ನವದೆಹಲಿ: ಕಳೆದೆರಡು ದಿನಗಳ ಹಿಂದೆ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಅಮಿತ್ ಬಂಡಾರಿ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಡರ್-23 ಕ್ರಿಕೆಟರ್ ಒಬ್ಬನ ಮೇಲೆ ಆಜೀವ ನಿಷೇಧ ಶಿಕ್ಷೆ ಹೇರಿ ಆದೇಶ ಹೊರಡಿಸಲಾಗಿದೆ.
ಅಮಿತ್ ಬಂಡಾರಿ ಹಲ್ಲೆ ಕೇಸ್: ದಾಳಿಕೋರನ ಮೇಲೆ ಆಜೀವ ನಿಷೇಧ ಹೇರಿದ ಡಿಡಿಸಿಎ
ಅಂಡರ್ - 23 ಕ್ರಿಕೆಟ್ ತಂಡಕ್ಕೆ ತನ್ನನ್ನ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಕ್ರಿಕೆಟರ್ ಅನುಜ್ ಧೇಡಾ ಹಾಗೂ ಆತನ ಸಹಚರರು ಕಳೆದ ಸೋಮವಾರ ಅಮಿತ್ ಬಂಡಾರಿ ಮೇಲೆ ಹಲ್ಲೆ ಮಾಡಿದ್ದು ಅನುಜ್ ಧೇಡಾ ಮೇಲೆ ಆಜೀವ ನಿಷೇಧ ಶಿಕ್ಷೆ ಹೇರಲಾಗಿದೆ.
ಅಂಡರ್ - 23 ಕ್ರಿಕೆಟ್ ತಂಡಕ್ಕೆ ತನ್ನನ್ನ ಆಯ್ಕೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಕ್ರಿಕೆಟರ್ ಅನುಜ್ ಧೇಡಾ ಹಾಗೂ ಆತನ ಸಹಚರರು ಕಳೆದ ಸೋಮವಾರ ಅಮಿತ್ ಬಂಡಾರಿ ಮೇಲೆ ಹಲ್ಲೆ ಮಾಡಿದ್ದರು. ಘಟನೆ ನಡೆದ ಬಳಿಕ ಪೊಲೀಸರು ಇವರನ್ನ ಬಂಧನ ಸಹ ಮಾಡಿದ್ದರು. ಇದೀಗ ಡಿಡಿಸಿಎ(ದೆಹಲಿ ಕ್ರಿಕೆಟ್ ಅಸೋಷಿಯೇಷನ್) ಚೇರ್ಮನ್ ರಜತ್ ಶರ್ಮಾ ಮಾತನಾಡಿದ್ದು, ಹಲ್ಲೆ ಮಾಡಿರುವ ಅನುಜ್ ಧೇಡಾ ಮೇಲೆ ಆಜೀವ ನಿಷೇಧ ಶಿಕ್ಷೆ ಹೇರಲಾಗಿದೆ ಎಂದು ತಿಳಿಸಿದ್ದಾರೆ.
ಇದರ ಜತೆಗೆ ಉಳಿದ ಕಾನೂನು ನಿಯಮಗಳನುಸಾರವಾಗಿ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದು ತಿಳಿಸಿರುವ ರಜತ್, ಭವಿಷ್ಯದಲ್ಲಿ ಯಾವುದೇ ಕ್ರಿಕೆಟ್ನಲ್ಲೂ ಅವರು ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಖಂಡಿಸಿ ಟ್ವೀಟ್ ಮಾಡಿದ್ದ ಮಾಜಿ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್, ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು.