ಮುಂಬೈ: ಈಗಾಗಲೇ ಕೊರೊನಾ ಹೊಡೆತಕ್ಕೆ ನಲುಗಿ ಹೋಗಿರುವ ಮಹಾರಾಷ್ಟ್ರಕ್ಕೆ ಇಂದು ನಿಸರ್ಗ ಚಂಡಮಾರುತ ಅಪ್ಪಳಿಸಿದೆ.
ಮಹಾರಾಷ್ಟ್ರಕ್ಕೆ ಅಪ್ಪಳಿಸಿಯೇ ಬಿಡ್ತು ನಿಸರ್ಗ!: ಕೊರೊನಾ ಜತೆ ಚಂಡಮಾರುತದ ಭಯ - ನಿಸರ್ಗ ಚಂಡಮಾರುತ
ನಿಸರ್ಗ ಚಂಡಮಾರುತವು ಮಹಾರಾಷ್ಟ್ರ ಕರಾವಳಿಗೆ ಅಪ್ಪಳಿಸಿದ್ದು, ಕೊರೊನಾ ಬೆನ್ನಲ್ಲೇ ನಿಸರ್ಗದ ಅಬ್ಬರ ಅಲ್ಲಿನ ಜನರಲ್ಲಿ ತುಸು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ನಿಸರ್ಗದ ಅಬ್ಬರದಿಂದಾಗುವ ಅನಾಹುತ ತಡೆಗಟ್ಟಲು ಅಲ್ಲಿನ ಪಾಲಿಕೆಯೂ ಸಿದ್ಧವಾಗಿದೆ.
ನಿಸರ್ಗ
ಈಗಾಗಲೇ ನಿಸರ್ಗ ಚಂಡಮಾರುತವು ಮಹಾರಾಷ್ಟ್ರ ಕರಾವಳಿಗೆ ಅಪ್ಪಳಿಸಿದೆ. ಮುಂದಿನ 3 ಗಂಟೆಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿಂದಾಗಿ ಜನತೆ ಯಾವ ರೀತಿ ಮುಂಜಾಗ್ರತಾ ಕ್ರಮ ವಹಿಸಬೇಕು. ಈ ಸಮಯದಲ್ಲಿ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು ಪಾಲಿಕೆ ಮಾರ್ಗಸೂಚಿಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ.
Last Updated : Jun 3, 2020, 2:48 PM IST