ಕರ್ನಾಟಕ

karnataka

ETV Bharat / bharat

ಸುಪ್ರೀಂನಲ್ಲಿ ಇಂದು ಡಿಕೆಶಿ ಮೇಲ್ಮನವಿ ಅರ್ಜಿ ವಿಚಾರಣೆ

ಕ್ರಮ ಹಣ ವರ್ಗಾವಣೆ ಕೇಸಿನಡಿ ಜೈಲು ವಾಸ ಅನುಭವಿಸಿ ಹೊರ ಬಂದಿದ್ದ ಡಿ.ಕೆ.ಶಿವಕುಮಾರ್​, ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯಲಿದೆ.

D.k.Shivkumar
ಡಿಕೆಶಿ

By

Published : Jan 6, 2020, 10:40 AM IST

ನವದೆಹಲಿ: ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಇ.ಡಿಯಿಂದ ಜೈಲು ವಾಸ ಅನುಭವಿಸಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್​, ಈ ಬಗ್ಗೆ ಸುಪ್ರೀಂ ಕೋರ್ಟ್​ಗೆ ತನ್ನ ಮೇಲಿರುವ ಪ್ರಕರಣ ಕೈ ಬಿಡುವಂತೆ ಮೇಲ್ಮನವಿ ಸಲ್ಲಿಸಿದ್ದು, ಈ ಬಗ್ಗೆ ಇಂದು ವಿಚಾರಣೆ ನಡೆಯಲಿದೆ.

2017ರ ಆಗಸ್ಟ್ 2ರಂದು ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಸೇರಿದ ಆಸ್ತಿ - ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಹಣಕಾಸಿನ ದಾಖಲೆಗಳನ್ನು ವಶಪಡಿಸಿಕೊಂಡು ಐ ಟಿ ಕಾಯ್ದೆ ಸೆಕ್ಷನ್ 276ಸಿ(1), 277ರಡಿ ಮತ್ತು ಐಪಿಸಿ ಸೆಕ್ಷನ್ 120-ಬಿ ಅಡಿ ಪ್ರಕರಣ ದಾಖಲಿಸಿಕೊಂಡಿತ್ತು.

ನಂತರ ವಿಚಾರಣೆ ಸಂದರ್ಭದಲ್ಲಿ ಸೂಕ್ತ ದಾಖಲೆಗಳಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಡಿಕೆಗೆ ತಿಹಾರ್​ ಜೈಲು ವಾಸ ಅನುಭವಿಸಿ, ಜಾಮೀನು ಪಡೆದು ಬಿಡುಗಡೆಗೊಂಡಿದ್ದರು. ನಂತರ 120-ಬಿ ಅಡಿ ಪ್ರಕರಣವನ್ನು ಕೈ ಬಿಡುವಂತೆ ಹಾಗೂ ಶಿವಕುಮಾರ್​ ಪತ್ನಿ ವಿಚಾರಣೆ ದೆಹಲಿಯ ಬದಲು ಬೆಂಗಳೂರಿನಲ್ಲಿಯೇ ನಡೆಸಿ ಎಂದು ಸುಪ್ರೀಂಗೆ ಡಿಕೆಶಿ ಮೇಲ್ಮನವಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯಲಿದೆ.

For All Latest Updates

ABOUT THE AUTHOR

...view details