ನವದೆಹಲಿ:ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸಿಆರ್‌ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ), ಭಾಗಿಯಾಗಿದ್ದು, ಛತ್ತೀಸ್ಗಢದ ದಂತೇವಾಡ ಜಿಲ್ಲೆಯ ಜನರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವಲ್ಲಿ ತೊಡಗಿಕೊಂಡಿದೆ ಎಂದು ಗೃಹ ವ್ಯವಹಾರ ಸಚಿವಾಲಯ (ಎಂಎಚ್‌ಎ) ಇಂದು ಹೇಳಿದೆ.
ಸಿಆರ್‌ಪಿಎಫ್‌ನ ಇ ಕಾರ್ಯವನ್ನು ಶ್ಲಾಘಿಸಿದ ಸಚಿವಾಲಯ, ಮೂರು ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೊಂದಿರುವ ಅತಿದೊಡ್ಡ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್‌ಗಳು) ತನ್ನ ರಾಷ್ಟ್ರೀಯ ಸಹಾಯವಾಣಿ "ಸಿಆರ್‌ಪಿಎಫ್ ಮದದ್ಗಾರ್" ಮೂಲಕ ದೇಶಾದಾದ್ಯಂತ ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದೆ.
ಈ ವರೆಗೆ ಸಿಆರ್‌ಪಿಎಫ್‌ನ ಒಂದು ಬೆಟಾಲಿಯನ್ ರಾಯ್‌ಪುರದಲ್ಲಿ ಒಂದು ಲಕ್ಷ ಕೆಜಿ ಅಕ್ಕಿ ಸರಬರಾಜು ಮಾಡಿದೆ ಎಂದು ಸಚಿವಾಲಯ ಇದೇ ವೇಳೆ ಉಲ್ಲೇಖಿಸಿದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಇಂಡೋ - ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಸೇರಿದಂತೆ ಇತರ ಸಿಎಪಿಎಫ್ ಭದ್ರತಾ ಪಡೆಗಳು ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ.
ಈ ಪಡೆಗಳು ಹಲವಾರು ಪ್ರದೇಶಗಳಲ್ಲಿನ ಸ್ಥಳೀಯ ಆಡಳಿತಕ್ಕೆ ಸಹಾಯ ಮಾಡುತ್ತಿವೆ, ಅಗತ್ಯ ವಸ್ತುಗಳ ಪೂರೈಕೆ ಮಾಡುವುದರ ಜೊತೆಗೆ ಜನರಲ್ಲಿ ಕೋವಿಡ್-19ರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಿಎಪಿಎಫ್‌ಗಳು ನಡೆಸುತ್ತಿರುವ ಒಟ್ಟು 32 ಆಸ್ಪತ್ರೆಗಳು 1,900 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿವೆ ಎಂದು ಸಚಿವಾಲಯ ತಿಳಿಸಿದೆ.
ಎಸ್‌ಎಸ್‌ಬಿಯ ಮಹಾನಿರ್ದೇಶಕರು ಶ್ಲಾಘನೀಯ ಸೇವೆಯನ್ನು ಮಾಡುತ್ತಿದ್ದು, ಭಾರತ-ನೇಪಾಳ ಗಡಿಯಲ್ಲಿ ಸಿಲುಕಿದ್ದ ಅನೇಕ ನೇಪಾಳಿ ನಾಗರಿಕರಿಗೆ ಸಹಾಯ ಮಾಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ವಿಮಾನ ನಿಲ್ದಾಣಗಳಲ್ಲಿ ಕೊರೊನಾ ಪ್ರಕರಣಗಳ ತಪಾಸಣೆ ನಡೆಸಲು, ಸೋಂಕಿತರನ್ನು ಪತ್ತೆಹಚ್ಚಲು ಸಿಐಎಸ್ಎಫ್ ಪ್ರಮುಖ ಪಾತ್ರ ವಹಿಸಿದೆ ಎಂದು ವಿಮಾನ ನಿಲ್ದಾಣ ಆರೋಗ್ಯ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ.