ವಡೋದರ: ಗುಜರಾತ್ ರಾಜ್ಯದ ಅತೀ ದೊಡ್ಡ ನಗರ ವಡೋದರ ಸಹ ಇತರ ನಗರಗಳಂತೆ ವರುಣನ ಅಬ್ಬರಕ್ಕೆ ತಲ್ಲಣಗೊಂಡಿದೆ. ಮಳೆಯಿಂದಾಗಿ ವಿಶ್ವಾಮಿತ್ರಾ ನದಿ ತುಂಬಿ ಹರಿಯುತ್ತಿದ್ದು, ಜನರಿಗೆ ಜಲಚರ ಪ್ರಾಣಿಗಳ ಕಾಟ ಎದುರಾಗಿದೆ.
ತುಂಬಿ ಹರಿಯುತ್ತಿದೆ ಮೊಸಳೆಗಳ ಆವಾಸ ‘ವಿಶ್ವಾಮಿತ್ರ’ ನದಿ... 7ಕ್ಕೂ ಹೆಚ್ಚು ಮೊಸಳೆಗಳು ಸೆರೆ! - ಮಿಶ್ವಾಮಿತ್ರ ನದಿ
ಗುಜರಾತ್‌ನಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದ ಜನರು ಮನೆಯಿಂದ ಹೊರಬರಲು ಆತಂಕ ಪಡುವಂತಾಗಿದೆ. ಮಳೆಯಿಂದಾಗಿ 150ಕ್ಕೂ ಹೆಚ್ಚು ಮೊಸಳೆಗಳು ವಾಸವಾಗಿದ್ದ ನದಿ ತುಂಬಿ ಹರಿಯುತ್ತಿದ್ದು, ವಡೋದರಕ್ಕೂ ನೀರು ನುಗ್ಗಿದೆ. ಇದರಿಂದ ಕೆಲ ಮೊಸಳೆಗಳು ಬೀದಿ ಬೀದಿಗೆ ನುಗ್ಗಿ ಆತಂಕ ಸೃಷ್ಠಿಸಿವೆ.
ವಡೋದರ ನಗರದಲ್ಲಿ ವಿಶ್ವಮಿತ್ರ ನದಿ ಹಾದು ಹೋಗುತ್ತೆ. ಈ ನದಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಮೊಸಳೆಗಳು ವಾಸಿಸುತ್ತವೆ. ವಿಪರೀತ ಮಳೆಯಿಂದ ವಿಶ್ವಾಮಿತ್ರ ನದಿ ಬಳಿಯಿರುವ ರಾಜ್ಮಹಾಲ್ ರಸ್ತೆ, ಪತೇಗಂಜ್ ಪ್ರಾಂತಗಳು ಸೇರಿದಂತೆ ಕೆಲ ನಗರಕ್ಕೆ ಮೊಸೆಗಳು ನುಗ್ಗಿವೆ. ಜನರು ಮನೆಯಿಂದ ಹೊರಬರಲು ಆತಂಕ ಪಡುವಂತಹ ಪರಿಸ್ಥಿತಿಯಿದೆ.
ಈ ಹಿಂದೆ ಅಕೋಡ ರಸ್ತೆ ಆವರಿಸಿದ ನೀರಿನಲ್ಲಿ ಸಂಚರಿಸುತ್ತಿದ್ದ ನಾಯಿಯೊಂದನ್ನು ಮೊಸಳೆ ಬೇಟೆಯಾಡಲು ಯತ್ನಿಸಿದೆ. ಇನ್ನೇನು ಮೊಸಳೆಗೆ ಆಹಾರವಾಗಬೇಕಿದ್ದ ನಾಯಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈಗ ನಗರದಲ್ಲಿ ಸುಮಾರು 7ಕ್ಕೂ ಹೆಚ್ಚು ಮೊಸಳೆಗಳು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಮೊಸಳೆ ಜೊತೆ ಮೀನು, ಆಮೆಗಳು ಸಹ ಜನರ ಕಣ್ಣಿಗೆ ಗೋಚರಿಸುತ್ತಿವೆ.