ಕರ್ನಾಟಕ

karnataka

ETV Bharat / bharat

ಉಗ್ರರ ಅಟ್ಟಹಾಸಕ್ಕೆ ಸಿಆರ್​ಪಿಎಫ್​ ಯೋಧ ಹುತಾತ್ಮ - ಜಮ್ಮು ಮತ್ತು ಕಾಶ್ಮೀರ

ಬುಡ್ಗಾಮ್​ ಜಿಲ್ಲೆಯಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಸಿಆರ್​ಪಿಎಫ್​ ಯೋಧನೊಬ್ಬ ಹುತಾತ್ಮನಾಗಿದ್ದು, ಯೋಧನ ಬಳಿ ಇದ್ದ ಸರ್ವಿಸ್​ ರೈಫಲ್​​ ಕೂಡ ಉಗ್ರರು ಕಿತ್ತುಕೊಂಡಿದ್ದಾರೆ.

CRPF jawan killed
ಉಗ್ರರ ಅಟ್ಟಹಾಸಕ್ಕೆ ಸಿಆರ್​ಪಿಎಫ್​ ಯೋಧ ಹುತಾತ್ಮ

By

Published : Sep 24, 2020, 10:38 AM IST

ಬುಡ್ಗಾಮ್:ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್​ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಸಿಆರ್​ಪಿಎಫ್​ ಯೋಧನೋರ್ವ ಹುತಾತ್ಮನಾಗಿದ್ದಾನೆ.

ಜಿ.ಡಿ.ಬಡುಲೆ ಹುತಾತ್ಮ ಸಿಆರ್​ಪಿಎಫ್ ಯೋಧರಾಗಿದ್ದಾರೆ. ಇವರು ಬುಡ್ಗಾಮ್ ಜಿಲ್ಲೆಯ ಕೈಸರ್​ಮುಲ್ಲಾದ 117 ಬೆಟಾಲಿಯನ್​ನಲ್ಲಿ ಸಹಾಯಕ ಪೊಲೀಸ್​ ಸಬ್ ಇನ್ಸ್‌ಪೆಕ್ಟರ್ (ASI) ಆಗಿ ಕಾರ್ಯನಿರ್ವಹಿಸುತ್ತಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಇವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕುಳಿಯಲಿಲ್ಲ.

ಯೋಧನ ಬಳಿ ಇದ್ದ ಸರ್ವಿಸ್​ ರೈಫಲ್​​ ಕೂಡ ಉಗ್ರರು ಕಿತ್ತುಕೊಂಡಿದ್ದಾರೆ. ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details