ಕರ್ನಾಟಕ

karnataka

ETV Bharat / bharat

ಕೊರೊನಾ ಪರೀಕ್ಷೆಗೂ ತಟ್ಟಿದ ಅಂಫಾನ್​ ಬಿಸಿ: ಪಶ್ಚಿಮ ಬಂಗಾಳದಲ್ಲಿ ಸಾವಿನ ಸಂಖ್ಯೆ 193ಕ್ಕೆ ಏರಿಕೆ - ಪಶ್ಚಿಮ ಬಂಗಾಳದಲ್ಲಿ ಸಾವಿನ ಸಂಖ್ಯೆ 193ಕ್ಕೆ ಏರಿಕೆ

ಅಂಫಾನ್ ಚಂಡಮಾರುತದ ಪ್ರಭಾವದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Cyclone Amphan
ಆಂಫಾನ್​ನಿಂದ ಕೊರೊನಾ ಪರೀಕ್ಷೆಯಲ್ಲಿ ವಿಳಂಬ

By

Published : May 23, 2020, 10:33 AM IST

Updated : May 23, 2020, 11:04 AM IST

ಕೋಲ್ಕತ್ತಾ: ಅಂಫಾನ್ ಚಂಡಮಾರುತದ ಪ್ರಭಾವದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಕೊರೊನಾ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಗಿದೆ. ಸಾವಿರಾರು ಮರಗಳು, ವಿದ್ಯುತ್ ಕಂಬಗಳು ರಸ್ತೆ ಮೇಲೆ ಬಿದ್ದಿದ್ದು, ಹೆಚ್ಚಿನ ತಂತ್ರಜ್ಞರು ಪ್ರಯೋಗಾಲಯಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ಮತ್ತು ಬುಧವಾರ ಪರೀಕ್ಷಿಸಿದ ಮಾದರಿಗಳ ಸಂಖ್ಯೆ ಕ್ರಮವಾಗಿ 8,712 ಮತ್ತು 8,722 ಆಗಿದ್ದರೆ, ಗುರುವಾರ 4,242 ಮತ್ತು ಶುಕ್ರವಾರ 5,355ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.

ಅನೇಕ ಪ್ರಯೋಗಾಲಯಗಳು ಚಂಡಮಾರುತದ ಮುನ್ನೆಚ್ಚರಿಕೆಯಿಂದಾಗಿ ಬುಧವಾರ ಬಾಗಿಲು ಹಾಕಿದ್ದವು. ಗುರುವಾರ ಮತ್ತು ಶುಕ್ರವಾರ ಹಲವಾರು ಸ್ಥಳಗಳಲ್ಲಿನ ತಂತ್ರಜ್ಞರು ಸಂಚಾರ ಸಮಸ್ಯೆಯಿಂದ ಪ್ರಯೋಗಾಲಯಗಳನ್ನು ತಲುಪಲು ಸಾಧ್ಯವಾಗಿಲ್ಲ. ಕೆಲವು ಪ್ರದೇಶಗಳಲ್ಲಿ ಮಾದರಿಗಳನ್ನು ಹೊತ್ತ ಆಂಬುಲೆನ್ಸ್‌ಗಳು ಪ್ರಯೋಗಾಲಯಗಳನ್ನು ತಲುಪಲು ಸಧ್ಯಾವಾಗಿಲ್ಲ. ಹೀಗಾಗಿ ಪರೀಕ್ಷಾ ಸಂಖ್ಯೆ ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಗುರುವಾರದಿಂದ ಕನಿಷ್ಠ ಆರು ಜನ ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 193ಕ್ಕೆ ತಲುಪಿದೆ ಎಂದು ಇಲಾಖೆ ಹೊರಡಿಸಿದ ಬುಲೆಟಿನ್​ನಲ್ಲಿ ತಿಳಿಸಿದೆ.

ಕೋಲ್ಕತ್ತಾ ನಗರದಲ್ಲಿ ನಾಲ್ಕು ಮತ್ತು ಉತ್ತರ 24 ಪರಗಣ ಜಿಲ್ಲೆಯಿಂದ ಎರಡು ಸಾವುಗಳು ವರದಿಯಾಗಿವೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 3,332 ಜನರು ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 1,846 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, 1,221 ಜನ ಚೇತರಿಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ.

Last Updated : May 23, 2020, 11:04 AM IST

ABOUT THE AUTHOR

...view details