ದೆಹಲಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಪತ್ನಿಯರಿಗೆ ಟೀಂ ಇಂಡಿಯಾ ಫಾಸ್ಟ್ ಬೌಲರ್ ಮೊಹ್ಮದ್ ಶಮಿ ಹಣಕಾಸು ನೆರವು ನೀಡಿದ್ದಾರೆ. Crpf Wives Welfare Associationಗೆ ತಮ್ಮ ಕಡೆಯಿಂದ 5 ಲಕ್ಷ ರೂ. ನೆರವನ್ನ ಮೊಹ್ಮದ್ ಶಮಿ ನೀಡಿದ್ದಾರೆ.
ವೀರೇಂದ್ರ ಸೆಹ್ವಾಗ್ ಹಾಗೂ ಶಿಖರ್ ಧವನ್ ಬಳಿಕ ಮೊಹ್ಮದ್ ಶಮಿ ಸಿಆರ್‌ಪಿಎಫ್ ಹುತಾತ್ಮ ಯೋಧರ ಕುಟುಂಬಸ್ಥರ ನೋವಿಗೆ ಸ್ಪಂದಿಸಿದ್ದಾರೆ. ನಾವು ದೇಶಕ್ಕಾಗಿ ಕ್ರಿಕೆಟ್ ಆಡುತ್ತೇವೆ. ಆದ್ರೇ, ಗಡಿಯಲ್ಲಿ ಯೋಧರು ನಮ್ಮ ದೇಶ ಕಾಯುತ್ತಾರೆ. ನಾವು ನಮ್ಮ ಯೋಧರ ಕುಟುಂಬಗಳ ನೋವಿನಲ್ಲಿ ಪಾಲುದಾರರಾಗಬೇಕು. ನಾವು ಯಾವಾಗಲೂ ಆ ಕುಟುಂಬಗಳ ಜತೆಗೇ ನಿಲ್ಲಬೇಕು ಅಂತ ಫಾಸ್ಟ್ ಬೌಲರ್ ಮೊಹ್ಮದ್ ಶಮಿ ಹೇಳ್ಕೊಂಡಿದ್ದಾರೆ.
ಈ ಹಿಂದೆ ಟೀಂ ಇಂಡಿಯಾ ಓಪನಿಂಗ್ ಬ್ಯಾಟ್ಸ್‌ಮೆನ್ ಶಿಖರ್ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದರು. ಅಲ್ಲದೇ ಎಲ್ಲರೂ ಯೋಧರ ಕುಟುಂಬಗಳ ಸಹಾಯ ಹಸ್ತ ನೀಡಬೇಕು ಅಂತ ಕರೆ ನೀಡಿದ್ದರು. ಅಷ್ಟೇ ಅಲ್ಲ, ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಕೂಡ ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ವೆಚ್ಚ ಭರಿಸೋದಾಗಿ ಹೇಳಿದ್ದರು.
ಸೆಹ್ವಾಗ್ ಇಂಟರ್ ನ್ಯಾಶನಲ್ ಸ್ಕೂಲ್‌ನಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದ್ದರು. ಸ್ಟಾರ್ ಬಾಕ್ಸರ್ ವೀಜೇಂದ್ರ ಸಿಂಗ್ ಕೂಡ ಒಂದು ತಿಂಗಳ ವೇತನವನ್ನ ಹುತಾತ್ಮ ಯೋಧರ ಕುಟುಂಬಗಳಿಗೆ ನೀಡೋದಾಗಿ ಹೇಳಿದ್ದರು.
ವಿದರ್ಭ ಕ್ಯಾಪ್ಟನ್ ಫೈಜ್ ಫಸಲ್ ಕೂಡ ಇತ್ತೀಚೆಗೆ ಗೆದ್ದ ಇರಾನಿ ಕಪ್‌ನ ಪ್ರಶಸ್ತಿ ಮೊತ್ತವನ್ನ ಯೋಧರ ಕುಟುಂಬಗಳಿಗೆ ನೀಡೋದಾಗಿ ಹೇಳಿದ್ದರು.