ಕರ್ನಾಟಕ

karnataka

ETV Bharat / bharat

ಇಂದು ಸಿಎಸ್ಐಆರ್ ಸ್ಥಾಪನಾ ದಿನ: ಈ ಸಂಸ್ಥೆಯ ಕೊಡುಗೆಗಳೇನು..? - achievements of csir

ಭಾರತದ ಅತಿದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿರುವ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ 1942ರ ಸೆಪ್ಟೆಂಬರ್ 26ರಂದು ಸ್ಥಾಪನೆಗೊಂಡಿತು. ಇದರಲ್ಲಿ ಸುಮಾರು 4600 ಸಕ್ರಿಯ ವಿಜ್ಞಾನಿಗಳಲ್ಲಿ ಸುಮಾರು 8000 ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯಿದ್ದು, ಸಂಸ್ಥೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಧನಸಹಾಯ ನೀಡುತ್ತಿದೆ.

csir
csir

By

Published : Sep 26, 2020, 7:03 AM IST

ಹೈದರಾಬಾದ್: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಭಾರತದ ಅತಿದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಸಂಸ್ಥೆಯಾಗಿದ್ದು, ಇದು 26 ಸೆಪ್ಟೆಂಬರ್ 1942 ರಂದು ನವದೆಹಲಿಯಲ್ಲಿ ಸ್ಥಾಪನೆಗೊಂಡಿತು.

ಸಿಎಸ್ಐಆರ್​ಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಧನಸಹಾಯ ನೀಡುತ್ತಿದ್ದು, ಇದು 1,860ರ ಸೊಸೈಟಿ ನೋಂದಣಿ ಕಾಯ್ದೆಯ ಮೂಲಕ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಪ್ಯಾನ್ - ಇಂಡಿಯಾ ಉಪಸ್ಥಿತಿ ಹೊಂದಿರುವ ಸಿಎಸ್ಐಆರ್ 38 ರಾಷ್ಟ್ರೀಯ ಪ್ರಯೋಗಾಲಯಗಳು, 39 ಔಟ್​ರೀಚ್ ಕೇಂದ್ರಗಳು, 3 ಇನ್ನೋವೇಶನ್ ಕಾಂಪ್ಲೆಕ್ಸ್ ಮತ್ತು 5 ಘಟಕಗಳ ಕ್ರಿಯಾತ್ಮಕ ಜಾಲವನ್ನು ಹೊಂದಿವೆ.

ಸಿಎಸ್ಐಆರ್​ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಸುಮಾರು 4,600 ಸಕ್ರಿಯ ವಿಜ್ಞಾನಿಗಳಲ್ಲಿ ಸುಮಾರು 8,000 ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿ ಇದ್ದಾರೆ.

ರೇಡಿಯೋ ಮತ್ತು ಬಾಹ್ಯಾಕಾಶ ಭೌತಶಾಸ್ತ್ರ, ಸಾಗರಶಾಸ್ತ್ರ, ಭೂ ಭೌತಶಾಸ್ತ್ರ, ರಾಸಾಯನಿಕಗಳು, ಔಷಧಗಳು, ಜೀನೋಮಿಕ್ಸ್, ಜೈವಿಕ ತಂತ್ರಜ್ಞಾನ ಮತ್ತು ನ್ಯಾನೊತಂತ್ರಜ್ಞಾನದಿಂದ ಗಣಿಗಾರಿಕೆ, ಏರೋನಾಟಿಕ್ಸ್, ಉಪಕರಣ, ಪರಿಸರ ಇಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನದಿಂದ ಸಿಎಸ್‌ಐಆರ್ ವ್ಯಾಪಕವಾಗಿ ಹೆಸರು ಮಾಡಿದೆ.

ಸಿಮಿಗೊ ಇನ್ಸ್ಟಿಟ್ಯೂಶನ್ಸ್ ರ‍್ಯಾಂಕಿಂಗ್ ವರ್ಲ್ಡ್ ರಿಪೋರ್ಟ್ 2014ರ ಪ್ರಕಾರ ಸಿಎಸ್ಐಆರ್ ವಿಶ್ವಾದ್ಯಂತ 4,851 ಸಂಸ್ಥೆಗಳಲ್ಲಿ 84ನೇ ಸ್ಥಾನದಲ್ಲಿದೆ ಮತ್ತು ಟಾಪ್ 100 ಜಾಗತಿಕ ಸಂಸ್ಥೆಗಳಲ್ಲಿ ಏಕೈಕ ಭಾರತೀಯ ಸಂಸ್ಥೆಯಾಗಿದೆ. ಸಿಎಸ್ಐಆರ್ ಏಷ್ಯಾದಲ್ಲಿ 17ನೇ ರ‍್ಯಾಂಕ್ ಹೊಂದಿದೆ ಮತ್ತು ದೇಶವನ್ನು ಮೊದಲ ಸ್ಥಾನದಲ್ಲಿದೆ.

ಡಾ.ಶಾಂತಿ ಸ್ವರೂಪ್ ಭಟ್ನಾಗರ್ - ಸಿಎಸ್ಐಆರ್ ಸ್ಥಾಪಕ:

ಡಾ.ಶಾಂತಿ ಸ್ವರೂಪ್ ಭಟ್ನಾಗರ್ ಸಿಎಸ್ಐಆರ್ ಸ್ಥಾಪಕ ನಿರ್ದೇಶಕರಾಗಿದ್ದು, ಅವರು ಹನ್ನೆರಡು ರಾಷ್ಟ್ರೀಯ ಪ್ರಯೋಗಾಲಯಗಳನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಸ್ವಾತಂತ್ರೋತ್ತರ ವಿಜ್ಞಾನ ಮತ್ತು ತಂತ್ರಜ್ಞಾನ ಮೂಲಸೌಕರ್ಯಗಳ ನಿರ್ಮಾಣದಲ್ಲಿ ಮತ್ತು ಭಾರತದ ಎಸ್ & ಟಿ ನೀತಿಗಳನ್ನು ರೂಪಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಅವರು ಏಕಕಾಲದಲ್ಲಿ ಸರ್ಕಾರದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ

ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಮೊದಲ ಅಧ್ಯಕ್ಷರಾಗಿದ್ದರು. ಅವರಿಗೆ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ (ಒಬಿಇ) ನೀಡಲಾಗುತ್ತು. 1943ರಲ್ಲಿ ಲಂಡನ್​ನ ರಾಯಲ್ ಸೊಸೈಟಿಯ ಫೆಲೋ ಆಗಿ ಅವರು ಆಯ್ಕೆಯಾದರು. ಅವರಿಗೆ 1954ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಂಸ್ಥೆಯ ರಚನೆ:

ಅಧ್ಯಕ್ಷರು: ಭಾರತದ ಪ್ರಧಾನಿ

ಉಪಾಧ್ಯಕ್ಷ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ

ಆಡಳಿತ ಮಂಡಳಿ: ಮಹಾನಿರ್ದೇಶಕರು ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುತ್ತಾರೆ.

ಹಣಕಾಸು ಕಾರ್ಯದರ್ಶಿ ಸಂಸ್ತೆಯ ಸದಸ್ಯರಾಗಿರುತ್ತಾರೆ.

ಇತರ ಸದಸ್ಯರ ಅವಧಿ ಮೂರು ವರ್ಷಗಳು

ಸಿಎಸ್ಐಆರ್ ಸಲಹಾ ಮಂಡಳಿ: ವಿಜ್ಞಾನ ಮತ್ತು ತಂತ್ರಜ್ಞಾನದ ಆಯಾ ಕ್ಷೇತ್ರಗಳ ಪ್ರಮುಖ ಸದಸ್ಯರನ್ನು ಒಳಗೊಂಡ 15 ಸದಸ್ಯರ ಸಂಸ್ಥೆಯಾಗಿದೆ. ಆಡಳಿತ ಮಂಡಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಒಳಹರಿವುಗಳನ್ನು ಒದಗಿಸುವುದು ಇದರ ಕಾರ್ಯವಾಗಿದೆ. ಇದರ ಸದಸ್ಯರ ಅವಧಿ ಮೂರು ವರ್ಷಗಳು.

ಸಿಎಸ್ಐಆರ್ ಸಾಧನೆಗಳು:

ಅಮುಲ್ ಹಾಲಿನ ಆಹಾರ:1970ರಲ್ಲಿ ಮಕ್ಕಳಿಗೆ ಬೇಕಾಗುವ ಹಾಲಿನ ಆಹಾರವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಕೆಲವು ಬಹುರಾಷ್ಟ್ರೀಯ ಕಂಪನಿಗಳಿಗೆ ಭಾರತ ವಿನಂತಿ ಮಾಡಿತ್ತಾದರೂ, ಭಾರತದಲ್ಲಿ ಸಾಕಷ್ಟು ಹಸುವಿನ ಹಾಲು ಇಲ್ಲ ಮತ್ತು ಎಮ್ಮೆ ಹಾಲಿನಲ್ಲಿ ಹೆಚ್ಚು ಕೊಬ್ಬು ಇದೆ ಎಂಬ ನೆಪದಲ್ಲಿ ತಿರಸ್ಕರಿಸಲಾಯಿತು. ಸಿಎಸ್ಐಆರ್ ಎಮ್ಮೆಯ ಹಾಲಿನಿಂದ ಮಕ್ಕಳ ಆಹಾರವನ್ನು ಅತ್ಯುತ್ತಮ ಜೀರ್ಣಸಾಧ್ಯತೆಯೊಂದಿಗೆ ತಯಾರಿಸುವ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಲು ಕೈರಾ ಹಾಲು ಉತ್ಪಾದಕರ ಸಹಕಾರಿ ಲಿಮಿಟೆಡ್‌ಗೆ ಹಸ್ತಾಂತರಿಸಿತು. ಮಕ್ಕಳಿಗೆ ಬೇಕಾಗುವ ಹಾಲಿನ ಆಹಾರವನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಸಿಎಸ್‌ಐಆರ್ ಪ್ರಾರಂಭಿಸಿತು.

ಏಡ್ಸ್ ವಿರುದ್ಧ ಹೋರಾಟ:ವಿಶ್ವಾದ್ಯಂತ ಅಂದಾಜು 20 ಮಿಲಿಯನ್ ಏಡ್ಸ್ ಪೀಡಿತರಿದ್ದು, ಅವರ ಸಹಾಯದ ಏಕೈಕ ಮೂಲವೆಂದರೆ ಎಚ್ಐವಿ ವಿರೋಧಿ ಔಷಧಿಗಳ ಕಾಕ್ಟೈಲ್. ಸಿಎಸ್ಐಆರ್ ಈ ಔಷಧಗಳ ತಯಾರಿಕೆಗಾಗಿ ಪರ್ಯಾಯ ಮತ್ತು ಅಗ್ಗದ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಿ ತಂತ್ರಜ್ಞಾನವನ್ನು ಸಿಪ್ಲಾಗೆ ವರ್ಗಾಯಿಸಿತು. ಸಿಪ್ಲಾ ಭಾರತ ಮತ್ತು ಜಗತ್ತಿನ ದೇಶಗಳಲ್ಲಿ ಈ ಔಷಧವನ್ನ ಕಡಿಮೆ ಬೆಲೆಗೆ ಪರಿಚಯಿಸಿತು. ಇದರಿಂದಾಗಿ ಬಹುರಾಷ್ಟ್ರೀಯ ಸ್ಪರ್ಧಿಗಳು ಕೂಡಾ ಔಷಧಿಯ ಬೆಲೆಯನ್ನು ಕಡಿಮೆ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ಈ ಮೂಲಕ ಜಾಗತಿಕ ಮಟ್ಟದಲ್ಲಿ ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧ ಲಭಿಸಿ ಜೀವ ಉಳಿಸಲು ಸಹಾಯ ಮಾಡಿತು.

ಸ್ಥಳೀಯ ಸೂಪರ್ ಕಂಪ್ಯೂಟರ್:1980ರಲ್ಲಿ ಭಾರತವು ಕಂಪ್ಯೂಟರ್ ಕೊರತೆಯಿಂದ ಬಳಲುತ್ತಿತ್ತು. ವಿದೇಶದಿಂದ ಬಂದ ಸೂಪರ್ ಕಂಪ್ಯೂಟರ್‌ಗಳು ತುಂಬಾ ದುಬಾರಿಯಾಗಿದ್ದವು ಅಥವಾ ಭಾರತಕ್ಕೆ ಮಾರಾಟವಾಗಲಿಲ್ಲ. ಆದ್ದರಿಂದ ಸೂಪರ್ ಕಂಪ್ಯೂಟಿಂಗ್ ಶಕ್ತಿಯನ್ನು ಪಡೆಯಲು ಸಮಾನಾಂತರವಾಗಿ ಹಲವಾರು ಕಂಪ್ಯೂಟರ್‌ಗಳನ್ನು ನಿರ್ಮಿಸಲು ಸಿಎಸ್ಐಆರ್ ನಿರ್ಧರಿಸಿತು. 1986ರಲ್ಲಿ ಭಾರತದ ಮೊದಲ ಸಮಾನಾಂತರ ಕಂಪ್ಯೂಟರ್ ಫ್ಲೋಸೊಲ್ವರ್ ಅನ್ನು ನಿರ್ಮಿಸಲಾಯಿತು. ಫ್ಲೋಸೊಲ್ವರ್‌ನ ಯಶಸ್ಸು ಪರಮ್​ನಂತಹ ಇತರ ಯಶಸ್ವಿ ಸಮಾನಾಂತರ ಕಂಪ್ಯೂಟಿಂಗ್ ಯೋಜನೆಗಳನ್ನು ಪ್ರಚೋದಿಸಿತು.

ಸ್ವರಾಜ್ ಟ್ರ್ಯಾಕ್ಟರ್‌: ಸ್ವತಂತ್ರ ಭಾರತವು ತನ್ನ ಲಕ್ಷಾಂತರ ಜನರಿಗೆ ಆಹಾರಕ್ಕಾಗಿ ಧಾನ್ಯಗಳನ್ನು ತುಂಬಬೇಕಾಗಿತ್ತು. ಹಸಿರು ಕ್ರಾಂತಿಯು ಜಾರಿಯಲ್ಲಿತ್ತು. ಆದರೆ, ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರದ ಕೃಷಿ ಕ್ಷೇತ್ರಕ್ಕೆ ಮಾನವಶಕ್ತಿ ಮತ್ತು ಯಂತ್ರಗಳು ಬೇಕಾಗಿದ್ದವು. ಸಿಎಸ್ಐಆರ್ ಚೊಚ್ಚಲವಾಗಿ 20 ಎಚ್‌ಪಿ ಸ್ವರಾಜ್ ಟ್ರಾಕ್ಟರನ್ನು‌ ಒದಗಿಸಿತು. ಪಂಜಾಬ್ ಮ್ಯಾನ್ಯೂಫ್ಯಾಕ್ಚರಿಂಗ್ ಲಿಮಿಟೆಡ್ 1974ರಲ್ಲಿ ಟ್ರಾಕ್ಟರ್​ಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಪ್ರಾರಂಭಿಸಿತು. ಯಾಂತ್ರಿಕೃತ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸ್ವರಾಜ್ ಟ್ರ್ಯಾಕ್ಟರ್ ಸಹಾಯ ಮಾಡಿತು. ಇಂದು ಸುಮಾರು 1,00,000 ಟ್ರ್ಯಾಕ್ಟರ್​ಗಳು ಭಾರತೀಯ ಮಣ್ಣನ್ನು ಉಳುತ್ತಿವೆ. ಸಿಎಸ್ಐಆರ್ ವಿಜ್ಞಾನಿಗಳು ತಮ್ಮ ಕಾರ್ಯವನ್ನು ಮುಂದುವರಿಸಿದ್ದಾರೆ. ಭಾರತೀಯ ಕೃಷಿಗೆ ಅವರ ಇತ್ತೀಚಿಗೆ ಎಚ್‌ಪಿ ಟ್ರ್ಯಾಕ್ಟರ್ ಸೋನಾಲಿಕಾ ಕೊಡುಗೆ ನೀಡಿದ್ದಾರೆ.

ಕೋವಿಡ್ -19 ಎದುರಿಸಲು ಸಿಎಸ್ಐಆರ್ ಕೊಡುಗೆ:

ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರು ಡಿಬಿಟಿ ಮತ್ತು ಸಿಎಸ್ಐಆರ್​ನ ಭಾರತೀಯ ವಿಜ್ಞಾನಿಗಳು SARS-CoV-2ನ 1000ಕ್ಕೂ ಹೆಚ್ಚು ವೈರಲ್ ಜೀನೋಮ್ಗಳನ್ನು ಸೀಕ್ವೆನ್ಸ್ ಮಾಡಿದ್ದಾರೆ ಎಂದು ಘೋಷಿಸಿದ್ದು, ದೇಶದ ಅತಿದೊಡ್ಡ ಪ್ರಯತ್ನ ಎಂದು ಹೇಳಿದ್ದಾರೆ.

ವೆಂಟಿಲೇಟರ್‌ಗಳು, ಆಕ್ಸಿಜನ್ ಎನ್‌ರಿಚ್‌ಮೆಂಟ್ ಸಾಧನಗಳು, 3-ಡಿ ಮುದ್ರಿತ ಫೇಸ್ ಶೀಲ್ಡ್ಸ್, ಫೇಸ್ ಮಾಸ್ಕ್, ಪಿಪಿಇ ಮತ್ತು ಇತರ ರಕ್ಷಣಾ ಸಾಧನಗಳನ್ನು ಸಹ ಸಿಎಸ್ಐಆರ್ ಅಭಿವೃದ್ಧಿಪಡಿಸುತ್ತಿದೆ.

ಸಿಎಸ್ಐಆರ್​ನಲ್ಲಿ ಕೋರ್ ಸ್ಟ್ರಾಟಜಿ ಗ್ರೂಪ್ (ಸಿಎಸ್​ಜಿ) ಸ್ಥಾಪಿಸಲಾಗಿದ್ದು, ಅದರ ಅಡಿ ಕೋವಿಡ್ -19 ಸಂಬಂಧಿತ ಡಿಜಿಟಲ್ ಮತ್ತು ಮಾಲಿಕ್ಯೂಲರ್ ಕಣ್ಗಾವಲು, ಕ್ಷಿಪ್ರ ಮತ್ತು ಆರ್ಥಿಕ ಡಯಾಗ್ನೋಸ್ಟಿಕ್ಸ್, ಹೊಸ ಔಷಧಗಳು, ಔಷಧಗಳ ಪುನರಾವರ್ತನೆ ಮತ್ತು ಸಂಬಂಧಿತ ಉತ್ಪಾದನಾ ಪ್ರಕ್ರಿಯೆಗಳು, ಹಾಸ್ಪಿಟಲ್ ಪ್ರೆಸ್ ಮಾಹಿತಿ, ಸಾಧನಗಳು ಮತ್ತು ಪಿಪಿಇಗಳು, ಸರಬರಾಜು ಸರಪಳಿ ಮತ್ತು ಲಾಜಿಸ್ಟಿಕ್ಸ್ ಬೆಂಬಲ ವ್ಯವಸ್ಥೆಗಳು ಮುಂತಾದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

ದೇಶದ ಬಿಕ್ಕಟ್ಟಿನ ಸಮಯದಲ್ಲಿ 15 ಸಿಎಸ್‌ಐಆರ್ ಲ್ಯಾಬ್‌ಗಳು ಪ್ರಮುಖ ಕೈಗಾರಿಕೆಗಳು, ಪಿಎಸ್​ಯುಗಳು, ಎಂಎಸ್‌ಎಂಇಗಳು ಮತ್ತು ಇತರ ಇಲಾಖೆಗಳು ಮತ್ತು ಸಚಿವಾಲಯಗಳೊಂದಿಗೆ ನಿಕಟ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿವೆ.

ABOUT THE AUTHOR

...view details