ಕರ್ನಾಟಕ

karnataka

ETV Bharat / bharat

ರುದ್ರಿಯಾದ ‘ಬುಲ್​ಬುಲ್​’ ಕಂಡು ಬೆಚ್ಚಿಬಿದ್ದ ಎರಡು ರಾಜ್ಯದ ಜನ!

ಕ್ಯಾರ್​ ಮತ್ತು ಮಹಾ ಚಂಡಮಾರುತಗಳ ಅಬ್ಬರಕ್ಕೆ ಜನರು ಈಗಾಗಲೇ ತತ್ತರಿಸಿ ಹೋಗಿದ್ದರು. ಆದ್ರೆ ಇದರ ಬೆನ್ನಲ್ಲೇ 'ಬುಲ್​​ಬುಲ್'​ ಚಂಡಮಾರುತ ಕರಾವಳಿಗೆ ಅಪ್ಪಳಿಸಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಬುಲ್​ಬುಲ್​

By

Published : Nov 9, 2019, 12:00 PM IST

ಕೋಲ್ಕತ್ತಾ/ಭುವನೇಶ್ವರ್​:ಕ್ಯಾರ್​ ಮತ್ತು ಮಹಾ ಚಂಡಮಾರುತಗಳ ಅಬ್ಬರದ ಬೆನ್ನಲ್ಲೇ 'ಬುಲ್​​ಬುಲ್'​ ಚಂಡಮಾರುತ ದೇಶದ ಕರಾವಳಿಗೆ ಅಪ್ಪಳಿಸಿದೆ. ಈ ವರ್ಷ ಭಾರತದ ಕರಾವಳಿ ತೀರಗಳ ಮೇಲೆ ಅಪ್ಪಳಿಸುತ್ತಿರುವ 7 ನೇ ಚಂಡಮಾರುತ ಇದಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಬುಲ್​​ಬುಲ್ ಚಂಡಮಾರುತ ತೀವ್ರಗೊಂಡಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಸೈಕ್ಲೋನ್​ ತೀವ್ರತೆ ಹೆಚ್ಚಾಗಿದ್ದು, 135 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ವಿಪರೀತ ಮಳೆಗೆ ಜನ ತತ್ತರಿಸಿದ್ದು, ವಾಹನ ಸಂಚಾರ ಸೇರಿದಂತೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಸಾಧ್ಯತೆ ಇದ್ದು, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮವಾಗಿ ಹೈ ಅಲರ್ಟ್​ ಘೋಷಣೆ ಮಾಡಿವೆ. ಭಾನುವಾರದವರೆಗೆ ಚಂಡಮಾರುತದ ಅಬ್ಬರ ಇರುತ್ತದೆ ಎನ್ನಲಾಗಿದೆ.

ABOUT THE AUTHOR

...view details