ಹೌರಾ: ಲಂಡನ್ನಲ್ಲಿರುವ ವಿತ್ತೀಯ ಅಪರಾಧಿ ನೀರವ್ ಮೋದಿ ಬಂಧನವಾಗಿರುವ ಸಂಪೂರ್ಣ ಶ್ರೇಯಸ್ಸು ಟೆಲಿಗ್ರಾಫ್ ಪತ್ರಕರ್ತನಿಗೆ ಸಲ್ಲಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.
ನೀರವ್ ಮೋದಿ ಬಂಧನದ ಶ್ರೇಯಸ್ಸು ಲಂಡನ್ ಪತ್ರಕರ್ತನಿಗೆ ಸಲ್ಲಬೇಕು: ಮಮತಾ ಬ್ಯಾನರ್ಜಿ - ಮಮತಾ ಬ್ಯಾನರ್ಜಿ
ಲಂಡನ್ ಪತ್ರಕರ್ತ ನೀರವ್ ಮೋದಿಯನ್ನು ಗುರುತಿಸಿ ಅವರನ್ನು ಮಾತನಾಡಿಸದ್ದಾರೆ. ಈ ವಿಡಿಯೊ ವೈರಲ್ ಆಗಿದ್ದ ಕಾರಣವೇ ನೀರವ್ ಲಂಡನ್ನಲ್ಲಿ ಇರುವುದು ಗೊತ್ತಾಯಿತು ಎಂದು ಬ್ಯಾನರ್ಜಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ
ಲಂಡನ್ ಪತ್ರಕರ್ತ ನೀರವ್ ಮೋದಿಯನ್ನು ಗುರುತಿಸಿ ಅವರನ್ನು ಮಾತನಾಡಿಸದ್ದಾರೆ. ಈ ವಿಡಿಯೊ ವೈರಲ್ ಆಗಿದ್ದ ಕಾರಣವೇ ನೀರವ್ ಲಂಡನ್ನಲ್ಲಿ ಇರುವುದು ಗೊತ್ತಾಯಿತು ಎಂದು ಬ್ಯಾನರ್ಜಿ ಹೇಳಿದ್ದಾರೆ.
ಅಕಸ್ಮಾತಾಗಿ ಆದ ಘಟನೆಯನ್ನು ಚುನಾವಣೆ ಲಾಭಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದೆ. ಕೇಂದ್ರ ಸರ್ಕಾರವು ಇದು ತಾನು ಮಾಡಿದ ಸಾಧನೆ ಎಂದು ಬೀಗುತ್ತಿದೆ. ಚುನಾವಣೆ ಸಮಯದಲ್ಲಿ ಇಂಥ ಸಾಧನೆಗಳನ್ನು ಬಿಜೆಪಿ ಬಹಳಷ್ಟು ಮಾಡಿದೆ ಎಂದು ದೀದಿ ಕುಟುಕಿದ್ದಾರೆ.