ಅಹಮದಾಬಾದ್:ಇಲ್ಲಿನ ಸಾಬರಮತಿ ಟೋಲ್ಬಳಿ ಹೋಟೆಲ್ವೊಂದರಲ್ಲಿ ವಾಗ್ವಾದದ ಬಳಿಕ ದಲಿತ ಯುವಕನೊಬ್ಬನನ್ನು ಬೆತ್ತಲುಗೊಳಿಸಿ ಗುಂಪೊಂದು ಹಲ್ಲೆ ಮಾಡಲಾಗಿದೆ.
ಹಲ್ಲೆಗೂ ಮುನ್ನ ಇಬ್ಬರು ದಲಿತ ಯುವಕರು ಹಾಗೂ ಹೋಟೆಲ್ ಮಾಲೀಕನ ನಡುವೆ ವಾಗ್ವಾದವಾಗಿದ್ದು, ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸರ ಪ್ರಕಾರ ಭಾನುವಾರ ಸಂಜೆ 7.30ರ ಸುಮಾರಿಗೆ ಪ್ರಜ್ಞೇಶ್ ಪಾರ್ಮರ್ ಹಾಗೂ ಜಯೇಶ್ ಎಂಬ ಇಬ್ಬರು ದಲಿತ ಯುವಕರು ಹೋಟೆಲ್ನೊಳಗೆ ಹೋಗಿದ್ದಾರೆ. ಹೋಟೆಲ್ ಮಾಲೀಕರಿಗೂ ಯುವಕರಿಗೂ ವಾಗ್ವಾದ ನಡೆಯುತ್ತದೆ.