ಕರ್ನಾಟಕ

karnataka

ETV Bharat / bharat

ಗುಡ್​ನ್ಯೂಸ್​; ದೇಶದಲ್ಲಿಂದು 1020 ಜನ ಸೋಂಕಿನಿಂದ ಗುಣಮುಖ - India Covide 19

ಕೇರಳ ರಾಜ್ಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ನಿನ್ನೆ ಒಂದೇ ದಿನ 61 ಜನ ಗುಣಮುಖರಾಗಿದ್ದಾರೆ. ರಾಜ್ಯದ ಒಟ್ಟು 499 ಕೊರೊನಾ ಪ್ರಕರಣಗಳಲ್ಲಿ ಸದ್ಯ ಕೇವಲ 34 ಜನ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದೆಲ್ಲರೂ ಕೊರೊನಾ ಮುಕ್ತರಾಗಿದ್ದಾರೆ.

Covide-19
ಕೊರೊನಾ

By

Published : May 5, 2020, 9:45 AM IST

ನವದೆಹಲಿ:ಒಂದೆಡೆ ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ, ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 1020 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ಮರಳಿದ್ದಾರೆ. ನಿನ್ನೆ ಒಟ್ಟು 1074 ಜನ ಗುಣಮುಖರಾಗಿದ್ದರು. ಇದು ದೇಶದಲ್ಲಿ ಈವರೆಗಿನ ಒಂದೇ ದಿನದ ಅತಿ ಹೆಚ್ಚು ಗುಣಮುಖರ ಸಂಖ್ಯೆ. ಮತ್ತೆ ಇಂದು ಬೆಳಿಗ್ಗೆ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಂಶಗಳ ಪ್ರಕಾರ ದೇಶದಲ್ಲಿ 1020 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕಳೆದ 60ದಿನಗಳಲ್ಲಿ ದೇಶದಲ್ಲಿ ಗುಣಮುಖರಾದವರ ಸಂಖ್ಯೆ ಹೀಗಿದೆ...

ದಿನಾಂಕಗುಣಮುಖರ ಸಂಖ್ಯೆ
30-4-20 629
1-5-20 564
2-5-20 1062
3-5-20 682
4-5-20 1074
5-5-20 1020

ಇದೇ ತಿಂಗಳಲ್ಲಿ ಮೂರು ದಿನ ಒಂದು ಸಾವಿರಕ್ಕಿಂತ ಹೆಚ್ಚು ಜನ ಸೋಂಕುಮುಕ್ತರಾಗಿದ್ದು, ಜನರಲ್ಲಿ ತುಸು ಧೈರ್ಯ ತುಂಬಿದೆ.

ಕೇರಳ ರಾಜ್ಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದು, ನಿನ್ನೆ ಒಂದೇ ದಿನ 61 ಜನ ಗುಣಮುಖರಾಗಿದ್ದಾರೆ. ರಾಜ್ಯದ ಒಟ್ಟು 499 ಕೊರೊನಾ ಪ್ರಕರಣಗಳಲ್ಲಿ ಸದ್ಯ ಕೇವಲ 34 ಜನ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದೆಲ್ಲರೂ ಕೊರೊನಾ ಮುಕ್ತರಾಗಿದ್ದಾರೆ.

ಕರ್ನಾಟಕದಲ್ಲೂ ಕೊರೊನಾ ಗುಣಮುಖರ ಪ್ರಮಾಣ ಶೇ. 50ರ ಆಸುಪಾಸಿದೆ. ಒಟ್ಟು 651 ಕೊರೊನಾ ಪ್ರಕರಣಗಳಲ್ಲಿ ಈವರೆಗೆ 321 ಜನ ಗುಣಮುಖರಾಗಿದ್ದಾರೆ.

ಇನ್ನು ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3900 ಜನರಿಗೆ ಕೊರೊನಾ ಅಂಟಿಕೊಂಡಿದ್ದು, ಇದೇ ವೇಳೆ ದೇಶದಲ್ಲಿ 195 ಜನ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ, ಗುಜರಾತ್​ ಹಾಗೂ ತಮಿಳುನಾಡಿನಲ್ಲಿ ಹೆಚ್ಚು ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿದೆ.

ABOUT THE AUTHOR

...view details