- ಮಹಾರಾಷ್ಟ್ರದಲ್ಲಿ ಒಂದೇ ದಿನ 2,347 ಕೊರೊನಾ ಪ್ರಕರಣಗಳು ಪತ್ತೆ
- ಕೊರೊನಾ ಸೋಂಕಿತರ ಸಂಖ್ಯೆ33,053ಕ್ಕೆ ಏರಿಕೆ
- ಕೊರನಾದಿಂದ ಇಂದು ಮಹಾರಾಷ್ಟ್ರದಲ್ಲಿ 63 ಜನ ಸಾವು
- ಮಹಾರಾಷ್ಟ್ರದಲ್ಲಿ ಇಂದು 600 ಸೋಂಕಿತರು ಗುಣಮುಖ
ಮಹಾರಾಷ್ಟ್ರದಲ್ಲಿ ಒಂದೇ ದಿನ 2,347 ಕೊರೊನಾ ಪ್ರಕರಣಗಳು ಪತ್ತೆ
20:31 May 17
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ33,053ಕ್ಕೆ ಏರಿಕೆ
19:28 May 17
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ್ರೆ ದಂಡ
- ಸಾರ್ವಜನಿಕ ಸ್ಥಳ,ವಾಹನಗಳಲ್ಲಿ ಸಾಮಾಜಿಕ ಅಂತರ
- ಮೈದಾನದಲ್ಲಿ ಪ್ರೇಕ್ಷಕರಿಲ್ಲದ ಕ್ರೀಡಾಕೂಟಕ್ಕೆ ಅವಕಾಶ
- ಕಂಟೇನ್ಮೆಂಟ್ ಜೋನ್ಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿ
- ಶಾಲೆ-ಕಾಲೇಜುಗಳು ತೆರೆಯುವಂತಿಲ್ಲ
19:15 May 17
ಲಾಕ್ಡೌನ್ 4.O ಮಾರ್ಗಸೂಚಿ ಬಿಡುಗಡೆ
- 10 ವರ್ಷದೊಳಗಿನವರು ಮನೆಯಿಂದ ಹೊರ ಬರುವಂತಿಲ್ಲ
- 50 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರ ಬರುವಂತಿಲ್ಲ
- ಮನೆ ಮನೆಗಳಲ್ಲಿ ಆರೋಗ್ಯ ಸರ್ವೆ ಮಾಡಬೇಕು
- ಎಲ್ಲರಿಗೂ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ
- ಶಾಲಾ, ಕಾಲೇಜು ಚಿತ್ರಮಂದಿರಗಳು ಬಂದ್
- ಪರಿಸ್ಥಿತಿ ಅವಲೋಕಿಸಿ ನಿರ್ಬಂಧ ವಿಧಿಸುವಿಕೆಗೆ ಅವಕಾಶ
- ಅಂತ್ಯಸಂಸ್ಕಾರಗಳಲ್ಲಿ ಕೇವಲ 20 ಮಂದಿ ಭಾಗವಹಿಸುವಿಕೆಗೆ ಮಾತ್ರ ಅವಕಾಶ
- ಮದುವೆ ಸಮಾರಂಭಕ್ಕೆ 50 ಜನರಿಗೆ ಮಾತ್ರ ಭಾಗಿಯಾಗಲು ಅವಕಾಶ
- ರೆಡ್,ಆರಂಜ್,ಗ್ರೀನ್ ಝೋನ್ಗಳನ್ನು ಜಿಲ್ಲಾಡಳಿತವೇ ನಿರ್ಧರಿಸಬೇಕು
- ಅಂತಾರಾಜ್ಯ ಸಂಚಾರಕ್ಕೆ ವೈದ್ಯರಿಗೆ ಅವಕಾಶ
- ಮೆಟ್ರೋ ಸಂಚಾರಕ್ಕೆ ಅವಕಾಶವಿಲ್ಲ
- ರಾಜ್ಯದೊಳಗಿನ ಸಾರಿಗೆ ವ್ಯವಸ್ಥೆ ಬಗ್ಗೆ ರಾಜ್ಯ ಸರ್ಕಾರವೇ ನಿರ್ಧರಿಸಬೇಕು
- ಮದ್ಯ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ
18:41 May 17
ತಮಿಳುನಾಡಿನಲ್ಲಿ ಇಂದು ಬರೋಬ್ಬರಿ 639 ಕೊರೊನಾ ಕೇಸ್ ಪತ್ತೆ, ನಾಲ್ವರು ಬಲಿ
- ತಮಿಳುನಾಡಿನಲ್ಲಿ ಇಂದು ಬರೋಬ್ಬರಿ 639 ಕೊರೊನಾ ಕೇಸ್ ಪತ್ತೆ, ನಾಲ್ವರು ಬಲಿ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11,224ಕ್ಕೆ ಏರಿಕೆ
- ಈವರೆಗೆ ಒಟ್ಟು 78 ಮಂದಿ ಸಾವು
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
18:15 May 17
ರಾಷ್ಟ್ರಪತಿ ಭವನದ ಮತ್ತೊಬ್ಬ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ರಾಷ್ಟ್ರಪತಿ ಭವನದ ಮತ್ತೊಬ್ಬ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಭವನಕ್ಕೆ ನಿಯೋಜನೆಗೊಂಡಿದ್ದ ಎಸಿಪಿಗೆ ಸೋಂಕು
- ಇತರ ಪೊಲೀಸ್ ಸಿಬ್ಬಂದಿ ಹಾಗೂ ರಾಷ್ಟ್ರಪತಿ ನಿವಾಸದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ
- ಕಳೆದ ತಿಂಗಳು ರಾಷ್ಟ್ರಪತಿ ಭವನದ ಸಿಬ್ಬಂದಿಯ ಸಂಬಂಧಿಕರೊಬ್ಬರಿಗೆ ಸೋಂಕು ತಗುಲಿತ್ತು
16:52 May 17
ದೇಶಾದ್ಯಂತ ಮೇ 31ರ ವರೆಗೆ ಲಾಕ್ಡೌನ್ ವಿಸ್ತರಣೆ
- ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ
- ದೇಶಾದ್ಯಂತ ಮೇ 31ರ ವರೆಗೆ ಲಾಕ್ಡೌನ್ ವಿಸ್ತರಣೆ
- ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಿರುವ ಕೇಂದ್ರ ಸರ್ಕಾರ
15:32 May 17
ಕಳೆದ 24 ಗಂಟೆಗಳಲ್ಲಿ 10 ಮಂದಿ BSF ಸಿಬ್ಬಂದಿಗೆ ಸೋಂಕು
- ಕಳೆದ 24 ಗಂಟೆಗಳಲ್ಲಿ 10 ಮಂದಿ BSF ಸಿಬ್ಬಂದಿಗೆ ಸೋಂಕು
- ಸೋಂಕಿತ ಸಿಬ್ಬಂದಿಗೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ
- ನಿನ್ನೆಯಿಂದ 13 ಸಿಬ್ಬಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್
- ಗಡಿ ಭದ್ರತಾ ಪಡೆ ಅಧಿಕಾರಿಗಳಿಂದ ಮಾಹಿತಿ
15:26 May 17
ಬಿಹಾರ್ನಲ್ಲಿ 560 ವಲಸೆ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್
- ಬಿಹಾರ್ನಲ್ಲಿ 560 ವಲಸೆ ಕಾರ್ಮಿಕರಿಗೆ ಕೊರೊನಾ ಪಾಸಿಟಿವ್
- ಈವರೆಗೆ ಒಟ್ಟು 10,385 ಕಾರ್ಮಿಕರ ಪೈಕಿ 560 ಮಂದಿಗೆ ಸೋಂಕು
- ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
15:13 May 17
ಕೊರೊನಾ ಭೀತಿ: ಛತ್ತೀಸ್ಗಢದಲ್ಲಿ 3,418 ಕೈದಿಗಳ ಬಿಡುಗಡೆ
- ಕೊರೊನಾ ಭೀತಿ ಹಿನ್ನೆಲೆ
- ಛತ್ತೀಸ್ಗಢದಲ್ಲಿ 3,418 ಕೈದಿಗಳ ಬಿಡುಗಡೆ
- ಬೇಲ್ ಮತ್ತು ಪರೋಲ್ ಮೇಲೆ ಬಿಡುಗಡೆ
15:09 May 17
ಮೇ 31ರ ವರೆಗೆ ತಮಿಳುನಾಡಿನಲ್ಲಿ ಲಾಕ್ಡೌನ್ ವಿಸ್ತರಣೆ
- ಮೇ 31ರ ವರೆಗೆ ತಮಿಳುನಾಡಿನಲ್ಲಿ ಲಾಕ್ಡೌನ್ ವಿಸ್ತರಣೆ
- ಲಾಕ್ಡೌನ್ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ
14:51 May 17
ರಾಜಸ್ಥಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5083ಕ್ಕೆ ಏರಿಕೆ
- ರಾಜಸ್ಥಾನದಲ್ಲಿ ಇಂದು ಮಧ್ಯಾಹ್ನ 2 ಗಂಟೆಯೊಳಗೆ 123 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5083ಕ್ಕೆ ಏರಿಕೆ
- 1963 ಕೇಸ್ಗಳು ಸಕ್ರಿಯ
- ಈವರೆಗೆ ಒಟ್ಟು 128 ಮಂದಿ ಸಾವು
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
13:25 May 17
ಮಹಾರಾಷ್ಟ್ರದಲ್ಲಿ ಮೇ 31 ರವರೆಗೆ ಲಾಕ್ಡೌನ್ ಅವಧಿ ವಿಸ್ತರಣೆ
- ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ
- ಮೇ 31 ರವರೆಗೆ ಲಾಕ್ಡೌನ್ ಅವಧಿ ವಿಸ್ತರಣೆ
- ರಾಜ್ಯ ಸರ್ಕಾರದಿಂದ ತೀರ್ಮಾನ
13:25 May 17
ಮಹಾರಾಷ್ಟ್ರದಲ್ಲಿ ಇಂದು 66 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು
- ಮಹಾರಾಷ್ಟ್ರದಲ್ಲಿ ಇಂದು 66 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು
- ಈವರೆಗೆ 1206 ಪೊಲೀಸ್ ಸಿಬ್ಬಂದಿಗೆ ತಗುಲಿರುವ ವೈರಸ್
- ಈ ಪೈಕಿ 283 ಮಂದಿ ಗುಣಮುಖ, 912 ಪ್ರಕರಣ ಸಕ್ರಿಯ
13:08 May 17
ಮಂಡ್ಯದಲ್ಲೇ ಇಂದು 22 ಕೇಸ್..!
- ರಾಜ್ಯದಲ್ಲಿ ಇಂದು 54 ಕೊರೊನಾ ಪ್ರಕರಣಗಳು ಪತ್ತೆ
- ಇದರಲ್ಲಿ ಮಂಡ್ಯದಲ್ಲೇ 22 ಕೇಸ್, ಕಲಬುರಗಿಯಲ್ಲಿ 10 ಮಂದಿ ಸೋಂಕಿತರು
- ಉಳಿದಂತೆ ಹಾಸನ-6, ಧಾರವಾಡ- 4 ಕೇಸ್
- ಯಾದಗಿರಿ ಹಾಗೂ ಕೋಲಾರದಲ್ಲಿ ತಲಾ 3 ಕೇಸ್
- ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ತಲಾ 2 ಕೇಸ್
- ಉಡುಪಿ, ವಿಜಯಪುರದಲ್ಲಿ ತಲಾ ಒಂದು ಪ್ರಕರಣ ಪತ್ತೆ
12:57 May 17
ರಾಜ್ಯದಲ್ಲಿ ಇಂದು ಒಂದೇ ದಿನ 54 ಹೊಸ ಸೋಂಕಿತರು ಪತ್ತೆ, ಓರ್ವ ಸಾವು
- ರಾಜ್ಯದಲ್ಲಿ ಇಂದು ಒಂದೇ ದಿನ 54 ಹೊಸ ಸೋಂಕಿತರು ಪತ್ತೆ, ಓರ್ವ ಸಾವು
- ಉಡುಪಿಯಲ್ಲಿ 54 ವರ್ಷದ ವ್ಯಕ್ತಿ ಸಾವು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1146ಕ್ಕೆ ಏರಿಕೆ
- ಮೃತರ ಸಂಖ್ಯೆ 37ಕ್ಕೆ ಏರಿಕೆ
- ಒಟ್ಟು ಸೋಂಕಿತರ ಪೈಕಿ 497 ಮಂದಿ ಗುಣಮುಖ, 611 ಕೇಸ್ಗಳು ಆ್ಯಕ್ಟಿವ್
10:11 May 17
ಒಡಿಶಾದಲ್ಲಿ ಇಂದು 91 ಹೊಸ ಕೇಸ್ಗಳು ಪತ್ತೆ
- ಒಡಿಶಾದಲ್ಲಿ ಇಂದು 91 ಹೊಸ ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 828ಕ್ಕೆ ಏರಿಕೆ
- ಈವರೆಗೆ ಐವರು ಬಲಿ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
09:42 May 17
ಬಿಹಾರದಲ್ಲಿ ಒಂದು ವರ್ಷದ ಮಗು, ಐವರು ಪೊಲೀಸ್ ಸಿಬ್ಬಂದಿಗೆ ಕೊರೊನಾ
- ಬಿಹಾರದಲ್ಲಿ ನಿನ್ನೆ ಒಂದೇ ದಿನ 66 ಸೋಂಕಿತರು ಪತ್ತೆ
- ಒಂದು ವರ್ಷದ ಮಗು, ಐವರು ಪೊಲೀಸ್ ಸಿಬ್ಬಂದಿಗೂ ಅಂಟಿದ ಕೊರೊನಾ
- ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 1145ಕ್ಕೆ ಏರಿಕೆ
- ಪಾಟ್ನಾ ಉನ್ನತ ಅಧಿಕಾರಿಗಳಿಂದ ಮಾಹಿತಿ
09:12 May 17
ಕೊರೊನಾ ಅಬ್ಬರಕ್ಕೆ ದೇಶದಲ್ಲಿ 2,872 ಮಂದಿ ಸಾವು... ಸೋಂಕಿತರ ಸಂಖ್ಯೆ 90,927ಕ್ಕೆ ಏರಿಕೆ
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ 4,987 ಕೇಸ್ಗಳು ಪತ್ತೆ, 120 ಮಂದಿ ಬಲಿ
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 90,927ಕ್ಕೆ, ಸಾವಿನ ಸಂಖ್ಯೆ 2,872ಕ್ಕೆ ಏರಿಕೆ
- ಸೋಂಕಿತರ ಪೈಕಿ 34,109 ಮಂದಿ ಗುಣಮುಖ, 53,946 ಕೇಸ್ಗಳು ಆ್ಯಕ್ಟಿವ್
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ