ಕರ್ನಾಟಕ

karnataka

ETV Bharat / bharat

ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳ ಉದ್ವಿಗ್ನ.. ಸಚಿವನ ನಿವಾಸದ ಬಳಿ ಕಚ್ಚಾ ಬಾಂಬ್​ ಎಸೆದ ದುಷ್ಕರ್ಮಿಗಳು! - ಬಂಗಾಳ ಸಚಿವ ಇಂದ್ರನೀಲ್​ ಸೇನ್​ ಸುದ್ದಿ

ಇನ್ನು ಕೆಲವು ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಆದ್ರೆ ಕೆಲ ದುಷ್ಕರ್ಮಿಗಳು ಅಹಿತಕರ ಘಟನೆ ಸೃಷ್ಟಿಸುತ್ತಿದ್ದು, ಸಚಿವರೊಬ್ಬರ ನಿವಾಸದ ಬಳಿ ಕಚ್ಚಾ ಬಾಂಬ್​ ಎಸೆದು ದರ್ಪ ಮೆರೆದಿದ್ದಾರೆ.

Crude Bombs hurled, Crude Bombs hurled near Bengal minister residence, Crude Bombs hurled near Bengal minister Indranil Sen residence, Bengal minister Indranil Sen, Bengal minister Indranil Sen news, ಕಚ್ಚಾ ಬಾಂಬ್​ ಎಸೆತ, ಬಂಗಾಳ ಸಚಿವನ ಮನೆ ಬಳಿ ಕಚ್ಚಾ ಬಾಂಬ್​ ಎಸೆತ, ಬಂಗಾಳ ಸಚಿವ ಇಂದ್ರನೀಲ್​ ಸೇನ್​, ಬಂಗಾಳ ಸಚಿವ ಇಂದ್ರನೀಲ್​ ಸೇನ್​ ಸುದ್ದಿ,
ಸಚಿವನ ನಿವಾಸದ ಬಳಿ ಕಚ್ಚಾ ಬಾಂಬ್​ ಎಸೆದ ದುಷ್ಕರ್ಮಿಗಳು

By

Published : Jan 29, 2021, 7:36 AM IST

ಕೋಲ್ಕತ್ತಾ: ಮುಂದಿನ ಕೆಲವು ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ಕಾವು ಜೋರಾಗುವ ಮುನ್ನವೇ ಬಂಗಾಳದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.

ಹೌದು, ಬೈಕ್​ನಲ್ಲಿ ಬಂದ ಕೆಲವು ಅಪರಿಚಿತ ವ್ಯಕ್ತಿಗಳು ಬಂಗಾಳ ಸಚಿವರ ನಿವಾಸದ ಬಳಿ ಕಚ್ಚಾ ಬಾಂಬ್​ ಎಸೆದಿದ್ದಾರೆ. ಕೋಲ್ಕತ್ತಾದ ಕಾಸ್ಬಾ ಪ್ರದೇಶದಲ್ಲಿ ಬುಧವಾರ ರಾತ್ರಿ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಇಂದ್ರನಿಲ್ ಸೇನ್ ಅವರ ನಿವಾಸದ ಬಳಿ ಈ ದಾಳಿ ನಡೆದಿದ್ದು, ಆದ್ರೆ ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ನಡೆದಾಗ ಸಚಿವರು ಮನೆಯಲ್ಲಿ ಇರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ. ಅವರಿಂದ ಮೂರು ಬೈಕ್​ಗಳು ಮತ್ತು ಕಚ್ಚಾ ಬಾಂಬ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಸಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ ಮತ್ತು ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details