ಮುಂಬೈ:ಗಡಿ ವಿಚಾರದಲ್ಲಿ ಭಾರತ -ಚೀನಾ ನಡುವೆ ಉದ್ವಿಗ್ನ ವಾತಾವರಣವಿರುವ ನಡುವೆಯೇ, ಚೀನಾ ಈಗ ಭಾರತದ ಮೇಲೆ ಸೈಬರ್ ದಾಳಿಗೆ ಮುಂದಾಗಿದೆ. ಕಳೆದ 4 ದಿನಗಳಿಂದ ಸರ್ಕಾರಿ ಕಚೇರಿ, ಬ್ಯಾಂಕ್, ಸಂವಹನ ವಲಯಗಳ ಮೇಲೆ ಚೀನಾ ಸತತ ಸೈಬರ್ ದಾಳಿ ನಡೆಸಿರುವುದಾಗಿ ಮಹಾರಾಷ್ಟ್ರ ಸೈಬರ್ ಇಲಾಖೆ ಖಚಿತಪಡಿಸಿದೆ.
ಚೀನಾದಿಂದ ಸತತ ಸೈಬರ್ ದಾಳಿ: ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ಮಾಹಿತಿ - ವಿವಿಧ ಇಲಾಖೆಗಳ ಮೇಲೆ ಚೀನಾ ಸೈಬರ್ ದಾಳಿ
ಕಳೆದ ನಾಲ್ಕು ದಿನಗಳಲ್ಲಿ ಚೀನಾದ ಚೆಂಗ್ಡು ನಗರದಿಂದ 40,300 ಸೈಬರ್ ದಾಳಿಗಳು ನಡೆದಿವೆ. ಮಹಾರಾಷ್ಟದ ಸೈಬರ್ ವಿಭಾಗ ನಕಲಿ ವೆಬ್ಸೈಟ್ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾಗ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಕಳೆದ ನಾಲ್ಕು ದಿನಗಳಲ್ಲಿ ಚೀನಾದ ಚೆಂಗ್ಡು ನಗರದಿಂದ 40,300 ಸೈಬರ್ ದಾಳಿಗಳು ನಡೆದಿವೆ. ಮಹಾರಾಷ್ಟದ ಸೈಬರ್ ವಿಭಾಗ ನಕಲಿ ವೆಬ್ಸೈಟ್ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾಗ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಚೀನಾ 'ncov2019@gov.in' ನಂತಹ ನಕಲಿ ಲಿಂಕ್ಗಳ ಮೂಲಕ ವಿವಿಧ ಇಲಾಖೆಗಳ ಮೇಲೆ ದಾಳಿ ಮಾಡುತ್ತಿದೆ. ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಧಿಕೃತ ವೆಬ್ಸೈಟ್ಗಳನ್ನು ತೆರೆಯುವಾಗ ಜಾಗರೂಕರಾಗಿರಿ. ನಕಲಿ ವೆಬ್ಸೈಟ್ಗಳಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಗೌಪ್ಯ ಮಾಹಿತಿ ಹಂಚಿಕೊಳ್ಳಬೇಡಿ. ವಿಶೇಷವಾಗಿ ಬ್ಯಾಂಕ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. ಆನ್ಲೈನ್ ಲಾಟರಿ ಹೆಸರಿನಲ್ಲಿ ಮೇಲ್ ಐಡಿ, ಮೊಬೈಲ್ ಸಂಖ್ಯೆ ಕೇಳುತ್ತಾರೆ ಹಂಚಿಕೊಳ್ಳಬೇಡಿ ಎಂದು ತಿಳಿಸಿದ್ದಾರೆ.