ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮೊದಲಿಂದಲೂ ಟೀಕೆಗಳ ಮಳೆ ಸುರಿಸುತ್ತಿದ್ದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ದಿಗ್ವಿಜಯಕ್ಕೆ ಕವಿತೆ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಹಿಂದಿ, ಇಂಗ್ಲಿಷ್ ಹಾಗೂ ಬೆಂಗಾಲಿಯಲ್ಲಿ 'I don't agree'ಹೆಸರಿನಲ್ಲಿ ಕವಿತೆಯನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಯಾರ ಹೆಸರನ್ನೂ ಉಲ್ಲೇಖಿಸದೆ, ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
'ಕೋಮುವಾದದಲ್ಲಿ ನನಗೆ ನಂಬಿಕೆ ಇಲ್ಲ. ಬಂಗಾಳದಲ್ಲಿ ಹುಟ್ಟಿದ ಜ್ಞಾನಪುನರುಜ್ಜೀವನದ ಸೇವಕಿ ನಾನು. ಧಾರ್ಮಿಕ ಆಕ್ರಮಣದಲ್ಲಿ ನನಗೆ ನಂಬಿಕೆ ಇಲ್ಲ. ಮಾನವೀಯತೆ ಸಾರುವ ಧರ್ಮವನ್ನು ನಾನು ನಂಬುವೆ. ಕೆಲವರು ಧಾರ್ಮಿಕತೆಯನ್ನೇ ಆಯುಧವಾಗಿ ಬಳಸಿ, ಶ್ರೀಮಂತಿಕೆಯ ಪರ್ವತದಲ್ಲಿ ವಾಸಿಸುತ್ತಿದ್ದಾರೆ. ಸಹಿಷ್ಣುತೆಯಲ್ಲಿ ವಿಶ್ವಾಸ ಹೊಂದಿದವರು ಒಗ್ಗೂಡಿ ಹಾಗೂ ಎಲ್ಲರನ್ನೂ ಎಚ್ಚರಿಸಿ', ಎಂಬರ್ಥದಲ್ಲಿ ಕವಿತೆ ಬರೆದಿದ್ದಾರೆ. ಈ ಮೂಲಕ ಬಿಜೆಪಿ ಗೆಲುವಿನ ಬಗ್ಗೆ ಅತೃಪ್ತಿ ಹೊರಹಾಕಿದ್ದಾರೆ.
ಪಶ್ಚಿಮ ಬಂಗಾಳದ 42 ಲೋಕಸಭೆ ಕ್ಷೇತ್ರಗಳಲ್ಲಿ 18 ಕ್ಷೇತ್ರಗಳನ್ನು ಬಿಜೆಪಿ ತನ್ನ ಬತ್ತಳಿಕೆಗೆ ಹಾಕಿಕೊಂಡಿದೆ.