ಭುವನೇಶ್ವರ್:ಒಡಿಶಾದ ಬೋಧ್, ಕಾಲಹಂದಿ, ಸಂಬಲ್ಪುರ್, ದಿಯೋಗಢ ಮತ್ತು ಸುಂದರ್ಗಢಗಳಲ್ಲಿ ಭಾರಿ ಅಂದರೆ ಭಾರಿ ಪ್ರಮಾಣದಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಂಡಮಾರುತ ವಾಯವ್ಯ ದಿಕ್ಕಿನತ್ತ ಸಾಗುತ್ತಿದ್ದು, ಸುಮಾರು 175- 185 ಕಿ.ಮೀ. ವೇಗದಲ್ಲಿ ಸಾಗುತ್ತಿದೆ. ಇದು ಮೇ 3ರ ವೇಳೆಗೆ 205 ಕಿ.ಮಿ. ವೇಗವನ್ನು ಪಡೆದುಕೊಳ್ಳಲಿದೆ ಎಂದು ಇಂಡಿಯನ್ ಮೆಟ್ರೋಲಾಜಿಕಲ್ ಡಿಪಾರ್ಟ್ಮೆಂಟ್ ಹೇಳಿದೆ.
ಪ್ರಸ್ತುತ ಗಂಜಾಮ್, ಪುರಿ, ಜಗತ್ಸಿಂಗ್ಪುರ್, ಕೇಂದ್ರಪಾರಾಗಳಲ್ಲೂ ಚಂಡಮಾರುತ 110-120 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಜನ ಮನೆ ಬಿಟ್ಟು ಹೊರ ಬಾರದಂತೆ ಹಾಗೂ ಇನ್ನಿತರ ಚಟುವಟಿಕೆಗಳನ್ನ ನಿಲ್ಲಿಸುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಈ ಪರಿಣಾಮ ರಾಜ್ಯದಲ್ಲೂ ಅಲ್ಲಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಇನ್ನು ಬಂಗಾಳ ಕೊಲ್ಲಿ ಹಾಗೂ ಹಿಂದೂ ಮಹಾಸಾಗರದ ತೀರ ಪ್ರದೇಶಗಳ ಜನ ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಮುನ್ನೆಚ್ಚರಿಕೆ ರವಾನಿಸಿದೆ.