ಕರ್ನಾಟಕ

karnataka

ETV Bharat / bharat

ಸೈಬರ್ ಅಪರಾಧಗಳ ದಾಖಲೆಯಿಂದ ಆಘಾತಕಾರಿಯುತ ಅಂಶ: ಕರ್ನಾಟಕದ ಕ್ರೈಂ ರೇಟ್​ ಎಷ್ಟು ಗೊತ್ತಾ? - ಕರ್ನಾಟಕದ ಕ್ರೈಂ ರೇಟ್ -2020

ಹೆಚ್ಚಾದ ಅಂಗೈ ಅಗಲದ ಮೊಬೈಲ್ ಹಾಗೂ​ ಡಿಜಿಟಲೀಕರಣದಿಂದ ದೇಶದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಸಹ ಮಿತಿಮೀರಿದೆ. ಸಾಮಾಜಿಕ ಜಾಲತಾಣಗಳ ಬಳಕೆಯು ಹೆಚ್ಚಾಗುತ್ತಿದೆ. ಕರ್ನಾಟಕ ಸೇರಿದಂತೆ ಇದರಿಂದಾಗುತ್ತಿರುವ ಅಪರಾಧಗಳ ಅಂಕಿ-ಸಂಖ್ಯೆ ಎಷ್ಟು ಗೊತ್ತಾ?

Cyber Crimes increased in Karnataka
ಸೈಬರ್ ಅಪರಾಧಗಳ ದಾಖಲೆ

By

Published : Oct 2, 2020, 12:01 AM IST

ಸೈಬರ್ ಅಪರಾಧಗಳ ದಾಖಲೆ ಪ್ರಕಾರ ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 44,546 ಪ್ರಕರಣಗಳು ದಾಖಲಾಗಿದ್ದು, 2018ರ ಅವಧಿಗೆ (27,248 ಪ್ರಕರಣಗಳು) ಹೋಲಿಸಿದರೆ ಇತ್ತೀಚೆಗೆ (ಶೇ. 63.5% ರಷ್ಟು) ಸೈಬರ್ ಅಪರಾಧಗಳ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ ಎಂಬ ಆಘಾತಕಾರಿಯುತ ಅಂಶ ಹೊರಬಿದ್ದಿದೆ.

2018 ರಲ್ಲಿ ಶೇ. 2.0 ಇದ್ದ ಅಪರಾಧ ಪ್ರಕರಣಗಳ ಪ್ರಮಾಣ 2019ರಲ್ಲಿ ಏಕಾಏಕಿ 3.3ಕ್ಕೆ ಜಿಗಿದಿದೆ. 2019ರಲ್ಲಿ ಶೇ. 60.4 ಅಪರಾಧ ಪ್ರಕರಣಗಳು ನೋಂದಣಿಯಾಗಿದ್ದು 44,546 ರಲ್ಲಿನ ಹೆಚ್ಚುಕಡಿಮೆ 26,891 ಪ್ರಕರಣಗಳು ವಂಚನೆಗೆ ಸಂಬಂಧಿತ ಕೇಸ್​ಗಳೇ ದಾಖಲಾಗಿವೆ ಎಂಬ ಮಾಹಿತಿ ಇದೆ. ಇನ್ನು ಲೈಂಗಿಕ ಶೋಷಣೆಗೆ ಸಂಬಂಧಿಸಿಂತೆ ಶೇ. 5.1 (2,266) ಪ್ರಕರಣಗಳು ದಾಖಲಾದರೆ ಅಪಖ್ಯಾತಿಗೆ ಸಂಬಂಧಿಸಿಂತೆ ಶೇ. 4.2 (1,874) ಪ್ರಕರಣಗಳು ನೋಂದಣಿಯಾಗಿವೆ.

ಸಂಖ್ಯಾವಾರು ಪ್ರಕರಣಗಳ ನೋಂದಣಿ ಹೀಗಿದೆ:

  • ಸುಲಿಗೆ ಸಂಬಂಧಿಸಿಂತೆ 1,842
  • ಕುಚೇಷ್ಟೆಗೆ ಸಂಬಂಧಿಸಿಂತೆ 1,385
  • ವೈಯಕ್ತಿಕ ಸೇಡಿಗೆ ಸಂಬಂಧಿಸಿಂತೆ 1,207
  • ಕೋಪ 581
  • ರಾಜಕೀಯ ಉದ್ದೇಶ 316
  • ಭಯೋತ್ಪಾದಕ ನಿಧಿಗೆ ಸಂಬಂಧಿತ 199
  • ಭಯೋತ್ಪಾದಕ ನೇಮಕಾತಿಗೆ 08
  • ದೇಶದ ವಿರುದ್ಧ ಪ್ರಚೋದನೆ/ಕುಮ್ಮಕ್ಕು 49

ಒಟ್ಟು 44,546 ಸೈಬರ್ ಅಪರಾಧಗಳಲ್ಲಿ 30,729 ಪ್ರಕರಣಗಳು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ವಿವಿಧ ನಿಬಂಧನೆಗಳಡಿ ದಾಖಲಾದರೆ, ಭಾರತೀಯ ದಂಡ ಸಂಹಿತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ 13,730 ಮತ್ತು ವಿಶೇಷ ಹಾಗೂ ಸ್ಥಳೀಯ ಕಾನೂನುಗಳ (ಎಸ್‌ಎಲ್‌ಎಲ್) ಅಡಿ 87 ಪ್ರಕರಣಗಳು ನೋಂದಣಿಯಾಗಿವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸೈಬರ್ ಅಪರಾಧಗಳು (12,020) ಕಂಡು ಬರುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶದ (11,416) ಎರಡನೇ ಸ್ಥಾನ ಮತ್ತು ಮಹಾರಾಷ್ಟ್ರ (4,967) ಮೂರರ ಜಾಗದಲ್ಲಿದೆ.

ಕ್ರಮವಾಗಿ ತೆಲಂಗಾಣದಲ್ಲಿ (2,691), ಅಸ್ಸೋಂನಲ್ಲಿ (2,231) ಪ್ರಕರಣಗಳು ದಾಖಲಾದರೆ, ಕೇಂದ್ರಾಡಳಿತ ಪ್ರದೇಶ ದೆಹಲಿಯಲ್ಲಿ ಮಾತ್ರ ಶೇ. 78 ರಷ್ಟು ಸೈಬರ್ ಅಪರಾಧಗಳು ದಾಖಲಾಗಿದೆ. ಇನ್ನು ದಾಖಲಾದ ಪ್ರಕರಣಗಳ ಆಧಾರದ ಮೇಲೆ ಸೈಬರ್ ಅಪರಾಧದ ಪ್ರಮಾಣವನ್ನು ಒಂದು ಲಕ್ಷ ಜನಸಂಖ್ಯೆಗೆ ಲೆಕ್ಕ ಹಾಕಿದರೆ ಕರ್ನಾಟಕದಲ್ಲಿ (18.2) ಅತಿ ಹೆಚ್ಚು ಕಂಡು ಬಂದಿವೆ. ಇನ್ನು ತೆಲಂಗಾಣ (7.2), ಅಸ್ಸೋಂ(6.2) ಮತ್ತು ಉತ್ತರ ಪ್ರದೇಶದಲ್ಲಿ (5.1) ಅಪರಾಧದ ಪ್ರಮಾಣ ಕಂಡು ಬಂದಿದೆ ಎಂಬ ಮಾಹಿತಿ ಇದೆ.

ಪ್ರಮುಖ ಐದು ರಾಜ್ಯಗಳ ಸೈಬರ್ ಅಪರಾಧ ಪಟ್ಟಿ ಹೀಗಿದೆ

ಕ್ರ.ಸಂ. ರಾಜ್ಯಗಳು 2017 2018 2019

ಶೇ.

(2019)

ಅ.ವಾ. ಯೋಜನಾ ಜನಸಂಖ್ಯೆ

(ಲಕ್ಷದಲ್ಲಿ) (2019)

ಒಟ್ಟು ಅಪರಾಧ ದರ

(2019)+

1 ಉತ್ತರಪ್ರದೇಶ 4971 6280 11416 25.6 2259.7 5.1 2 ಮಹಾರಾಷ್ಟ್ರ 3604 3511 4967 11.2 1225.3 4.1 3 ಕರ್ನಾಟಕ 3174 5839 12020 27.0 659.7 18.2 4 ತೆಲಂಗಾಣ 1209 1205 2691 6.0 372.8 7.2 5 ಅಸ್ಸೋಂ 1120 2022 2231 5.0 344.2 6.5

ಸಾಮಾಜಿಕ ಜಾಲತಾಣಗಳ ಬಳಕೆ, ಹೆಚ್ಚಾದ ಅಂಗೈ ಅಗಲದ ಮೊಬೈಲ್​ಗಳು ಹಾಗೂ​ ಡಿಜಿಟಲೀಕರಣದಿಂದಲೇ ಈ ದೊಡ್ಡಮಟ್ಟದ ಪ್ರಮಾಣದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಗರಿಷ್ಟ ಮಟ್ಟಕ್ಕೆ ತಲುಪಿದೆ ಎನ್ನಲಾಗುತ್ತಿದೆ.

ABOUT THE AUTHOR

...view details