ವಿಜಯವಾಡ: ಲಾಕ್ಡೌನ್ ಕೊಂಚ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಪಾನ್ ಅಂಗಡಿ ತೆರೆದ ಮಾಲೀಕನಿಗೆ ಶಾಕ್ ಆಗಿದ್ದು, ಅಂಗಡಿಯಲ್ಲಿದ್ದ ಹಣವನ್ನು ಗೆದ್ದಲುಗಳು ತಿಂದುಹಾಕಿವೆ.
ವಿಜಯವಾಡ ಪಟ್ಟಣದ ಕೊತ್ತಪೇಟೆ ಕೋಮಲವಿಲಾಸ್ ಕೇಂದ್ರದಲ್ಲಿರುವ ಪಾನ್ ಅಂಗಡಿಯನ್ನು ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಮುಚ್ಚಲಾಗಿತ್ತು. ಲಾಕ್ಡೌನ್ನಿಂದ ಕೊಂಚ ರಿಲೀಫ್ ಸಿಕ್ಕ ಹಿನ್ನೆಲೆಯಲ್ಲಿ ಮಾಲೀಕ ಅಂಗಡಿ ಬಾಗಿಲು ತೆರೆದಾಗ ತಾನಿಟ್ಟಿದ್ದ ಹಣಕ್ಕೆ ಗೆದ್ದಲು ಹತ್ತಿರುವುದು ತಿಳಿದಿದೆ.