ಕರ್ನಾಟಕ

karnataka

ETV Bharat / bharat

ಪೊಲೀಸರ ಪ್ರಾಣ ತೆಗೆದುಕೊಂಡ ವಿಕಾಸ್ ದುಬೆ ಕ್ರಿಮಿನಲ್ ಇತಿಹಾಸ ಹೀಗಿದೆ

ಕುಖ್ಯಾತ ಹಿಸ್ಟರಿ - ಶೀಟರ್ ವಿಕಾಸ್ ದುಬೆ ಮನೆಯ ಮೇಲೆ ದಾಳಿ ನಡೆಸಲು ಹೋದ ಪೊಲೀಸ್ ತಂಡದ ಮೇಲೆ ತೀವ್ರ ಗುಂಡಿನ ದಾಳಿ ನಡೆದಿದ್ದು, ಎಂಟು ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. 6 ಪೊಲೀಸರು ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆ. ವಿಕಾಸ್ ದುಬೆ ವಿರುದ್ಧ ಈವರೆಗೆ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

vikas dubey
vikas dubey

By

Published : Jul 3, 2020, 10:23 AM IST

ಲಖನೌ (ಉತ್ತರ ಪ್ರದೇಶ): ಕುಖ್ಯಾತ ಹಿಸ್ಟರಿ - ಶೀಟರ್ ವಿಕಾಸ್ ದುಬೆ ಮನೆಯ ಮೇಲೆ ದಾಳಿ ನಡೆಸಲು ಹೋದ ಪೊಲೀಸ್ ತಂಡದ ಮೇಲೆ ತೀವ್ರ ಗುಂಡಿನ ದಾಳಿ ನಡೆದಿದ್ದು, ಎಂಟು ಮಂದಿ ಪೊಲೀಸರು ಕಾನ್ಪುರದಲ್ಲಿ ಹುತಾತ್ಮರಾಗಿದ್ದಾರೆ. ಗುಂಡಿನ ದಾಳಿಯಲ್ಲಿ 6 ಪೊಲೀಸರು ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆ.

ಯಾರೀ ಹಿಸ್ಟರಿ -ಶೀಟರ್ ವಿಕಾಸ್ ದುಬೆ?

  • ಕುಖ್ಯಾತ ಹಿಸ್ಟರಿ ಶೀಟರ್ ವಿಕಾಸ್ ದುಬೆ 2001ರಲ್ಲಿ ರಾಜ್ಯ ಸಚಿವ ಸಂತೋಷ್ ಶುಕ್ಲಾ ಅವರ ಹತ್ಯೆಯ ಪ್ರಮುಖ ಆರೋಪಿ.
  • ಕಾನ್ಪುರದ ಶಿವ್ಲಿ ಪೊಲೀಸ್ ಠಾಭಾ ಪ್ರದೇಶದಲ್ಲಿರುವ ತಾರಚಂದ್ ಇಂಟರ್ ಕಾಲೇಜಿನ ಸಹಾಯಕ ವ್ಯವಸ್ಥಾಪಕ ಸಿದ್ಧೇಶ್ವರ ಪಾಂಡೆ ಅವರ ಹತ್ಯೆಯಲ್ಲೂ ಈತನ ಕೈವಾಡ ಇರುವುದು ಬಹಿರಂಗವಾಗಿತ್ತು.
  • 2000ನೇ ಇಸವಿಯಲ್ಲಿ ಶಿವ್ಲಿ ಪೊಲೀಸ್ ಠಾಣೆ ಪ್ರದೇಶದಲ್ಲಿ ರಾಂಬಾಬು ಯಾದವ್ ಹತ್ಯೆ ಪ್ರಕರಣದಲ್ಲಿ ಜೈಲಿನೊಳಗಿಂದಲೇ ಪಿತೂರಿ ನಡೆಸಿದ ಆರೋಪ ವಿಕಾಸ್ ದುಬೆ ಮೇಲಿದೆ.
  • ವಿಕಾಸ್ ದುಬೆ 2004ರಲ್ಲಿ ಕೇಬಲ್ ಉದ್ಯಮಿ ದಿನೇಶ್ ದುಬೆ ಅವರ ಹತ್ಯೆಯ ಆರೋಪಿ.
  • 2018ರಲ್ಲಿ ವಿಕಾಸ್ ದುಬೆ ಜೈಲಿನಲ್ಲಿ ಇದ್ದುಕೊಂಡೇ ತನ್ನ ಸೋದರ ಸಂಬಂಧಿ ಅನುರಾಗ್ ಮೇಲೆ ಹಲ್ಲೆ ನಡೆಸುವ ಸಂಚು ರೂಪಿಸಿದ್ದ.
  • ಹಿಸ್ಟರಿ ಶೀಟರ್ ವಿಕಾಸ್ ದುಬೆ ಯುಪಿಯ ಕೆಲ ರಾಜಕೀಯ ಪಕ್ಷಗಳಲ್ಲೂ ಹಿಡಿತ ಹೊಂದಿದ್ದಾನೆ.
  • ಅಕ್ರಮವಾಗಿ ಆಸ್ತಿ ಹೊಂದಿರುವ ಆರೋಪವೂ ವಿಕಾಸ್ ದುಬೆ ಮೇಲಿದೆ.
  • ಈತನ ಮೇಲೆ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details