ಭೋಪಾಲ್(ಮಧ್ಯಪ್ರದೇಶ):ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದೆ. ಇಲ್ಲಿಯವರೆಗೆ ಅದರ ವಿರುದ್ಧ ಹೋರಾಡಲು ಯಾವುದೇ ಲಸಿಕೆ ಕಂಡು ಹಿಡಿದಿಲ್ಲ. ಇದರ ಮಧ್ಯೆ ವಿವಿಧ ರಾಜ್ಯಗಳು ಜನರಿಗೆ ಫ್ರೀಯಾಗಿ ಲಸಿಕೆ ನೀಡುವ ಭರವಸೆ ನೀಡುತ್ತಿವೆ.
ಕೋವಿಡ್ ಲಸಿಕೆ ಸಿದ್ಧವಾಗ್ತಿದ್ದಂತೆ ತಮಿಳುನಾಡಿನ ಎಲ್ಲರಿಗೂ ಉಚಿತ ವಿತರಣೆ: ಪಳನಿಸ್ವಾಮಿ ಅಭಯ!
ಬಿಹಾರ ಚುನಾವಣೆಗೋಸ್ಕರ ಭಾರತೀಯ ಜನತಾ ಪಾರ್ಟಿ ಪ್ರಣಾಳಿಕೆ ರಿಲೀಸ್ ಮಾಡಿದ್ದು, ಅದರಲ್ಲಿ ರಾಜ್ಯದ ಜನರಿಗೆ ಕೋವಿಡ್ ಲಸಿಕೆ ಉಚಿತವಾಗಿ ನೀಡುವ ಭರವಸೆ ನೀಡಿದೆ. ಇದರ ಮಧ್ಯೆ ತಮಿಳುನಾಡಿನಲ್ಲೂ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಕೋವಿಡ್ ಲಸಿಕೆ ರಿಲೀಸ್ ಆಗುತ್ತಿದ್ದಂತೆ ರಾಜ್ಯದ ಜನರಿಗೆ ಉಚಿತವಾಗಿ ಲಸಿಕೆ ನೀಡುವ ಘೋಷಣೆ ಮಾಡಿದ್ದಾರೆ.
ಇದೀಗ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕೂಡ ರಾಜ್ಯದ ಜನರಿಗೆ ಕೊರೊನಾ ಲಸಿಕೆ ಫ್ರೀಯಾಗಿ ನೀಡುವ ಭರವಸೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಶಿವರಾಜ್ ಸಿಂಗ್ ಚೌಹಾಣ್, ಕೋವಿಡ್ ವಿರುದ್ಧ ಹೋರಾಡಲು ಅನೇಕ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿ ಕೊರೊನಾ ಇದೀಗ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ.
ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ತಯಾರಿ ಕಾರ್ಯ ದೇಶದಲ್ಲಿ ಭರದಿಂದ ಸಾಗಿದ್ದು, ಲಸಿಕೆ ರಿಲೀಸ್ ಆಗುತ್ತಿದ್ದಂತೆ ಮಧ್ಯಪ್ರದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.