ಕರ್ನಾಟಕ

karnataka

ETV Bharat / bharat

ರಫೇಲ್​ ಬಗ್ಗೆ ಟೀಕೆ... ಅನಿಲ್​ ಅಂಬಾನಿ ಪರ ವಾದ... ಸಿಬಲ್​ ಡಬಲ್​ ರೋಲ್​ ಕುರಿತು ವ್ಯಾಪಕ ಚರ್ಚೆ - indian army

ನವದೆಹಲಿ: ರಫೇಲ್​ ಡೀಲ್​ನಲ್ಲಿ ರಿಲಯನ್ಸ್​ ಕಂಪನಿಯ ಪಾತ್ರದ ಕುರಿತು ಟೀಕಿಸುತ್ತಿರುವ ಕಾಂಗ್ರೆಸ್​ ಹಿರಿಯ ನಾಯಕ ಕಪಿಲ್​ ಸಿಬಲ್​ ಅವರು ಅನಿಲ್​ ಅಂಬಾನಿ ವಿರುದ್ಧ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಂಬಾನಿ ಪರ ವಾದ ಮಾಡುತ್ತಿರುವುದು ವ್ಯಾಪಕ ಚರ್ಚೆಗೆ ಗುರಿಯಾಗಿದೆ.

new delhi

By

Published : Feb 13, 2019, 1:34 PM IST

ರಫೇಲ್​ ಡೀಲ್​ ಕುರಿತು ಮಂಗಳವಾರ ಟೀಕೆ ವ್ಯಕ್ತಪಡಿಸಿದ ಸಿಬಲ್​ ಅವರು ಅದೇ ದಿನ ಅನಿಲ್​ ಅಂಬಾನಿ ಪರ ಕೋರ್ಟ್​ನಲ್ಲಿ ವಾದ ಮಾಡುತ್ತಿರುವ ಕುರಿತು ಟ್ವಿಟ್ಟಿಗರು ಕಾಲೆಳೆದಿದ್ದಾರೆ.

ಎರಿಕ್ಸನ್​ ಸಂಸ್ಥೆಗೆ 550 ಕೋಟಿ ರೂಪಾಯಿ ವಾಪಸ್​ ನೀಡಬೇಕೆಂದು ಸುಪ್ರೀಂ ನೀಡಿದ್ದ ಆದೇಶ ಉಲ್ಲಂಘನೆ ಮಾಡಿರುವ ಸಂಬಂಧ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಅನಿಲ್​ ಅಂಬಾನಿ ಪರವಾಗಿ ಕಪಿಲ್​ ಸಿಬಲ್​ ಹಾಗೂ ಮುಕುಲ್​ ರೋಹ್ಟಗಿ ವಾದ ಮಂಡಿಸಿದರು.

ಅನಿಲ್​ ಅಂಬಾನಿ ನ್ಯಾಯಾಂಗ ನಿಂದನೆ ಎಸಗಿಲ್ಲ. ಆರ್​ ಕಾಂ ಸಂಸ್ಥೆ ನಷ್ಟದಲ್ಲಿರುವ ಕಾರಣ ಹಣ ವಾಪಸ್​ ಮಾಡಲು ಸಾಧ್ಯವಾಗಿಲ್ಲ ಎಂದು ವಾದ ಮಾಡಿದರು. ಪ್ರಕರಣದ ಪರಿಶೀಲನೆ ನಡೆಸಿದ ನ್ಯಾಯಮೂರ್ತಿಗಳು ಬುಧವಾರ ಕೋರ್ಟ್​ಗೆ ಹಾಜರಾಗುವಂತೆ ಸೂಚಿಸಿದರು.

ಅನಿಲ್​ ಅಂಬಾನಿ ಪರ ವಾದ ಮಾಡುತ್ತಿರುವ ಕುರಿತು ವ್ಯಕ್ತವಾಗಿರುವ ಟೀಕೆಗೆ ಉತ್ತರಿಸಿರುವ ಸಿಬಲ್​, ಇದು ನನ್ನ ವೃತ್ತಿ ಜೀವನ . ರಫೇಲ್​ ಡೀಲ್​ಗೂ ಎರಿಕ್ಸನ್​ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಕಾರ್ಪೊರೇಟ್​ ಫೈಟ್​ ನಾನು ಕಳೆದ 20 ವರ್ಷಗಳಿಂದ ವಾದ ಮಾಡುತ್ತಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ABOUT THE AUTHOR

...view details