ಹೈದರಾಬಾದ್:ಇಂಗ್ಲೆಂಡ್‌ನ ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, ಅಧಿಕ ಜ್ವರ ಅಥವಾ ನಿರಂತರ ಕೆಮ್ಮು ಕೊರೊನಾ ವೈರಸ್‌ನ ಮುಖ್ಯ ಲಕ್ಷಣ. ಇದು ಹೆಚ್ಚಿನ ರೋಗಿಗಳಲ್ಲಿ ಕಂಡುಬರುತ್ತದೆ. ಆದರೂ ಕೆಲ ಸಂದರ್ಭಗಳಲ್ಲಿ ರೋಗಿಗಳಲ್ಲಿ ಅನಾರೋಗ್ಯದ ಯಾವುದೇ ಲಕ್ಷಣಗಳಿಲ್ಲದೆಯೂ ಅವರಲ್ಲಿ ಸೋಂಕು ಪತ್ತೆಯಾಗಿದೆ.
ಕೋವಿಡ್-19 ವಿಭಿನ್ನ ಮುಖಗಳನ್ನು ಹೊಂದಿರುವುದು ಇತ್ತೀಚಿನ ಹಲವು ಪ್ರಕರಣಗಳಲ್ಲಿ ಪತ್ತೆಯಾಗಿದೆ. ಇದು ಜ್ವರಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದ್ದು, ಒಂದು ರೀತಿಯ ಉಸಿರಾಟದ ಕಾಯಿಲೆಯಾಗಿದೆ. ಇದು ಈ ವೈರಸ್ ಅನ್ನು ಇನ್ನಷ್ಟು ಅಪಾಯಕಾರಿಯನ್ನಾಗಿ ಮಾಡುತ್ತದೆ.
ಕೊರೊನಾ ವೈರಸ್ ಲಕ್ಷಣಗಳು ಏಕೆ ಭಿನ್ನವಾಗಿವೆ ಎಂಬ ಪ್ರಶ್ನೆಯನ್ನೂ ಇದು ಹುಟ್ಟುಹಾಕುತ್ತದೆ. ಶೀತಜ್ವರ ವಿವಿಧ ವೈರಸ್‌ಗಳಿಂದ ಬರುವ ರೋಗವೆಂದು ಪರಿಗಣಿಸಲಾಗಿದೆ. ಆದರೆ, ಇದರ ರೋಗಲಕ್ಷಣಗಳು ಯಾವಾಗಲೂ ಒಂದೇ ಆಗಿರುತ್ತವೆ.
ಭಾರತದಲ್ಲಿ ಕೊರೊನಾ ವೈರಸ್ ಇರುವ ಸುಮಾರು 80 ಪ್ರತಿಶತದಷ್ಟು ಜನರು ಲಕ್ಷಣರಹಿತ(asymptomatic)ರಾಗಿದ್ದಾರೆ. ಅಂದರೆ ಅವರಲ್ಲಿ ಈ ಸೋಂಕಿನ ಲಕ್ಷಣಗಳೇ ಕಾಣಿಸಿಲ್ಲವಂತೆ.
ಅಮೆರಿಕದ ಮಿಚಿಗನ್‌ನ ಸೇಂಟ್ ಜೋಸೆಫ್ ಮರ್ಸಿ ಹೆಲ್ತ್ ಸಿಸ್ಟಂನ ಡಾ. ಆಂಥೋನಿ ಡಿಬಿನೆಡೆಟ್ ಅವರು, ಅಮೆರಿಕನ್ ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿಗೆ ತಿಳಿಸಿದಂತೆ, ಕಳೆದ ಮಾರ್ಚ್ನಲ್ಲಿ ತೀವ್ರ ಅತಿಸಾರದಿಂದ ಬಳಲುತ್ತಿರುವ 71 ವರ್ಷದ ಮಹಿಳೆಯೊಬ್ಬರು ಅವರ ಬಳಿ ಬಂದಿದ್ದರಂತೆ. ಡಾ. ಆಂಥೋನಿ ಹೇಳುವಂತೆ, ಅವರ ದೇಹದ ತಾಪಮಾನವು ಸಾಮಾನ್ಯವಾಗಿರುವುದರ ಜೊತೆಗೆ ಉಸಿರಾಟದ ತೊಂದರೆಗಳೂ ಇರಲಿಲ್ಲ. ಮಲ ಪರೀಕ್ಷೆಯಲ್ಲೂ ಯಾವುದೇ ಬ್ಯಾಕ್ಟೀರಿಯಾಗಳು ಕಂಡುಬಂದಿಲ್ಲ. ಆದರೆ, ಅನಾರೋಗ್ಯಕ್ಕೆ ಒಳಗಾದ 9 ದಿನಗಳ ನಂತರ, ಮಹಿಳೆ ಕಫ ಇರುವ ಬಗ್ಗೆ ತಿಳಿಸಿದ್ದಾರೆ. ನಂತರ ಆಕೆಗೆ ಕೊರೊನಾ ಪರೀಕ್ಷೆಯನ್ನು ಮಾಡಿದಾಗ ಆಕೆಗೆ ಸೋಂಕು ಇರುವುದು ದೃಢವಾಗಿತ್ತು. ಈಗ ಇದು ಒಂದು ವಿಶಿಷ್ಟವಾದ ಪ್ರಕರಣವಾಗಿಲ್ಲ. ಏಕೆಂದರೆ ಉಸಿರಾಟದ ತೊಂದರೆಯ ಜೊತೆಗೆ ಕೊರೊನಾ ರೋಗಿಗಳಲ್ಲಿ ಹೃದಯಾಘಾತದಿಂದ ಮೂತ್ರಪಿಂಡದ ಸೋಂಕಿನವರೆಗಿನ ರೋಗಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಡಾಕ್ಟರ್ ಹೇಳುತ್ತಾರೆ.
ರೋಗಲಕ್ಷಣಗಳಲ್ಲಿ ಇಂತಹ ವ್ಯತ್ಯಾಸ ಏಕೆ?