ಕರ್ನಾಟಕ

karnataka

ETV Bharat / bharat

ತಂದೆ ಲ್ಯಾಪ್​ಟಾಪ್​ನಲ್ಲಿ ಮಗಳ ನಗ್ನ ಚಿತ್ರಗಳು... ಫೋಟೋ ನೋಡಿ ಬೆಚ್ಚಿಬಿದ್ದ ಯುವತಿ! - ಹೈದರಾಬಾದ್​ ಅಪರಾಧ

ಮಲ ತಂದೆವೋರ್ವ ತನ್ನ ಮಗಳ ನಗ್ನ ಚಿತ್ರಗಳನ್ನು ಲ್ಯಾಪ್​ಟಾಪ್​ನಲ್ಲಿ ಸಂಗ್ರಹಿಸಿ ಕುಟುಂಬಸ್ಥರ ಕೈಗೆ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಹೈದರಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

Daughter nude pictures, Daughter nude pictures in step father laptop, Daughter nude pictures in step father laptop news, Hyderbada crime, Hyderbada crime news, ಮಗಳ ನಗ್ನ ಚಿತ್ರಗಳು, ಮಲ ತಂದೆ ಲ್ಯಾಪ್​ಟಾಪ್​ನಲ್ಲಿ ಮಗಳ ನಗ್ನ ಚಿತ್ರಗಳು, ಹೈದರಾಬಾದ್​ನಲ್ಲಿ ಮಲ ತಂದೆ ಲ್ಯಾಪ್​ಟಾಪ್​ನಲ್ಲಿ ಮಗಳ ನಗ್ನ ಚಿತ್ರಗಳು, ಹೈದರಾಬಾದ್​ ಅಪರಾಧ, ಹೈದರಾಬಾದ್​ ಅಪರಾಧ ಸುದ್ದಿಗಳು,
ಸಾಂದರ್ಭಿಕ ಚಿತ್ರ

By

Published : Aug 19, 2020, 7:52 PM IST

ಹೈದರಾಬಾದ್(ತೆಲಂಗಾಣ)​: ಮಲ ತಂದೆಯೊಬ್ಬ ತನ್ನ ಮಗಳ ನಗ್ನ ಚಿತ್ರಗಳನ್ನು ಲ್ಯಾಪ್​ಟಾಪ್​ನಲ್ಲಿ ಸಂಗ್ರಹಿಸಿ ಕುಟುಂಬಸ್ಥರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಇಲ್ಲಿನ ನಾಚಾರಂ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಂದೆಯ ಲ್ಯಾಪ್​ಟಾಪ್​ನಲ್ಲಿ ತನ್ನ ನಗ್ನ ಚಿತ್ರಗಳನ್ನು ನೋಡಿದ ಯುವತಿ ಕುಗ್ಗಿ ಹೋಗಿದ್ದಾಳೆ. ಬಳಿಕ ತನ್ನ ತಾಯಿಗೆ ಈ ವಿಷಯದ ಬಗ್ಗೆ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೊದಲ ಹೆಂಡ್ತಿ ಸಾವನ್ನಪ್ಪಿದ ಬಳಿಕ ರಾಜೇಶ್​​ ಮತ್ತೊಂದು ಮದುವೆ ಮಾಡಿಕೊಂಡಿದ್ದನು. ಎರಡನೇ ಹೆಂಡತಿಯ ಮಗಳ ನಗ್ನ ಫೋಟೋಗಳನ್ನು ತನ್ನ ಲ್ಯಾಪ್​ಟಾಪ್​ನಲ್ಲಿ ಸಂಗ್ರಹಿಸಿದ್ದಾನೆ. ಯಾವುದೋ ಕಾರಣಕ್ಕೆ ತಂದೆಯ ಲ್ಯಾಪ್​ಟಾಪ್​ ಬಳಸುವಾಗ ಯುವತಿ ಕಣ್ಣಿಗೆ ಅವಳದ್ದೇ ನಗ್ನ ಚಿತ್ರಗಳು ಬಿದ್ದಿವೆ. ಕೂಡಲೇ ಆಕೆ ತನ್ನ ತಾಯಿಗೆ ಮಾಹಿತಿ ಮುಟ್ಟಿಸಿದಾಗ ಮಲತಂದೆಯ ನೀಚ ಕೃತ್ಯ ಬಯಲಾಗಿದೆ.

ತಾಯಿ ಮತ್ತು ಮಗಳು ದೂರು ನೀಡಿದ್ದು, ದೂರಿನನ್ವಯ ರಾಜೇಶ್​ನನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಕಿರಣ್​ ಕುಮಾರ್​ ತಿಳಿಸಿದ್ದಾರೆ.

ABOUT THE AUTHOR

...view details