ಕರ್ನಾಟಕ

karnataka

ETV Bharat / bharat

ಎನ್​ಕೌಂಟರ್​ನಲ್ಲಿ ಬಲಿಯಾದ ವಿಕಾಸ್ ದುಬೆ ಕ್ರಿಮಿನಲ್ ಇತಿಹಾಸ ಭಯಾನಕ..! - ವಿಕಾಸ್ ದುಬೆ ಎನ್​ಕೌಂಟರ್​ ಸುದ್ದಿ

ಈ ಹಿಂದೆ ವಿಕಾಸ್ ದುಬೆ ಮನೆಗೆ ತೆರಳಿದ್ದ ಪೊಲೀಸ್ ತಂಡದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಿಬ್ಬಂದಿ ಹುತಾತ್ಮರಾಗಿದ್ದರು. ಗುಂಡಿನ ದಾಳಿಯಲ್ಲಿ 5 ಪೊಲೀಸರು ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆ. ಇದಲ್ಲದೇ ಈತನ ಮೇಲೆ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

vikas dubey
vikas dubey

By

Published : Jul 10, 2020, 11:56 AM IST

ಕಾನ್ಪುರ (ಉತ್ತರ ಪ್ರದೇಶ):ಎನ್​ಕೌಂಟರ್​ನಲ್ಲಿ ಕುಖ್ಯಾತ ರೌಡಿ ಶೀಟರ್​ ವಿಕಾಸ್ ದುಬೆಯ ಹುಟ್ಟಡಗಿಸಿದ್ದಾರೆ ಉತ್ತರ ಪ್ರದೇಶ ಪೊಲೀಸರು.

8 ಜನ ಪೊಲೀಸರನ್ನು ಕೊಂದಿದ್ದ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ದುಬೆಯ ಎಲ್ಲ ಕೃತ್ಯಗಳಿಗೆ ಇಂದು ಫುಲ್​ ಸ್ಟಾಪ್​ ಬಿದ್ದಿದೆ. ಈ ಹಿಂದೆ ವಿಕಾಸ್ ದುಬೆ ಮನೆಗೆ ತೆರಳಿದ್ದ ಪೊಲೀಸ್ ತಂಡದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಪೊಲೀಸರು ಹುತಾತ್ಮರಾಗಿದ್ದರು. ಗುಂಡಿನ ದಾಳಿಯಲ್ಲಿ 5 ಪೊಲೀಸರು ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆ.

ವಿಕಾಸ್ ದುಬೆ ಯಾರು?

ವಿಕಾಸ್ ದುಬೆ 1993ರಿಂದ ಅಪರಾಧ ಜಗತ್ತಿನಲ್ಲಿ ಕುಖ್ಯಾತಿ ಪಡೆದಿದ್ದ ದುಬೆ ತನ್ನ ದೇ ಗ್ಯಾಂಗ್ ರಚಿಸಿ ದರೋಡೆ, ಕೊಲೆ ಮುಂತಾದ ದುಷ್ಕೃತ್ಯಗಳನ್ನು ಮಾಡಲು ಪ್ರಾರಂಭಿಸಿದ್ದ. ಶಿವ್ಲಿ ಪ್ರದೇಶದ ಬಿಕಾರು ಗ್ರಾಮದ ನಿವಾಸಿ ವಿಕಾಸ್ ದುಬೆ ವಿರುದ್ಧ 52ಕ್ಕೂ ಹೆಚ್ಚು ಪ್ರಕರಣಗಳು ಯುಪಿಯ ಹಲವು ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಕೊಲೆ ಮತ್ತು ಕೊಲೆ ಯತ್ನದ ಪ್ರಕರಣದಲ್ಲಿ ಪೊಲೀಸರು ಈತನನ್ನು ಹುಡುಕುತ್ತಿದ್ದರು.

ರಾಜಕೀಯ ನಾಯಕರೊಂದಿಗೆ ಸಂಪರ್ಕ:

ಕಾನ್ಪುರ ನಗರದಿಂದ ಗ್ರಾಮದವರೆಗೆ ವಿಕಾಸ್ ದುಬೆ ಹಿಡಿತ ಹೊಂದಿದ್ದ. ಪಂಚಾಯತ್, ವಿಧಾನಸಭೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೆ ರಾಜಕಾರಣಿಗಳೊಂದಿಗೆ ಈತನಿಗೆ ಸಂಪರ್ಕ ಇತ್ತು. ಎಸ್​ಪಿ, ಬಿಎಸ್​ಪಿ ಮತ್ತು ಬಿಜೆಪಿಯ ದೊಡ್ಡ ನಾಯಕರೊಂದಿಗೆ ಈತನ ಸಂಬಂಧವಿತ್ತು. 2001ರಲ್ಲಿ ಈತ ಪೊಲೀಸ್ ಠಾಣೆಯೊಳಗೆ ಪ್ರವೇಶಿಸಿ ಬಿಜೆಪಿ ಸರ್ಕಾರದ ಸಚಿವರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದ. ಇದಾದ ಬಳಿಕ ನ್ಯಾಯಾಲಯಕ್ಕೆ ಶರಣಾಗಿದ್ದ. ಕೆಲ ಸಮಯದ ನಂತರ ಜಾಮೀನಿನ ಮೇಲೆ ಹೊರಬಂದು, ರಾಜಕಾರಣಿಗಳ ರಕ್ಷಣೆಯೊಂದಿಗೆ ರಾಜಕೀಯ ಪ್ರವೇಶಿಸಿ ನಗರ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲೂ ಸಹ ಜಯಗಳಿಸಿದ್ದ.

ಶಿವರಾಜ್‌ಪುರದ ನಗರ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು:

ವಿಕಾಸ್ ದುಬೆ ಯುಪಿಯ ನಾಲ್ಕು ರಾಜಕೀಯ ಪಕ್ಷಗಳಲ್ಲಿ ಉತ್ತಮ ಹಿಡಿತ ಹೊಂದಿದ್ದ. 2002ರ ಸಮಯದಲ್ಲಿ ಮಾಯಾವತಿ ಸಿಎಂ ಆಗಿದ್ದಾಗ, ಬಿಲ್ಹೌರ್, ಶಿವರಾಜ್ಪುರ್, ರಾಣಿಯಾನ್, ಚೌಬೆಪುರ ಮತ್ತು ಕಾನ್ಪುರ್ ನಗರಗಳಲ್ಲಿ ಈತ ಹಿಡಿತ ಸಾಧಿಸಿದ್ದ. ಈ ಸಮಯದಲ್ಲಿ ಅಕ್ರಮವಾಗಿ ಭೂಮಿ ಮತ್ತು ಇತರ ಅಕ್ರಮ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದ್ದ. ಶಿವರಾಜ್‌ಪುರದ ನಗರ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲಿಯೂ ಗೆದ್ದಿದ್ದ. ಇದಾದ ಕೆಲ ಸಮಯದ ನಂತರ ಆತನ ಬಂಧನದ ಆದೇಶ ಬಂದಿತ್ತು. ಕೆಲ ಪ್ರದೆಶಗಳಲ್ಲಿ ತನ್ನ ಆಪ್ತರು ಅಧಿಕಾರ ವಹಿಸುವಲ್ಲಿಯೂ ದುಬೆ ಪ್ರಮುಖ ಪಾತ್ರ ವಹಿಸಿದ್ದ.

ವಿಜಯೋತ್ಸವದ ನಂತರ ಸಂತೋಷ್ ಶುಕ್ಲಾ ಅವರೊಂದಿಗೆ ವಿವಾದ:

1996ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಚೌಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹರಿಕೃಷ್ಣ ಶ್ರೀವಾಸ್ತವ ಮತ್ತು ಸಂತೋಷ್ ಶುಕ್ಲಾ ನಡುವೆ ಹೋರಾಟ ನಡೆದಿತ್ತು. ವಿಕಾಸ್ ದುಬೆ ಶ್ರೀವಾಸ್ತವ ಅವರನ್ನು ಗೆಲ್ಲಿಸಬೇಕೆಂದು ಪ್ರಚಾರ ಮಾಡಿದ್ದ. ಈ ಸಂದರ್ಭದಲ್ಲಿ ಸಂತೋಷ್ ಶುಕ್ಲಾ ಮತ್ತು ವಿಕಾಸ್ ನಡುವೆ ವಾಗ್ವಾದ ನಡೆದಿತ್ತು. ಚುನಾವಣೆಯಲ್ಲಿ ಹರಿಕೃಷ್ಣ ಶ್ರೀವಾಸ್ತವ ಗೆದ್ದರು. ವಿಜಯೋತ್ಸವದ ಬಳಿಕ ಸಂತೋಷ್ ಶುಕ್ಲಾ ಹಾಗೂ ವಿಕಾಸ್ ನಡುವೆ ವಿವಾದ ಭುಗಿಲೆದ್ದಿತ್ತು. ಇಬ್ಬರ ನಡುವಿನ ಗಲಾಟೆಯಲ್ಲಿ ಎರಡೂ ಕಡೆಯ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದರು.

ಪೊಲೀಸ್ ಠಾಣೆಗೆ ಪ್ರವೇಶಿಸಿ ರಾಜ್ಯ ಸಚಿವರ ಹತ್ಯೆ:

2001ರಲ್ಲಿ ಯುಪಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಸಂತೋಷ್ ಶುಕ್ಲಾ ಅವರನ್ನು ಸಚಿವರನ್ನಾಗಿ ಮಾಡಲಾಯಿತು. ಇದರ ನಂತರ, ವಿಕಾಸ್ ದುಬೆ ಅಪರಾಧ ಪ್ರಕರಣಗಳನ್ನು ಕೊನೆಗಾಣಿಸಲು ಕ್ಷಣಗಣನೆ ಪ್ರಾರಂಭವಾಯಿತು. ಅದೇ ಸಮಯದಲ್ಲಿ ವಿಕಾಸ್ ಬಿಎಸ್​ಪಿ ಹಾಗೂ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಬೆಳೆಸಿಕೊಂಡ. ಸಂತೋಷ್ ಶುಕ್ಲಾ ಮತ್ತು ವಿಕಾಸ್ ದುಬೆ ನಡುವೆ ರಾಜಿ ಮಾಡಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದರೂ ಅವರು ಯಶಸ್ವಿಯಾಗಲಿಲ್ಲ. ಅದೇ ಸಮಯದಲ್ಲಿ ಸಂತೋಷ್ ಶುಕ್ಲಾ ತಮ್ಮ ಅಧಿಕಾರದ ಬಲದಿಂದ ವಿಕಾಸ್ ದುಬೆ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಿದರು. ಹೀಗಾಗಿ ವಿಕಾಸ್ ಸಂತೋಷ್​ ಶುಕ್ಲಾ ಅವರ ಹತ್ಯೆಯ ಸಂಚು ರೂಪಿಸಿದ.

2001ರಲ್ಲಿ ಸಂತೋಷ್ ಶುಕ್ಲಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ವಿಕಾಸ್ ತನ್ನ ಸಹಾಯಕರೊಂದಿಗೆ ಅಲ್ಲಿಗೆ ತಲುಪಿ ಸಂತೋಷ್ ಶುಕ್ಲಾ ಮೇಲೆ ಗುಂಡು ಹಾರಿಸಲಾರಂಭಿಸಿದ. ತನ್ನ ಜೀವ ಉಳಿಸಲು ಸಂತೋಷ್ ಶುಕ್ಲಾ ಶಿವ್ಲಿ ಪೊಲೀಸ್ ಠಾಣೆಯನ್ನು ತಲುಪಿದರು. ಆದರೆ ವಿಕಾಸ್ ದುಬೆ ಅಲ್ಲಿಗೆ ಬಂದು ಲಾಕಪ್‌ನಲ್ಲಿ ಅಡಗಿದ್ದ ಸಂತೋಷ್ ಶುಕ್ಲಾ ಅವರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದ.

ABOUT THE AUTHOR

...view details