ನವದೆಹಲಿ: ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದ್ದು, 2019ರಲ್ಲಿ ಒಂದು ಲಕ್ಷ ಮಕ್ಕಳಲ್ಲಿ 33.2 ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗಿದೆ. ಈ ಪ್ರಮಾಣವೂ 2018ರಲ್ಲಿ 31.8ರಷ್ಟು ಇದೆ. ಶೇ.31.2ರಷ್ಟು ಪ್ರಕರಣಗಳು ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದು,ಶೇ.94ರಷ್ಟು ಪ್ರಕರಣಗಳಲ್ಲಿ ಮಕ್ಕಳು ಬಲಿಪಶುವಾಗಿದ್ದಾರೆ.
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು: 2019ರಲ್ಲಿ ವರದಿಯಾದ ಪ್ರಕರಣಗಳೆಷ್ಟು ಗೊತ್ತಾ? - crime rate registered
2019ರಲ್ಲಿ ಒಂದು ಲಕ್ಷ ಮಕ್ಕಳಲ್ಲಿ 33.2 ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗಿದ್ದು, 2018ರಲ್ಲಿ ಈ ಪ್ರಮಾಣವೂ 31.8ರಷ್ಟು ಇತ್ತು.ಈ ಪೈಕಿ ಸುಮಾರು ಶೇ.46.6ರಷ್ಟು ಅಪಹರಣ ಪ್ರಕರಣಗಳು ಮತ್ತು ಶೇ.35.3ರಷ್ಟು ಲೈಂಗಿಕ ಪ್ರಕರಣಗಳಿವೆ. ವೇಶ್ಯಾವಾಟಿಕೆಗಾಗಿ ಮಕ್ಕಳನ್ನು ಅಪಹರಿಸಿ ಪ್ರಚೋದಿಸಿದ 432 ಪ್ರಕರಣಗಳು ವರದಿಯಾಗಿವೆ.
![ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು: 2019ರಲ್ಲಿ ವರದಿಯಾದ ಪ್ರಕರಣಗಳೆಷ್ಟು ಗೊತ್ತಾ? ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು](https://etvbharatimages.akamaized.net/etvbharat/prod-images/768-512-9010772-1073-9010772-1601555615275.jpg)
16 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು 2018 ರಿಂದ 2019ರಲ್ಲಿ ಶೇ.4.5ರಷ್ಟು ಹೆಚ್ಚಾಗಿವೆ. 2019ರಲ್ಲಿ 1.48 ಲಕ್ಷ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸುಮಾರು ಶೇ.46.6ರಷ್ಟು ಅಪಹರಣ ಪ್ರಕರಣಗಳು ಮತ್ತು ಶೇ.35.3ರಷ್ಟು ಲೈಂಗಿಕ ಪ್ರಕರಣಗಳಿವೆವೇಶ್ಯಾವಾಟಿಕೆಗಾಗಿ ಮಕ್ಕಳನ್ನು ಅಪಹರಿಸಿ ಪ್ರಚೋದಿಸಿದ 432 ಪ್ರಕರಣಗಳು ವರದಿಯಾಗಿವೆ.
ಲೈಂಗಿಕ ಅಪರಾಧ ಕಾಯ್ದೆಯಡಿ 2018ರ 104788 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿದ್ದರೆ, 2019 ರಲ್ಲಿ 41562 ಹೊಸ ಪ್ರಕರಣಗಳನ್ನು ವಿಚಾರಣೆಗೆ ಕಳುಹಿಸಲಾಗಿದೆ. ವಿಚಾರಣೆಗೆ ಕಾಯಿದೆಯಡಿ ಒಟ್ಟು 146350 ಪ್ರಕರಣಗಳಲ್ಲಿ 66 ಪ್ರಕರಣಗಳನ್ನು ನ್ಯಾಯಾಲಯ ರದ್ದುಪಡಿಸಿದೆ. 4 ಪ್ರಕರಣಗಳನ್ನು ಪ್ರಾಸಿಕ್ಯೂಷನ್ ಹಿಂತೆಗೆದುಕೊಂಡಿದೆ. 525 ಪ್ರಕರಣಗಳನ್ನು ವಿಚಾರಣೆಯಿಲ್ಲದೆ ವಿಲೇವಾರಿ ಮಾಡಲಾಗಿದ್ದು, 348 ಪ್ರಕರಣಗಳನ್ನು ರಾಜಿ ಮಾಡಲಾಗಿದೆ.