ಶಿಮ್ಲಾ (ಎಚ್ಪಿ) / ಲೇಹ್ (ಲಡಾಖ್) / ಮಲ್ಲಾಪುರಂ (ಕೇರಳ):ಕೋವಿಡ್ -19 ವಿರುದ್ಧ ಭಾರತ ಜ. 16 ರಂದು ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಜ್ಜಾಗುತ್ತಿದ್ದು, ಪುಣೆಯ ಸೀರಮ್ ಸಂಸ್ಥೆ ತಯಾರಿಸಿದ ಲಕ್ಷಾಂತರ ಡೋಸ್ ಕೋವಿಶೀಲ್ಡ್ ಲಸಿಕೆ ಭಾರತ ದೇಶಾದ್ಯಂತ ತಲುಪಿದೆ.
ಪುಣೆಯ ಸೀರಮ್ ಸಂಸ್ಥೆಯಿಂದ ಮೊದಲ ರವಾನೆಯ ಭಾಗವಾಗಿ ಹಿಮಾಚಲ ಪ್ರದೇಶವು ಗುರುವಾರ ಸಂಜೆ 93,000 ಕೋವಿಡ್ ಲಸಿಕೆ ಡೋಸ್ ಸ್ವೀಕರಿಸಿದೆ. ಈ ಪ್ರದೇಶ ಸದ್ಯ 800 ಸಕ್ರಿಯ ಪ್ರಕರಣ ಹೊಂದಿದ್ದು, ಹಿಮಾಚಲ ಪ್ರದೇಶ ಸೋಂಕು ಮುಕ್ತವಾಗಲಿದೆ.
ಕೇರಳ ರಾಜ್ಯ ಹೆಚ್ಚುತ್ತಿರುವ ಸೋಂಕು ಪ್ರಕರಣಗಳನ್ನು ನಿಯಂತ್ರಣದಲ್ಲಿಡಲು ಹರಸಾಹಸ ಪಡುತ್ತಿದ್ದು, ಲಸಿಕೆಯ ಮೊದಲ ಬ್ಯಾಚ್ ಅನ್ನು ಮಲ್ಲಾಪುರಂನಲ್ಲಿ ಸ್ವೀಕರಿಸಿದೆ. ದಕ್ಷಿಣ ರಾಜ್ಯವು 65,000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ಇದು ದೇಶದಲ್ಲೇ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಪ್ರದೇಶ ಎಂದು ವರದಿಯಾಗಿದೆ.