ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಜನವರಿ 31ರಂದು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (ಸಿಟಿಇಟಿ)ಯನ್ನು ನಡೆಸಲು ನಿರ್ಧರಿಸಿದೆ.
ದೇಶದಾದ್ಯಂತ ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮುಂದಿನ ವಾರ ಪ್ರವೇಶಪತ್ರವನ್ನು ನೀಡಲಾಗುವುದು ಸಿಬಿಎಸ್‌ಇ ಬೋರ್ಡ್ ತಿಳಿಸಿದೆ.
ಸಿಟಿಇಟಿ ಪರೀಕ್ಷೆಯನ್ನು ಜುಲೈ 2020ರಲ್ಲಿ ನಡೆಸಬೇಕಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದಾಗಿ ವಿಳಂಬವಾಯಿತು. ಅಭ್ಯರ್ಥಿಗಳ ಅನುಕೂಲಕ್ಕಾಗಿ 23 ನಗರಗಳಲ್ಲಿ ಹೊಸ ಸಿಟಿಇಟಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
ಸಿಬಿಎಸ್‌ಇ ಪ್ರಕಾರ, ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳಿಗೆ ಮುಂದಿನ ವಾರದೊಳಗೆ ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ನೀಡಲಾಗುವುದು.
ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಸಿಬಿಎಸ್‌ಇ ನಡೆಸುತ್ತಿರುವ ಪ್ರತಿಷ್ಠಿತ ಸಿಟಿಇಟಿ ಪರೀಕ್ಷೆಯನ್ನು ಜನವರಿ 31ರಂದು ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ. ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರದ ಸ್ಥಳವನ್ನು ತಾವೇ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ ಎಂದರು.
ಓದಿ:ಶಾಲೆಗಳಲ್ಲಿ ವಿದ್ಯಾರ್ಥಿಗಳ ಪೂರ್ಣ ದಾಖಲಾತಿ ಖಚಿತಪಡಿಸಿಕೊಳ್ಳಿ: ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ
ಸಿಟಿಇಟಿ ಪರೀಕ್ಷೆಯನ್ನು ಈ ಹಿಂದೆ ದೇಶದ 112 ನಗರಗಳಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈಗ ಕೇಂದ್ರ ಶಿಕ್ಷಣ ಸಚಿವಾಲಯವು ಮಾಡಿದ ಹೊಸ ವ್ಯವಸ್ಥೆಗಳ ಅಡಿಯಲ್ಲಿ 135 ನಗರಗಳಲ್ಲಿ ಪರೀಕ್ಷೆ ನಡೆಸಲಾಗುವುದು.
ಈ ವರ್ಷ ಜೆಇಇ ಅಡ್ವಾನ್ಸ್ಡ್ 2021 ಪರೀಕ್ಷೆಯನ್ನು ಜುಲೈ 3ರಂದು ಕಂಪ್ಯೂಟರ್ ಆಧಾರಿತ ಪರೀಕ್ಷಾ ಕ್ರಮದಲ್ಲಿ ನಡೆಸಲಾಗುವುದು. ಮತ್ತೊಂದೆಡೆ ಜೆಇಇ ಮುಖ್ಯ ಪರೀಕ್ಷೆಗಳು ಈ ವರ್ಷ ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿವೆ. ವೇಳಾಪಟ್ಟಿಯ ಪ್ರಕಾರ, ಜೆಇಇ ಮುಖ್ಯ ಪರೀಕ್ಷೆಯ ಮೊದಲ ಸೆಷನ್ ಫೆಬ್ರವರಿ 23 ಮತ್ತು 26ರ ನಡುವೆ ನಡೆಸಲಾಗುವುದು.