ನವದೆಹಲಿ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿರುವ ತಬ್ಲೀಗ್ ಜಮಾಅತ್ ಮುಖ್ಯಸ್ಥ ಮೌಲಾನಾ ಸಾದ್ ನಿವಾಸದ ಮೇಲೆ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ. ಜೊತೆಗೆ ಜಿಲ್ಲೆಯ ಕಂಧ್ಲಾದಲ್ಲಿರುವ ಸಾದ್ ತೋಟದ ಮನೆ ಮನೆಯಲ್ಲಿಯೂ ಪೊಲೀಸರು ಶೋಧ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತಬ್ಲೀಗ್ ಜಮಾಅತ್ ಮುಖ್ಯಸ್ಥ ಮೌಲಾನ ಸಾದ್ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ
ಕೊರೊನಾ ವೈರಸ್ ಎಚ್ಚರಿಕೆಯ ನಡುವೆಯೂ ದೆಹಲಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿದ ತಬ್ಲೀಗ್ ಜಮಾಅತ್ ಮುಖ್ಯಸ್ಥ ಮೌಲಾನ ಸಾದ್ನ ಉತ್ತರ ಪ್ರದೇಶದ ಮನೆ ಮೇಲೆ ದೆಹಲಿಯ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.
ಕೊರೊನಾ ವೈರಸ್ ಎಚ್ಚರಿಕೆಯ ಹೊರತಾಗಿಯೂ ಕಳೆದ ತಿಂಗಳು ದೆಹಲಿಯ ನಿಝಾಮುದ್ದೀನ್ ಮರ್ಕಝ್ನಲ್ಲಿ ಸಾದ್ ಬೃಹತ್ ಧಾರ್ಮಿಕ ಸಭೆಯನ್ನು ಆಯೋಜಿಸಿದ್ದ. ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ತಬ್ಲೀಗ್ ಜಮಾಅತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಂದಾಗಿ ದೇಶದಾದ್ಯಂತ 4,200 ರಷ್ಟು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಕೊರೊನಾ ಹರಡುವ ಭೀತಿ ಹಿನ್ನೆಲೆ ಬೃಹತ್ ಸಭೆಗಳನ್ನು ನಡೆಸಬಾರದು ಎಂಬ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಸಾದ್ ಸೇರಿ ಏಳು ಜನರ ವಿರುದ್ಧ ಮಾರ್ಚ್ 31 ರಂದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸಾದ್ ತಲೆಮರೆಸಿಕೊಂಡಿದ್ದಾನೆ.