ಅಮ್ರೋಹಾ (ಉತ್ತರ ಪ್ರದೇಶ):ಇಲ್ಲಿನ ದೋಂಖೇರಾ ಗ್ರಾಮದಲ್ಲಿ 17 ವರ್ಷದ ದಲಿತ ಯುವಕನನ್ನು ನಾಲ್ವರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ವಿಕಾಸ್ ಜಾಧವ್ (17) ತನ್ನ ಮನೆಯಲ್ಲಿ ಮಲಗಿದ್ದಾಗ ಲಾಲಾ ಚೌಹಾನ್, ಹೋರಾಮ್ ಚೌಹಾನ್, ಜಸ್ವೀರ್ ಮತ್ತು ಭೂಷಣ್ ಎಂಬ ನಾಲ್ವರು ತಡರಾತ್ರಿ ಬಂದು ಆತನ ಮೇಲೆ ಗುಂಡು ಹಾರಿಸಿದ್ದಾರೆ.
"ಗುಂಡಿನ ಶಬ್ದ ಕೇಳಿ ನಾವು ವಿಕಾಸ್ನನ್ನು ರಕ್ಷಿಸಲು ಧಾವಿಸಿದೆವು. ಆಗ ನಾಲ್ವರು ಓಡಿಹೋಗಿದ್ದರು. ವಿಕಾಸ್ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ನಾವು ಆತನನ್ನು ಆಸ್ಪತ್ರೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಆತ ಸಾವನ್ನಪ್ಪಿದ್ದ" ಎಂದು ಮೃತ ವಿಕಾಸ್ ಜಾಧವ್ ತಂದೆ ಓಂ ಪ್ರಕಾಶ್ ಜಾಧವ್ ಹೇಳಿದ್ದಾರೆ.