ಕರ್ನಾಟಕ

karnataka

ETV Bharat / bharat

ಕೋಪಕ್ಕೆ ಕಾರಣವಾಯ್ತು ಸ್ನೇಹಿತನ ಗೆಲುವು.. ಬ್ಯಾಟ್​ನಿಂದ ಹಲ್ಲೆ ಮಾಡಿ ಗೆಳೆಯನ ಹತ್ಯೆ - ವಿಶಾಖಪಟ್ಟಣಂ

ಕ್ರಿಕೆಟ್ ಆಡುವಾಗ ಬಾಲಕರಿಬ್ಬರ ನಡುವೆ ಉಂಟಾದ ಕೋಪ ಓರ್ವ ಬಾಲಕನ ಸಾವಿಗೆ ಕಾರಣವಾಗಿದೆ.

ಸ್ನೇಹಿತನಿಂದ ಹಲ್ಲೆಗೊಳಗಾಗಿದ್ದ ಬಾಲಕ ವಿಜಯ್ ಸಾವು

By

Published : Aug 14, 2019, 12:41 PM IST

ವಿಶಾಖಪಟ್ಟಣಂ(ಆಂಧ್ರ ಪ್ರದೇಶ): ಕ್ರಿಕೆಟ್ ಆಡುವಾಗ ಉಂಟಾದ ವಿವಾದವು ಒಬ್ಬ ಬಾಲಕನ ಜೀವ ತೆಗೆದುಕೊಂಡಿರುವ ದಾರುಣ ಘಟನೆ ವಿಶಾಖಪಟ್ಟನಂನಲ್ಲಿ ನಡೆದಿದೆ.

ಸ್ನೇಹಿತನಿಂದ ಹಲ್ಲೆಗೊಳಗಾಗಿದ್ದ ಬಾಲಕ ವಿಜಯ್ ಸಾವು

ನಗರದ ಕಾಸರ ಎಂಬ ಪ್ರದೇಶದ ವಿಜಯ್​ ಎಂಬ ಯುವಕ ಮತ್ತು ಆತನ ಸ್ನೇಹಿತರು ಭಾನುವಾರ ಕ್ರಿಕೆಟ್​ ಆಡುತ್ತಿದ್ದರು. ಅದಾಗಲೇ ಎರಡು ಪಂದ್ಯಗಳಲ್ಲಿ ವಿಜಯ್​ ಗೆಲುವು ಸಾಧಿಸಿದ್ದ.

ಮತ್ತೊಂದು ಪಂದ್ಯದಲ್ಲೂ ವಿಜಯ್​ ಗೆಲುವಿನ ಸನಿಹದಲ್ಲಿದ್ದನು. ಇದರಿಂದ ಕೋಪಗೊಂಡ ಆತನ ಸ್ನೇಹಿತ ಬ್ಯಾಟ್​ನಿಂದ ವಿಜಯ್​ ಹೊಟ್ಟೆ ಭಾಗಕ್ಕೆ ತಿವಿದಿದ್ದಾನೆ. ಕರುಳಿನಲ್ಲಿ ತೀವ್ರ ರಕ್ತಸ್ರಾವ ಉಂಟಾದ ಪರಿಣಾಮ ವಿಜಯ್​ ಕುಸಿದುಬಿದ್ದಿದ್ದಾನೆ.

ಕೂಡಲೆ ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ವಿಜಯ್ ಮಧ್ಯರಾತ್ರಿ ಸಾವಿಗೀಡಾಗಿದ್ದಾನೆ. ಈ ಸಂಬಂಧ ವಿಶಾಖಪಟ್ಟಣಂನ ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details