ಮುಂಬೈ:ದೇಶಾದ್ಯಂತ ನಾಳೆಯಿಂದ ಅನ್ಲಾಕ್ 5.0 ಜಾರಿಗೊಳ್ಳಲಿದ್ದು, ಕೇಂದ್ರ ಸರ್ಕಾರ ಮತ್ತಷ್ಟು ಸಡಿಲಿಕೆ ಮಾಡಿ ದೇಶದ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಇದರ ಮಧ್ಯೆ ಮಹಾರಾಷ್ಟ್ರದಲ್ಲಿ ಅಕ್ಟೋಬರ್ 31ರವರೆಗೆ ಲಾಕ್ಡೌನ್ ಹೇರಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರಮುಖವಾಗಿ ಹೋಟೆಲ್, ಫುಡ್ ಕೋರ್ಟ್, ಬಾರ್ & ರೆಸ್ಟೋರೆಂಟ್ ಓಪನ್ ಮಾಡಲು ಅವಕಾಶ ನೀಡಲಾಗಿದ್ದು, ಅಕ್ಟೋಬರ್ 5ರಿಂದ ಶೇ.50ರಷ್ಟು ಜನರಿಗೆ ಅವಕಾಶ ನೀಡುವ ಮೂಲಕ ರೀ ಓಪನ್ ಮಾಡಬಹುದಾಗಿದೆ.
ಅನ್ಲಾಕ್ 5.0 ಗೈಡ್ಲೈನ್ಸ್ ರಿಲೀಸ್: ಚಿತ್ರಮಂದಿರ, ಮಲ್ಟಿಪ್ಲೆಕ್ಸ್, ಈಜುಕೊಳ ಓಪನ್!
ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ 1.4 ಮಿಲಿಯನ್ ಕೊರೊನಾ ಕೇಸ್ ಕಾಣಿಸಿಕೊಂಡಿದ್ದು, 36,662 ಜನರು ಸಾವನ್ನಪ್ಪಿದ್ದಾರೆ. ಸದ್ಯ 2,60,000 ಸ್ರಕಿಯ ಪ್ರಕರಣಗಳಿದ್ದು, 1,088,322 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಅಕ್ಟೋಬರ್ 15 ರಿಂದ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ಗಳು, ಈಜುಕೊಳ ಭಾಗಶಃ ಓಪನ್ ಮಾಡಲು ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಶೇ. 50ರಷ್ಟು ಪ್ರೇಕ್ಷಕರಿಗೆ ಸಿನಿಮಾ ಹಾಲ್ಗಳಲ್ಲಿ ಅವಕಾಶ ನೀಡಿದೆ.