ಕರ್ನಾಟಕ

karnataka

ETV Bharat / bharat

ಎಚ್ಚರ... ಎಚ್ಚರ.... ಪಿಎಂ ರಿಲೀಫ್ ಫಂಡ್​ ಮೇಲೆ ಡಿಜಿಟಲ್​ ವಂಚಕರ ಕರಿನೆರಳು...

ನೈಜ ಐಡಿಗಳಂತೆಯೇ ಇತರ ಬ್ಯಾಂಕ್​ಗಳ ಹೆಸರಿನಲ್ಲಿ ರಚಿಸಲಾದ ಐಡಿಗಳೊಂದಿಗೆ ಡಿಜಿಟಲ್ ವಂಚಕರು ಜನರನ್ನು ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಹುಷಾರ್​ ಆಗಿರಬೇಕು ಎಂದು ಬ್ಯಾಂಕ್​ಗಳ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.

cyber-fraud-cases-increased-in-pm-cm-relief-fund-during-corona-epidemic
ಪಿಎಂ ರಿಲೀಫ್ ಫಂಡ್​ ಮೇಲೆ ಡಿಜಿಟಲ್​ ವಂಚಕರ ಕರಿನೆರಳು

By

Published : Apr 15, 2020, 8:57 PM IST

ಡೆಹ್ರಾಡೂನ್ (ಉತ್ತರಾಖಂಡ) : ದೇಶಾದ್ಯಂತದ ಕೊರೊನಾ ಪರಿಹಾರ ನಿಧಿಗೆ ಸಹಾಯ ಮಾಡುವ ಮೂಲಕ ಪಿಎಂ ರಿಲೀಫ್ ಫಂಡ್​ಗೆ ಬೆಂಬಲ ನೀಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಮತ್ತೊಂದೆಡೆ ಸೈಬರ್ ಅಪರಾಧಿಗಳು ನಕಲಿ ಬ್ಯಾಂಕ್ ಐಡಿ ರಚಿಸಲು ಮತ್ತು ಪಿಎಂ ರಿಲೀಫ್ ಫಂಡ್‌ ಹೆಸರಿನಲ್ಲಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ವಂಚನೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಈ ಬಗ್ಗೆ, ಎಸ್‌ಬಿಐ ಅಧಿಕಾರಿಯೊಬ್ಬರು "pm cares@sbi" ಅನ್ನು ಭಾರತ ಸರ್ಕಾರವು ಪಿಎಂ ರಿಲೀಫ್ ಫಂಡ್‌ಗಾಗಿ ಡಿಜಿಟಲ್ ಪಾವತಿಯಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ. ಇದಲ್ಲದೇ, ಬೇರೆ ಯಾವುದೇ ಖಾತೆ ಇಲ್ಲ. ಅಂತಹ ಯಾವುದೇ ಮಾಹಿತಿ ಬಂದರೆ ಎಸ್‌ಬಿಐ ನೌಕರರು ಅಥವಾ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ಎಂದು ಎಸ್‌ಬಿಐ ಹೂಡಿಕೆ ಸಲಹೆಗಾರ ತಿಳಿಸಿದ್ದಾರೆ.

ಎಸ್‌ಬಿಐ ತಜ್ಞರ ಪ್ರಕಾರ, ನೈಜ ಐಡಿಗಳಂತೆಯೇ ಇತರ ಬ್ಯಾಂಕ್​ಗಳ ಹೆಸರಿನಲ್ಲಿ ರಚಿಸಲಾದ ಐಡಿಗಳೊಂದಿಗೆ ಡಿಜಿಟಲ್ ವಂಚಕರು ಜನರನ್ನು ಮೋಸಗೊಳಿಸುತ್ತಾರೆ.

ಪಿಎಂ ರಿಲೀಫ್​ ಫಂಡ್‌ನ ಡಿಜಿಟಲ್ ಪಾವತಿ ಮಾಡಲು ನೆನಪಿನಲ್ಲಿಡಬೇಕಾದ ವಿಷಯಗಳು:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೂಡಿಕೆ ಸಲಹೆಗಾರ ಜಿತೇಂದ್ರ ಕುಮಾರ್ ದಾದೋನಾ, ಸರ್ಟ್ ಇನ್ ಹೆಸರಿನ ಭಾರತ ಸರ್ಕಾರದ ಒಂದು ಸೈಟ್ ಇದೆ. ಅಂದರೆ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ. ಕೆಲವು ಯುಪಿಐ ಕೋಡ್‌ಗಳಲ್ಲಿ ಬ್ಯಾಂಕ್​ಗಳ ಹೆಸರಿನಲ್ಲಿ ನಕಲಿ ಐಡಿಗಳಿವೆ ಎಂದು ಕೇಳಿಬಂದಿದ್ದು, ಸೈಬರ್ ಖದೀಮರು ಸಹ ಪಿಎಂ ರಿಲೀಫ್ ಫಂಡ್ ಹೆಸರಿನಲ್ಲಿ ಸಾರ್ವಜನಿಕರಿಂದ ಮೋಸದಿಂದ ಹಣವನ್ನು ಸಂಗ್ರಹಿಸುತ್ತಿವೆ. ಈ ಕುರಿತು ದೇಶಾದ್ಯಂತ ಜಾಗೃತಿ ಮೂಡಿಸುವುದರ ಜೊತೆಗೆ ನಾಗರಿಕ ಮತ್ತು ಸೈಬರ್ ಪೊಲೀಸರನ್ನು ಸಹ ಎಚ್ಚರಿಸಲಾಗಿದೆ ಎಂದು ಹೇಳಿದರು.

ಸೈಬರ್ ಪೊಲೀಸರು ಏನು ಹೇಳುತ್ತಾರೆ?

ಡೆಹ್ರಾಡೂನ್ ಸೈಬರ್ ಪೊಲೀಸ್ ಠಾಣೆ ಸಿಒ ಅಂಕುಶ್ ಮಿಶ್ರಾ, ಪಿಎಂ ರಿಲೀಫ್ ಫಂಡ್ ಹೆಸರಿನಲ್ಲಿ ನಕಲಿ ಯುಪಿಐ ಐಡಿಗಳನ್ನು ರಚಿಸುವ ಮೂಲಕ ಈ ಎಲ್ಲಾ ವಂಚನೆಗಳು ನಡೆಯುತ್ತಿವೆ. ಡಿಜಿಟಲ್​ ವಂಚಕರ ತನಿಖೆ ಮತ್ತು ಹುಡುಕಾಟದಲ್ಲಿ ಸೈಬರ್ ಪೊಲೀಸರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಉತ್ತರಾಖಂಡ ಸೈಬರ್ ಪೊಲೀಸರು ಆ ಮೋಸದ ವೆಬ್‌ಸೈಟ್‌ಗಳು, ಐಡಿಗಳು ಮತ್ತು ಇತರ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದಲ್ಲದೇ, ಪ್ರಧಾನಿ ಪರಿಹಾರ ನಿಧಿಯ ಹೆಸರಿನಲ್ಲಿ, ವಂಚನೆ ಮಾಡುತ್ತಿರುವ ರೀತಿಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಿದೆ.

For All Latest Updates

ABOUT THE AUTHOR

...view details