ್ಯಂತ ಹಗಲು ವೇಳೆಗೆ ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಆದರೆ ಕಣಿವೆಯಾದ್ಯಂತ ಪ್ರಾಥಮಿಕ ಶಾಲೆಗಳನ್ನು ಪುನಃ ತೆರೆಯುವ ಆದೇಶ ಹೊರಡಿಸಿದ್ದರೂ ವಿದ್ಯಾರ್ಥಿಗಳು ಮಾತ್ರ ಶಾಲೆಗಳಿಗೆ ಹಾಜರಾಗುತ್ತಿಲ್ಲ.
ಮಕ್ಕಳಿಲ್ಲದೆ ಮರುಭೂಮಿಯಂತಾದ ಕಾಶ್ಮೀರದ ಶಾಲೆಗಳು; ಇಲ್ಲಿದೆ ಗ್ರೌಂಡ್ ರಿಪೋರ್ಟ್ - ಕಾಶ್ಮೀರದ ಶಾಲೆಗಳು
370 ನೇ ವಿಧಿ ರದ್ದಿನ ಬಳಿಕ ಕಾಶ್ಮೀರದಲ್ಲಿ ಮುಚ್ಚಲಾಗಿದ್ದ ಪ್ರಾಥಮಿಕ ಶಾಲೆಗಳನ್ನು ಪುನಃ ತೆರೆಯುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದರೂ ವಿದ್ಯಾರ್ಥಿಗಳು ಮಾತ್ರ ಶಾಲೆಗಳಿಗೆ ಹಾಜರಾಗುತ್ತಿಲ್ಲ. ಸದ್ಯದ ಪರಿಸ್ಥಿತಿಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೂ ಕಳುಹಿಸಲು ನಿರಾಕರಿಸುತ್ತಿದ್ದಾರೆ.
370 ನೇ ವಿಧಿ ರದ್ದಿನ ಬಳಿಕ ಮುಚ್ಚಲಾಗಿದ್ದ ಪ್ರಾಥಮಿಕ ಶಾಲೆಗಳನ್ನು ಪುನಃ ತೆರೆಯುವುದಾಗಿ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು. ಆದರೆ ತರಗತಿಗಳಲ್ಲಿ ವಿದ್ಯಾರ್ಥಿಗಳಿಲ್ಲದೇ ಅನೇಕ ಪ್ರಾಥಮಿಕ ಶಾಲೆಗಳು, ಅದರಲ್ಲೂ ಖಾಸಗಿ ಸಂಸ್ಥೆ ಒಡೆತನದ ಶಾಲೆಗಳು ಮರುಭೂಮಿಯ ರೀತಿ ಗೋಚರಿಸುತ್ತಿದೆ. ಇನ್ನು ಕೆಲವೇ ಕೆಲವು ಶಿಕ್ಷಕ ಸಿಬ್ಬಂದಿ ಶಾಲೆಗೆ ಬರಲು ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು, ಖಾಸಗಿ ಶಾಲೆಗಳಿಗಿರಲಿ, ಸರ್ಕಾರಿ ಶಾಲೆಗಳಿಗೂ ಕಳುಹಿಸಲು ನಿರಾಕರಿಸುತ್ತಿದ್ದಾರೆ ಎಂಬುದು ಅಧಿಕಾರಿಗಳ ಮಾತು.
ಕಾಶ್ಮೀರದ ಅನೇಕ ಪ್ರದೇಶಗಳ ಹಾಗೂ ಶ್ರೀನಗರದ ಕೆಲವು ಭಾಗಗಳಲ್ಲಿದ್ದ ನಿರ್ಬಂಧವನ್ನು ಅಧಿಕಾರಿಗಳು ಹಿಂತೆಗೆದುಕೊಂಡಿದ್ದಾರೆ. ನಗರದ ಮೇಲ್ಬಾಗ ಹಾಗೂ ಸಿವಿಲ್ ಲೈನ್ ಪ್ರದೇಶಗಳಲ್ಲಿದ್ದ ಬ್ಯಾರಿಕೇಡ್ಗಳನ್ನು ತೆಗೆದು ಹಾಕಲಾಗಿದೆ. ಆದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಭದ್ರತಾ ಪಡೆಗಳ ನಿಯೋಜನೆಯನ್ನು ಎಲ್ಲೆಡೆ ಹಾಗೂ ನಗರದ ಕೆಲ ಕೆಳಭಾಗದ ಪ್ರದೇಶಗಳಲ್ಲಿ ಮಾತ್ರ ನಿರ್ಬಂಧವನ್ನು ಮುಂದುವರೆಸಲಾಗಿದೆ.