ಕರ್ನಾಟಕ

karnataka

ETV Bharat / bharat

ನಕ್ಸಲರ ಅಟ್ಟಹಾಸ: ಸಿಆರ್​ಪಿಎಫ್​ ಯೋಧ ಹುತಾತ್ಮ - ನಕ್ಸಲರು

ಛತ್ತೀಸ್​ಗಢದಲ್ಲಿ ನಕ್ಸಲರ ಗುಂಡಿನ ದಾಳಿಗೆ ಸಿಆರ್​ಪಿಎಫ್​ ಯೋಧ ಹುತಾತ್ಮರಾಗಿದ್ದಾರೆ

ನಕ್ಸಲರ ಗುಂಡಿನ ದಾಳಿಗೆ ಸಿಆರ್​ಪಿಎಫ್​ ಯೋಧ ಹುತಾತ್ಮ

By

Published : Apr 6, 2019, 8:49 AM IST

ಧಮತಾರಿ (ಛತ್ತೀಸ್​ಗಢ):ಅತ್ತ ಗಡಿಯಲ್ಲಿ ಉಗ್ರರ ಉಪಠಳ ಹೆಚ್ಚುತ್ತಿದ್ದರೆ, ಇತ್ತ ದೇಶದೊಳಗೆ ನಕ್ಸಲರ ಅಟ್ಟಹಾಸ ಎಲ್ಲೆ ಮೀರುತ್ತಿದೆ. ಛತ್ತೀಸ್​ಗಢದ ಧಮತಾರಿಯಲ್ಲಿ ನಿನ್ನೆ ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಿಆರ್​ಪಿಎಫ್​ ಯೋಧ ಹುತಾತ್ಮರಾಗಿದ್ದಾರೆ.

ಭೂಪಾಲ್​​ ನಿವಾಸಿ ಸಿಆರ್​ಪಿಎಫ್​ ಯೋಧ ಹರೀಶ್​ ಚಂದ್ರ ಪಾಲ್​ (44) ನಕ್ಸಲರ ಗುಂಡಿನ ದಾಳಿಗೆ ಮೃತರಾಗಿದ್ದಾರೆ. ದಾಳಿಯಲ್ಲಿ ಯೋಧ ಸುಧೀರ್​​ ಕುಮಾರ್​ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಕ್ಸಲರ ಗುಂಡಿನ ದಾಳಿಗೆ ಸಿಆರ್​ಪಿಎಫ್​ ಯೋಧ ಹುತಾತ್ಮ

ಅರಣ್ಯ ಪ್ರದೇಶದಲ್ಲಿ ಸಿಆರ್​ಪಿಎಫ್​ ಗಸ್ತುವಾಹನ ಸಾಗುತ್ತಿರುವ ವೇಳೆ ನಕ್ಸಲರು ಗುಂಡಿನ ಮಳೆಗರೆದಿದ್ದಾರೆ. ಇದಕ್ಕೆ ಯೋಧರು ಸಹ ಪ್ರತ್ಯುತ್ತರ ನೀಡಿದ್ದಾರೆ. ಈ ವೇಳೆ ಇಬ್ಬರು ಯೋಧರು ಗಾಯಗೊಂಡಿದ್ದರು. ಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಬುಧವಾರದಿಂದ ಸೇನೆ ನಕ್ಸಲರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದು, ಈವರೆಗೆ ನಕ್ಸಲರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ ಎಂದು ಸಿಆರ್​ಪಿಎಫ್​ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details